ಅಕ್ರಮ ಶಸ್ತ್ರಾಸ್ತ್ತ : ಐವರ ವಿರುದ್ದ ಕೋಕಾ ಪ್ರಕರಣ

Spread the love

ಅಕ್ರಮ ಶಸ್ತ್ರಾಸ್ತ್ತ : ಐವರ ವಿರುದ್ದ ಕೋಕಾ ಪ್ರಕರಣ

ಬೆಂಗಳೂರು: ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದ ಮೇಲೆ ನಗರದ ಐವರು ರೌಡಿಶೀಟರ್ ವಿರುದ್ದ ಕೋಕಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.

ಮೋಹನ್​ ಕುಮಾರ್​ ಅಲಿಯಾಸ್​ ಡಬಲ್​ ಮೀಟರ್​ ಮೋಹನಾ, ನಾಗರಾಜ್​ ಅಲಿಯಾಸ್​ ವಿಲ್ಸನ್​ ಗಾರ್ಡನ್​ ನಾಗಾ, ಪ್ರಮೋದ್​ ಅಲಿಯಾಸ್​ ಕರಿಯಪ್ಪ, ಸುನೀಲ್​ ಕುಮಾರ್​ ಅಲಿಯಾಸ್​ ಸೈಲೆಂಟ್​ ಸುನೀಲಾ ಕೆ.ಎಸ್​. ರೋಹಿತ್​ ಅಲಿಯಾಸ್​ ಒಂಟೆ ವಿರುದ್ಧ ಪ್ರಕರಣ ದಾಖಲಾಗಿದೆ.

ಫೆ 3 ರಂದು ಯಲಹಂಕದ ಕೋಗಿಲು ಗೇಟ್ ಸಿಗ್ನಲ್ ನಲ್ಲಿ ನಡೆದಿದ್ದ ಕಾಂಗ್ರೆಸ್ ಮುಖಂಡ ಕಡಬಗೆರೆ ಶ್ರೀನಿವಾಸ್ ಮೇಲಿನ ಶೂಟೌಟ್ ಪ್ರಕರಣದ ಹಿನ್ನಲೆಯಲ್ಲಿ ಬೆನ್ನತ್ತಿದ್ದ ಯಲಹಂಕ ಪೋಲಿಸರು, ರೌಡಿಶೀಟರ್ ಮೋಹನ, ಮತ್ತು ಸಹಚರರನ್ನು ಬಂಧಿಸಿದ ವೇಳೆ ಬಂಧಿತರಿಂದ ಬಳಿಯಿಂದ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಎರಡು ರಿವಾಲ್ವರ್ ಮತ್ತು ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದರು, ಬಂಧಿತರ ವಿಚಾರಣೆ ವೇಳೆ ತಮ್ಮ ತಾವು ಸೈಲೆಂಟ್ ಸುನಿಲ ಮತ್ತು ಒಂಟೆ ರೋಹಿತ್ ಸಹಚರರು ಎಂದು ಹೇಳಿಕೊಂಡಿದ್ದರು, ಈ ಹಿನ್ನಲೆಯಲ್ಲಿ ಐವರ ವಿರುದ್ದ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ,

ಕೋಕಾ ಜಾರಿಯಾದ ಬಳಿಕ ಈ ಕಾಯ್ದೆ ಅಡಿಯಲ್ಲಿ ನಗರ ಪೋಲಿಸ್ ಕಮೀಷನರೆಟ್ ಅಡಿಯಲ್ಲಿ ಇದುವರೆಗೆ ಕೇವಲ ಎರಡು ಪ್ರಕರಣಗಳಲ್ಲಿ ಅರೋಪಿಗಳನ್ನು ಬಂಧಿಸಲಾಗಿತ್ತು. ಕೆ ಆರ್ ಪುರಂನಲ್ಲಿ ನಡೆದಿದ್ದ ಬಿಜೆಪಿ ಮಾಜಿ ಕಾರ್ಪೋರೇಟರ್ ಪತಿ ಶ್ರೀನಿವಾಸ್ ಅವರ ಹತ್ಯೆ ಆರೋಪಿಗಳ ವಿರುದ್ದ ಮೊದಲ ಬಾರಿಗೆ ಕೋಕಾ ಜಾರಿಯಾಗಿದ್ದರೆ ಕಳೆದ ವರ್ಷ ಇಡೀ ರಾಜ್ಯದ ಗಮನಸೆಳೆದಿದ್ದ ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಪ್ರಮುಖ ಆರೋಪಿ ಶಿವಕುಮಾರ್ ವಿರುದ್ದವೂ ಈ ಅಸ್ತ್ರವನ್ನು ಬಳಸಲಾಗಿತ್ತು, ಸದ್ಯ ಐದು ಮಂದಿ ಆರೋಪಿಗಳ 40 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದಾರೆ.


Spread the love