ರಾಮಕೃಷ್ಣ ಮಿಷನ್ ಸ್ವಚ್ಚ ಮಂಗಳೂರು ಹತ್ತನೇ ವಾರದ ವರದಿ

Spread the love

ರಾಮಕೃಷ್ಣ ಮಿಷನ್ ಸ್ವಚ್ಚ ಮಂಗಳೂರು ಹತ್ತನೇ ವಾರದ ವರದಿ

ಮಂಗಳೂರು: ಡಿಸೆಂಬರ್ 18ರಂದು ಮಂಗಳೂರಿನ ನಲವತ್ತು ಬೇರೆ ಬೇರೆ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ 7 :30 ಕ್ಕೆ ಸಾಂಕೇತಿಕವಾಗಿ ಎಲ್ಲ ಸ್ವಚ್ಛತಾ ಕಾರ್ಯಕ್ರಮಗಳಿಗೆ ರಾಮಕೃಷ್ಣ ಮಠದ ಆವರಣದಲ್ಲಿ ಚಾಲನೆ ನೀಡಲಾಯಿತು. ಚನೈ ರಾಮಕೃಷ್ಣ ಮಿಶನ್ ಕಾರ್ಯದರ್ಶಿ ಸ್ವಾಮಿ ಸತ್ಯಜ್ಞಾನಾನಂದಜಿ ಹಾಗೂ ಗದಗ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ನಿರ್ಭಯಾನಂದಜಿ ಜಂಟಿಯಾಗಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸ್ವಾಮಿ ಜಿತಕಾಮಾನಂದಜಿ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅಭಿಯಾನದ ಪ್ರಧಾನ ಸಂಯೋಜಕರಾದ ಶ್ರೀ ದಿಲ್ ರಾಜ್ ಆಳ್ವ , ಶ್ರೀ ಉಮಾನಾಥ ಕೋಟೆಕಾರ ಮತ್ತಿತರರು ಉಪಸ್ಥಿತರಿದ್ದರು.

ಮಠದ ಆವರಣದಲ್ಲಿ ಶ್ರೀ ಅಂಬಾಮಹೆಶ್ವರಿ ಭಜನಾ ಮಂಡಳಿ ತಂಡ, ಶ್ರೀಶಾರದಾ ಮಹಿಳಾ ವೃಂದ, ನಿವೇದಿತಾ ಬಳಗ, ಮಂಕಿಸ್ಟಾಂಡ್ ಫ್ರೆಂಡ್ಸ್, ಜೆಪ್ಪು ಗೆಳೆಯರ ಬಳಗ, ಹಿಂದೂ ವಾರಿಯರ್ಸ್ ತಂಡ, ಆಗ್ನೇಸ್ ಕಾಲೇಜಿನ ವಿದ್ಯಾರ್ಥಿಗಳು, ಭಗಿನಿ ಸಮಾಜದ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ಎಂಟು ಸ್ವಚ್ಛತಾ ತಂಡಗಳಿಗೆ ಚಾಲನೆ ನೀಡಲಾಯಿತು. ತದನಂತರ ಕಾರ್ಯಕರ್ತರು ಮಂಗಳಾನಗರ, ಮಂಗಳಾದೇವಿ ರಥಬೀದಿ, ಜೆಪ್ಪು ಮಾರ್ಕೆಟ್, ಮುಳಿಹಿತ್ಲು, ಮಂಕಿಸ್ಟಾಂಡ, ಎಮ್ಮೆಕೆರೆ ಮತ್ತಿತರ ಸ್ಥಳಗಳಲ್ಲಿ ಸ್ವಚ್ಛತೆಯ ಕೈಂಕರ್ಯ ಕೈಗೊಳ್ಳಲಾಯಿತು.

ವಿಶೇಷ: ವರ್ಣೋಧರ ಡಾ. ಪ್ರದೀಪ ಮತ್ತು ಅವರ ಕಲಾತಂಡದವರು ಈ ವಾರದ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶೇಷರೂಪದಲ್ಲಿ ಸ್ವಚ್ಛ ಮಂಗಳೂರಿಗಾಗಿ ಶ್ರಮವಹಿಸಿದರು. ಕಳೆದ ಕೆಲವಾರು ವರ್ಷಗಳಿಂದ ಹಾಳಾಗಿ ಬಿದ್ದು ತುಕ್ಕು ಹಿಡಿದಿದ್ದ ದೊಡ್ದದಾದ ರೊಲರ್ ಜೆಪ್ಪು ಉದ್ಯಾನವನದ ಮುಂದೆ ನಿಷ್ಪ್ರಯೋಜಕವಾಗಿ ಬಿದ್ದಿತ್ತು. ಅದನ್ನು ಕಳೆದ ಎರಡು ದಿನಗಳಿಂದ ಶುಚಿಗೊಳಿಸಿ ಅಂದವಾಗಿ ಅದರ ಮೇಲೆ ಕಲಾಕೃತಿಯನ್ನು ರಚಿಸಿದ್ದಾರೆ. ಅನೇಕ ದೇಶಗಲಲ್ಲಿ ಸದ್ಯ ಪ್ರಚಲಿತದಲ್ಲಿರುವ ಇನ್ಸ್ಟಾಲೇಶನ್ ಆರ್ಟ್ ನ್ನು ಇಂದಿಲ್ಲಿ ನಿರ್ಮಿಸಿ ಸೆಲ್ಫಿ ಸ್ಪಾಟ್ ಆಗಿ ರೂಪಿಸಿದ್ದಾರೆ. ಅನೇಕ ಯುವಕ ಯುವತಿಯರು ಆಕಷ್ರಿತರಾಗುತ್ತಿರುವುದು ಕಂಡುಬಂತು. ಕಸದಿಂದ ರಸ ಎಂಬಂತೆ ಇಂದು ಈ ಕಲಾಕೃತಿಯನ್ನು ರಚಿಸಲಾಯಿತು.

image001ramakrishna-mission-swacch-mangaluru-abhiyan-20161220-001 image002ramakrishna-mission-swacch-mangaluru-abhiyan-20161220-002 image003ramakrishna-mission-swacch-mangaluru-abhiyan-20161220-003 image004ramakrishna-mission-swacch-mangaluru-abhiyan-20161220-004 image005ramakrishna-mission-swacch-mangaluru-abhiyan-20161220-005 image006ramakrishna-mission-swacch-mangaluru-abhiyan-20161220-006 image007ramakrishna-mission-swacch-mangaluru-abhiyan-20161220-007 image008ramakrishna-mission-swacch-mangaluru-abhiyan-20161220-008 image009ramakrishna-mission-swacch-mangaluru-abhiyan-20161220-009 image010ramakrishna-mission-swacch-mangaluru-abhiyan-20161220-010 image011ramakrishna-mission-swacch-mangaluru-abhiyan-20161220-011 image012ramakrishna-mission-swacch-mangaluru-abhiyan-20161220-012 image013ramakrishna-mission-swacch-mangaluru-abhiyan-20161220-013 image014ramakrishna-mission-swacch-mangaluru-abhiyan-20161220-014 image015ramakrishna-mission-swacch-mangaluru-abhiyan-20161220-015 image016ramakrishna-mission-swacch-mangaluru-abhiyan-20161220-016 image017ramakrishna-mission-swacch-mangaluru-abhiyan-20161220-017 image018ramakrishna-mission-swacch-mangaluru-abhiyan-20161220-018 image019ramakrishna-mission-swacch-mangaluru-abhiyan-20161220-019 image020ramakrishna-mission-swacch-mangaluru-abhiyan-20161220-020 image021ramakrishna-mission-swacch-mangaluru-abhiyan-20161220-021 image022ramakrishna-mission-swacch-mangaluru-abhiyan-20161220-022 image023ramakrishna-mission-swacch-mangaluru-abhiyan-20161220-023 image024ramakrishna-mission-swacch-mangaluru-abhiyan-20161220-024 image025ramakrishna-mission-swacch-mangaluru-abhiyan-20161220-025 image026ramakrishna-mission-swacch-mangaluru-abhiyan-20161220-026 image027ramakrishna-mission-swacch-mangaluru-abhiyan-20161220-027 image028ramakrishna-mission-swacch-mangaluru-abhiyan-20161220-028 image029ramakrishna-mission-swacch-mangaluru-abhiyan-20161220-029

ಕೊಟ್ಟಾರ ಚೌಕಿಯಲ್ಲಿ ವಿಶೇಷ ರೂಪದಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಕಿರಣ ಜಿಮ್ ಫ್ರೆಂಡ್ಸ್ ಕಳೆದ ಮೂರು ದಿನಗಳಿಂದ ಸಚ್ಛತಾ ಅಭಿಯಾನಕ್ಕೆ ತಯಾರಿ ನಡೆಸಿದ್ದರು. ಭಾನುವಾರ ಬೆಳಿಗ್ಗೆ 7 ಗಂಟೆಗೆ ಮಾಜೆ ಮೇಯರ್ ಶ್ರೀ ಶಶಿಧರ ಹೆಗ್ಡೆ ಅಭಿಯಾನಕ್ಕೆ ಚಾಲನೆ ನೀಡಿದರು. ನಂತರ ಕೊಟ್ಟಾರ ಚೌಕಿ ಮೇಲ್ಸೇತುವೆಯ ಬೃಹದಾಕಾರದ ಕಂಬಗಳನ್ನು ಸ್ವಚ್ಛಗೊಳಿಸಿ ಕಳೆದ ಬಾರಿಯಂತೆ ಶ್ರೀಯಶವಂತ ಆಚಾರ್ ಹಾಗೂ ಚಿತ್ತರಂಜನ ಮಾರ್ಗದರ್ಶನದಲ್ಲಿ ಅವರ ಗೆಳೆಯರು ಅತ್ತ್ಯುತ್ತಮ ಮಟ್ಟದ ಕಲಾಕೃತಿಯನ್ನು ರಚಿಸಿದರು. ಅದರ ಬದಿಯಲ್ಲಿ ತ್ಯಾಜ್ಯ ಬೀಳುತ್ತಿದ್ದ ಸ್ಥಳವನ್ನು ಸಮತಟ್ಟು ಮಾಡಿ ಪುಟ್ಟ ಗೊಡೆಯನ್ನು ಕಟ್ಟಿ ಅದರ ಮೇಲೆ ಸ್ವಚ್ಛತೆಯ ಜಾಗೃತಿಯ ಕಲಾಕೃತಿಯನ್ನು ರಚಿಸಿದ್ದಾರೆ. ಈದೀಗ ಮಂಗಳೂರಿಗೆ ಪ್ರವೇಶಿಸುವ ಕೊಟ್ಟಾರ ಚೌಕಿ ಸುಂದರವಾಗುವತ್ತ ಹೆಜ್ಜೆ ಇಡುತ್ತಿದೆ. ಶ್ರೀಕಿರಣಕುಮಾರ ಅಭಿಯಾನದ ನೇತೃತ್ವ ವಹಿಸಿದ್ದರು.

* ಅತ್ತಾವರ ಸ್ವಚ್ಛತಾ ಬಳಗದಿಂದ ಶ್ರೀ ಚಕ್ರಪಾಣಿ ದೇವಸ್ಥಾನದ ಬಳಿ ಹಾಗೂ ಅತ್ತಾವರ ಕಟ್ಟೆಯ ಸುತ್ತಮುತ್ತ ಸ್ವಚ್ಛತೆಯನ್ನು ಕೈಗೊಳ್ಳಲಾಯಿತು. ಚಕ್ರಪಾಣಿ ದೇವಲದ ಭಕ್ತಾದಿಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

* ಪಂಜೆ ಮಂಗೇಶ್ ರಾವ್ ರಸ್ತೆಯಲ್ಲಿ ಶ್ರೀ ಮಹೇಶ್ ಬೊಂಡಾಲ್ ನೇತೃತ್ವದಲ್ಲಿ ಗಣಪತಿ ಪಿಯು ಕಾಲೇಜು ಹಾಗೂ ಹೈಸ್ಕೂಲ್ ವಿದ್ಯಾರ್ಥಿಗಳಿಂದ ರಸ್ತೆಯ ಎರಡೂ ಬದಿಗಲನ್ನು ಸ್ವಚ್ಛಗೊಳಿಸಲಾಯಿತು. ಅಲ್ಲದೇ ಗಣಪತಿ ಹೈಸ್ಕೂಲ್ ಆವರಣ ಗೋಡೆಗೆ ಅತ್ತ್ಯುತ್ತಮ ವಾದ ವರ್ಲಿ ಆರ್ಟ್ ಮಾಧ್ಯಮದಲ್ಲಿ ಚಿತ್ರಗಳನ್ನು ಬಿಡಿಸಲಾಗಿದೆ.

* ಶ್ರೀ ರಾಘವೇಂದ್ರ ಮಠದ ಸುತ್ತಮುತ್ತಲಿನ ರಸ್ತೆಗಳಲ್ಲಿ ಶ್ರೀಗೋಕರ್ಣ ಮಠದ ಭಕ್ತರು ಹಾಗೂ ಸಾರ್ವಜನಿಕರು ಸ್ವಚತೆಯ ಕಾರ್ಯ ಕೈಗೊಂಡರು. ಶ್ರೀ ನರೇಶ ಕಿಣಿ ಕಾರ್ಯಕ್ರಮ ಸಂಯೋಜಿಸದರು.

* ಲೈಟ್ ಹೌಸ್ ಹಿಲ್ ರಸ್ತೆಯಲ್ಲಿ ಸೇಂಟ್ ಅಲೋಶಿಯಸ್ ವಿದ್ಯಾರ್ಥಿಗಳು ಸ್ವಚ್ಛ ಮಂಗಳೂರು ಕಾರ್ಯಕ್ರಮ ಆಯೋಜಿದ್ದರು. ಮನಪಾ ಸದಸ್ಯ ಶ್ರೀ ಎ ಸಿ ವಿನಯರಾಜ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳು ಲೈಟ್ ಹೌಸ್ ಹಿಲ್ ಹಾಗೂ ಕಾಲೆಜಿನ ಸುತ್ತಮುತ್ತ ಸ್ವಚ್ಛತೆಯನ್ನು ಕೈಗೊಂಡರು.
* ರಥಬೀದಿಯಲ್ಲಿರುವ ಸರಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿ ಶ್ರಮದಾನ ಮಾಡಿದರು ಸುಮಾರು 60 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರೋ ಶೇಷಪ್ಪ ಅಮೀನ್ ವಿದ್ಯಾರ್ಥಿಗಲನ್ನು ಮಾರ್ಗದಶಿಸಿದರು.

* ಸುಲ್ತಾನ ಬತ್ತೇರಿಯಲ್ಲಿ ಆರ್ಟ್ ಆಫ್ ಲಿವೀಂಗ್ ಸದಸ್ಯರಿಂದ ಸ್ವಚ್ಛಮಂಗಳೂರು ಅಭಿಯಾನವನ್ನು ಆಯೋಜಿಸಲಾಗಿತ್ತು. ಸುಮಾರು 70 ಜನ ಸಾರ್ವಜನಿಕರು ಶ್ರೀ ಸದಾಶಿವ ಕಾಮತ ನೇತೃತ್ವದಲ್ಲಿ ಸ್ವಚ್ಛತೆ ಕೈಗೊಂಡು ಬಸ್ ತಂಗುದಾಣ ಹಾಗೂ ಮಾರ್ಗಸೂಚಕ ಫಲಕ ನವೀಕರಿಸಿದರು.
* ಟೀಂ ವಿವೇಕ ತಂದದವರು ಮಣ್ಣಗುಡ್ಡೆಯಲ್ಲಿರುವ ಕೆನರಾ ಶಾಲೆಯ ಅಕ್ಕಪಕ್ಕದ ಪ್ರದೇಶಗಲಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು.

* ಅಲ್ಪಸಂಖ್ಯಾತ ವಿದ್ಯಾರ್ಥಿನಿಯರ ವಸತಿನಿಲಯದ ಯುವತಿಯರು ಚಿಲಿಂಬಿ ಪರಿಸರದಲ್ಲಿ ಸ್ವಚ್ಛ ಮಂಗಳೂರು ಅಭಿಯಾನದಲ್ಲಿ ಕೈಜೊಡಿಸಿದರು. ಚಿಂಲಿಂಬಿ ಮುಖ್ಯ ರಸ್ತೆ ಹಾಗೂ ರಸ್ತೆವಿಭಾಜಕಗಲನ್ನು ಸ್ವಚ್ಛಗೊಳಿಸಿದರು. ಶ್ರೀ ವಿಠಲದಾಸ ಪ್ರಭು ಮಾರ್ಗದರ್ಶಿಸಿದರು.

* ನಂತೂರ ಪರಿಸರದಲ್ಲಿ ದಕ ಹವ್ಯಕ ಸಭಾ ಸದಸ್ಯರು ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡಿದ್ದರು. ಹೆದ್ದಾರಿಯ ಅಕ್ಕಪಕ್ಕದಲ್ಲಿ ಸ್ವಚ್ಚತೆ ಯನ್ನು ಕೈಗೊಂಡಿದ್ದರು. ಮನಪಾ ಸದಸ್ಯೆ ಶ್ರೀಮತಿ ರೂಪಾ ಬಂಗೇರಾ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದರು.

* ಕಪಿತಾನಿಯೊ ಪ್ರದೇಶದಲ್ಲಿ ಟೀ ಗರೋಡಿ ಯುವಕರು ಸ್ವಚ್ಛತಾ ಕಾರ್ಯವನ್ನು ಕೈಗೊಂಡರು. ತ್ಯಾಜ್ಯ ರಾಶಿರಾಶಿಯಾಗಿ ಬೀಳುತ್ತಿದ್ದ ಸ್ಥಳವನ್ನು ಪುಟ್ಟ ಗಾರ್ಡನ್ ಆಗಿ ರೂಪಿಸಲಾಗಿದೆ ಅಲ್ಲದೇ ಎರಡು ಬಸತಂಗುದಾಣಗಳನ್ನು ಶುಚಿಗೊಳಿಸಿ ಬಣ್ನ ಹಚ್ಚಿ ಅಂದಗೊಳಿಸಿದ್ದಾರೆ.

* ಮಂಗಳೂರಿನ ಪ್ರವೇಶದ್ವಾರ ಪಡೀಲ್ ವೃತ್ತದಲ್ಲಿ ಪಡೀಲ್ ನಾಗರಿಕರಿಂದ ಸ್ವಚ್ಛತಾ ಅಭಿಯಾನ ನಡೆಯಿತು. ಹೆದ್ದಾರಿ ಹಾಗೂ ಮಂಗಳೂರು ಪ್ರವೇಶವಾಗುವ ರಸ್ತೆಗಳನ್ನು ಶುಚಿಗೊಳಿಸಲಾಯಿತು. ಶ್ರೀ ಉದಯಚಂದ್ರ ಕೆ ಪಿ ಸಂಯೋಜಿಸಿದರು.

* ಎ ಬಿ ಶೆಟ್ಟಿ ವೃತ್ತದಲ್ಲಿ ಶ್ರೀರಾಮ್ ಟ್ರಾನ್ಸಪೋರ್ಟ್ ಸಿಬ್ಬಂದಿಗಳಿಂದ ಸ್ವಚ್ಛತಾ ಕಾರ್ಯ ನಡೆಯಿತು. ಕಂಪನಿಯ ಡಿಜಿಎಂ ಶ್ರೀ ಶರತ್ ಚಂದ್ರ ನೇತೃತ್ವ ವಹಿಸಿದ್ದರು.

* ಕೊಂಚಾಡಿ ಫ್ರೆಂಡ್ಸ್ ಇಂದು ಕುಂಟಿಕಾನ ಮೇಲ್ಸೆತುವೆ ಕೆಳಭಾಗದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು. ಶನಿವಾರದಿಂದಲೇ ಕಾರ್ಯ ಆರಂಭಿಸಿದ ಯುವಕರು ಕಂಬಗಳಿಗೆ ಅಂಟಿಸಿದ ಪೋಸ್ಟರಗಳನ್ನು ಕಿತ್ತು, ಶುಚಿಗೊಳಿಸಿ ಪೇಂಟ್ ಮಾಡಿದ್ದಾರೆ. ಕುಂಟಿಕಾನ ಪರಿಸರದಲ್ಲಿ ಸ್ವಚ್ಛತೆಯ ಕಾರ್ಯ ಕೈಗೊಂಡರು.

* ಸ್ವಚ್ಛ ಕಾವೂರು ತಂಡದ ಸದಸ್ಯರು ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪರಿಸರ ಹಾಗೂ ಎದುರಿನ ರಸ್ತೆಯಲ್ಲಿ ಅಭಿಯಾನ ಹಮ್ಮಿಕೊಂಡಿದ್ದರು. ಸುಮಾರು 60 ಜನ ಸಕ್ರಿಯವಾಗಿ ಭಾಗವಹಿಸಿದ್ದರು. ಶ್ರೀ ಸುಧಾಕರ ಕಾವೂರು ಸ್ವಚ್ಛತಾ ಅಭಿಯಾನವನ್ನು ಸಂಯೋಜಿಸಿದರು.
* ಮಾತೃಧಾಮ ತಂಡದ ಸದಸ್ಯರು ಹಾಗೂ ಸಾರ್ವಜನಿಕರು ಲ್ಯಾಂಡಲಿಂಕ್ಸ್ ಪ್ರದೇಶದಲ್ಲಿ ಸ್ವಚ್ಛತೆ ಮಾಡಿದರು. ನಿರುಪಯುಕ್ತವಾಗಿದ್ದ ಮಕ್ಕಳು ಆಟವಾಡುವ ಪುಟ್ಟ ಆಟದ ಮೈದಾನ ಹಾಗೂ ಮೈದಾನದಲ್ಲಿದ್ದ ಜಾರುಬಂಡೆ ಮತ್ತಿತರ ಆಟದ ಸಾಮಾನುಗಳನ್ನು ಸ್ವಚ್ಚಗೊಳಿಸಿ ಬಣ್ಣ ಹಚ್ಚಿ ಅಂದಗೊಳಿಸಲಾಗಿದೆ. ಶ್ರೀಮತಿ ವೇದಾವತಿ , ಡಾ. ಭರತ್ ಶೆಟ್ಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು

* ಏರಪೋರ್ಟ್ ರಸ್ತೆಯಲ್ಲಿ ಶ್ರೀಶುಭೋದಯ ಆಳ್ವ ನೇತೃತ್ವದ ಸ್ವಚ್ಛತಾ ತಂಡ ಯಯ್ಯಾಡಿ ಮುಖ್ಯರಸ್ತೆಯಲ್ಲಿ ಸ್ವಚ್ಚತಾ ಅಭಿಯಾನ ಕೈಗೊಂಡಿತು. ಶಾಲಿಮಾರ್ ಪೇಂಟ್ಸ್ ಸಿಬ್ಬಂದಿಗಳು ಅಭಿಯಾನದಲ್ಲಿ ಪಾಲ್ಗೊಂಡಿದ್ದರು

* ತೊಕ್ಕೊಟ್ಟು: ಶ್ರೀಪರಂಜ್ಯೋತಿ ಮಾನವ ಸೇವಾ ಸಮಿತಿ ಹಾಗೂ ವೀರಮಾರುತಿ ವ್ಯಾಯಾಮ ಶಾಲೆಯ ಸದಸ್ಯರು ತೊಕ್ಕೊಟ್ಟುವಿನಲ್ಲಿ ಸ್ವಚ್ಚತೆ ಮಾಡಿದರು. ಶ್ರೀವೇದಿತಕುಮಾರ ಕಾರ್ಯಕ್ರಮ ಸಂಯೋಜಿಸಿದರು.

* ಶ್ರೀಕ್ಷೇತ್ರ ಕೊಲ್ಯ ಮಠದ ಭಕ್ತರು ಕೊಲ್ಯದಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡಿದ್ದರು. ಶ್ರೀ ಮಧುಸೂದನ ಅಯ್ಯರ ಹಾಗೂ ಸೀತಾರಾಮ್ ಕಾರ್ಯಕ್ರಮ ಸಂಯೋಜಿಸಿದರು.

* ಮಾಡೂರಿನ ಮುಖ್ಯರಸ್ತೆಯಲ್ಲಿ ಕೋಟೆಕಾರ್ ನಾಗರಿಕರಿಂದ ಸ್ವಚ್ಚತಾ ಕೈಂಕರ್ಯ ನಡೆಯಿತು.

* ಕದ್ರಿ ಮುಖ್ಯರಸ್ತೆಯಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಸ್ವಚ್ಚತಾ ಅಭಿಯಾನ ನಡೆಯಿತು. ಲಯನ್ಸ್ ಸೇವಾ ಮಂದಿರದ ಮುಂಭಾಗಗಳಲ್ಲಿ ಸ್ವಚ್ಚತೆ ನಡೆಯಿತು. ಸುಮಾರು 60 ಜನ ಲಯನ್ಸ್ ಸದಸ್ಯರು ಶ್ರಮದಾನ ಮಾಡಿದರು.

* ಶಿವಭಾಗ ನಾಗರಿಕರಿಂದ ಶಿವಭಾಗ್ ಪ್ರದೇಶದಲ್ಲಿ ಸ್ವಚ್ಛತೆ ಕಾರ್ಯ ಜರುಗಿತು. ಶ್ರೀಮತಿ ಶೀಲಾ ಜಯಪ್ರಕಾಶ ಹಾಗೂ ಶ್ರೀಮತಿ ಕಲಾದೀಪಕ ಅಭಿಯಾನವನ್ನು ಸಂಯೋಜಿಸಿದರು.

* ಯಕ್ಕೂರಿನ ಅಯ್ಯಪ್ಪ ಸ್ವಾಮಿ ಭಜನಾ ಮಂದಿರರ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಹಿಂದೂ ಯುವಸೇನೆ ಹಾಗೂ ಅಯ್ಯಪ್ಪಸ್ವಾಮಿ ಭಕ್ತರ ನೇತೃತ್ವದಲ್ಲಿ ಮೊದಲ ಬಾರಿಗೆ ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸ್ವಾಮಿ ಧರ್ಮವೃತಾನಂದಜಿ ಮಹರಾಜ್ ಹಾಗೂ ಭಾಸ್ಕರ ಚಂದ್ರ ಶೆಟ್ಟಿ ಅಭಿಯಾನಕ್ಕೆ ಚಾಲನೆ ನೀಡಿದರು. ಸ್ವಾಮಿಜಿ ಸ್ವಚ್ಚತೆಯ ಮಹತ್ವ ಹಾಗೂ ಅದರಲ್ಲಿ ನಾಗರಿಕರ ಪಾತ್ರದ ಕುರಿತು ಮಾತನಾಡಿದರು. ಸುಮಾರು ನೂರೈವತ್ತು ಜನ ಭಾಗವಹಿಸಿದ್ದರು. ಶ್ರೀ ಪ್ರಶಾಂತ ಕುಮಾರ, ಭರತಶೆಟ್ಟಿ ಯಕ್ಕೂರ ಶುಭಕರ ಶೆಟ್ಟಿ ಸತೀಶ ಟಿ ಯಕ್ಕೂರ ಮತ್ತಿತರರು ಪಾಲ್ಗೊಂಡಿದ್ದರು.

* ಅಳಕೆಯಲ್ಲಿ ಮಾನವ ಸೇವಾ ಸಮಿತಿಯ ವತಿಯಿಂದ ಸ್ವಚ್ಛತಾ ಅಭಿಯಾನ ಜರುಗಿತು. ಚಿತ್ರಾ ಚಿತ್ರಮಂದಿರದ ಸುತ್ತಮುತ್ತಲಿನ ರಸ್ತೆಗಳನ್ನು ಶುಚಿಗೊಳಿಸಲಾಯಿತು. ಶ್ರೀ ಮನೋಹರ ಪ್ರಭು ಕಾರ್ಯಕ್ರಮವನ್ನು ಸಂಘಟಿಸಿದರು.

* ಶ್ರೀಕೃಷ್ಣ ಭವನ ಆಟೋ ಚಾಲಕರು ಹಂಪಣಕಟ್ಟೆಯಲ್ಲಿಯ ಮುಖ್ಯ ರಸ್ತೆಯಲ್ಲಿ ಸ್ವಚ್ಛತೆಯನ್ನು ಕೈಗೊಳ್ಳಲಾಯಿತು.

* ಬಿಜೈ ಚರ್ಚ ರಸ್ತೆಯಲ್ಲಿ ಮಂಗಳೂರಿನ ಹಿರಿಯ ನಾಗರಿಕರಿಂದ ಸ್ವಚ್ಛತಾ ಕಾರ್ಯ ಜರುಗಿತು. ಮನಪಾ ಸದಸ್ಯ ಶ್ರೀ ಪ್ರಕಾಶ್ ಸಾಲಿಯಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀರಾಮಕುಮಾರ್ ಬೆಕಲ್ ಸಂಯೋಜಿಸಿದರು

* ಗೂಡಶೆಡ್ ರಸ್ತೆಯಲ್ಲಿ ಶ್ರೀನಿತ್ಯಾನಂದ ತಂಡ ದವರು ಸ್ವಚ್ಛತಾ ಕಾರ್ಯ ಹಮ್ಮಿಕೊಂಡಿದ್ದರು. ಶ್ರೀ ರವಿ ಗೂಡಶೆಡ್ ಹಾಗೂ ಶ್ರೀ ಗೋಪಾಲಕೃಷ್ಣ ಕುಂಬ್ಳೆ ಸೇರಿದಂತೆ ಹಲವಾರು ಜನ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

* ದೇರೆಬೈಲ್ ನಾಗಕನ್ನಿಕಾ ದೇವಸ್ಥಾನದ ದ್ವಾರದಿಂದ ಮುಖ್ಯರಸ್ತೆಯ ಆಸುಪಾಸಿನಲ್ಲಿ ಭಾಗ್ಯಜ್ಯೋತಿ ತಂಡದಿಂದ ಸ್ವಚ್ಛತಾ ಕಾರ್ಯ ಜರುಗಿತು.

* ಹಿಂದುಳಿದ ವಿದ್ಯಾರ್ಥಿನಿಲಯದ ವಿದ್ಯಾರ್ಥಿನಿಯರಿಂದ ಉರ್ವಾ ಸ್ಟೋರ್ ಬಸ್ ತಂಗುದಾಣ ಹಾಗೂ ರಸ್ತೆಯ ಬದಿಯ ಸ್ಥಳಗಳನ್ನು ಸ್ವಚ್ಛಗೊಳಿಸಿದರು.

* ಎಂಸಿಎ ಮಂಗಳಾ ತಂಡದಿಂದ ಉರ್ವಾ ಮಾರ್ಕೆಟನಿಂದ ಕರ್ನಾಟಕ ಆಯುರ್ವೆದ ಕಾಲೇಜಿನ ವರೆಗಿನ ರಸೆ ಹಾಗೂ ತೋಡುಗಳನ್ನು ಶುಚಿಗೊಳಿಸಿದರು.

* ಮೇರ್ಲಪದವಿನಲ್ಲಿ ಶ್ರೀನಿವಾಸ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಅಭಿಯಾನ ಜರುಗಿತು. ಸುಮಾರು 80 ಜನ ಯುವಕರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

11 ನೇ ವಾರದ ಸ್ವಚ್ಛ ಮಂಗಳೂರು ಅಭಿಯಾನದ ಪ್ರಯುಕ್ತ ನಲವತ್ತು ಕಡೆಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ನಂತರ ಎಲ್ಲರಿಗೂ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು ಈ ಅಭಿಯಾನಕ್ಕೆ ಎಂಆರ್‍ಪಿಎಲ್ ಹಾಗೂ ನಿಟ್ಟೆ ವಿದ್ಯಾಸಂಸ್ಥೆ ಪ್ರಾಯೋಜಕತ್ವ ನೀಡುತ್ತಿವೆ.


Spread the love