ಲಂಚ ಸ್ವೀಕಾರದ ಆರೋಪಿಗೆ ಶಿಕ್ಷೆ ಪ್ರಕಟ

Spread the love

ಲಂಚ ಸ್ವೀಕಾರದ ಆರೋಪಿಗೆ ಶಿಕ್ಷೆ ಪ್ರಕಟ

ಮಂಗಳೂರು: ಮಂಗಳೂರಿನ ಲೋಕಾಯುಕ್ತ ವಿಶೇಷ ನ್ಯಾಯಲಯದ ನ್ಯಾಯಾಧೀಶ ಬಿ ಮುರಳಿಧರ ಪೈ ಅವರಿಂದ ಲಂಚ ಸ್ವೀಕಾರದ ಆರೋಪಿಗೆ ಅಪರೂಪದ ವಿಶೇಷ ತೀರ್ಪು ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಅಂಬೇಡ್ಕರ್ ನಿಗಮದ ವಸೂಲಾತಿ ಅಧಿಕಾರಿ ಮತ್ತು ಜಿಲ್ಲಾ ವ್ಯವಸ್ಥಾಪಕರಾಗಿದ್ದ ಗುಲ್ಲಯ್ಯ  ಎಂಬವರು ಸಹಾಯಧನ ಬಿಡುಗಡೆಗೆ ವಾಮನ ನಾಯಕ್ ಎಂಬವರಿಂದ ಲಂಚಕ್ಕೆ ಬೇಡಿಕೆ ಇಟ್ಟು, 2009 ನೇ ಇಸವಿಯಲ್ಲಿ ರೂ. 4,000/- ಲಂಚ ಪಡೆದ ಆರೋಪವನ್ನು ಎದುರಿಸುತ್ತಿದ್ದರು.

2009 ರಲ್ಲಿ ರೂ 4,000/- ಲಂಚ ಪಡೆಯುತ್ತಿದ್ದಾಗ  ಲೋಕಾಯುಕ್ತ ಬಲೆಗೆ ಬಿದ್ದಿದ್ದ ಆರೋಪಿ ಗುಲ್ಲಯ್ಯ, ಕೆಲಸದಿಂದ ನಿವ್ರುತ್ತಿ ಹೊಂದಿದ್ದ ಗುಲ್ಲಯ್ಯಗೆ ನ್ಯಾಯಾಧೀಶ ಬಿ ಮುರಳಿಧರ್ ಪೈ ಅವರು ಆರೋಪಿ ಗುಲ್ಲಯ್ಯಗೆ ಕಲಂ 7 ರ ಅಡಿ  ಯಲ್ಲಿ ಎಸಗಿದ ಅಪರಾಧಕ್ಕೆ 1 ವರ್ಷ ಸಾದಾ ಸಜೆ ಮತ್ತು 10,000/- ದಂಡ. ಕಲಂ 13 (1) (ಡಿ) ಯಲ್ಲಿ ಎಸಗಿದ ಅಪರಾಧಕ್ಕೆ  1 ವರ್ಷ ಸಾದಾ ಸಜೆ ಮತ್ತು 10,000/- ದಂಡ ವಿಧಿಸಿ ಶಿಕ್ಷೆ ಪ್ರಕಟಿಸಲಾಗಿದೆ.

ಆಗಿನ ಲೋಕಾಯುಕ್ತ ಇನ್ಸ್ಪೆಕ್ಟರ್ ಉದಯ ನಾಯಕ್ ಅವರ ನೇತೃತ್ವದದಲ್ಲಿ ಆರೋಪಿಯನ್ನು ಬಂದಿಸಲಾಗಿತ್ತು. ಲೋಕಾಯುಕ್ತ ಪರವಾಗಿ ವಿಶೇಷ ಅಭಿಯೋಜಕ, ನ್ಯಾಯವಾದಿ ಕೆ.ಎಸ್.ಎನ್. ರಾಜೇಶ್  ವಾದಿಸಿದ್ದರು


Spread the love