ಲಕ್ಷ ದ್ವೀಪಕ್ಕೆ ಸರಕು ಸಾಗಿಸುವ ಕಾರ್ಮಿಕರ ವೈದ್ಯಕೀಯ ತಪಾಸಣೆಗೆ ಆಗ್ರಹ

Spread the love

ಲಕ್ಷ ದ್ವೀಪಕ್ಕೆ ಸರಕು ಸಾಗಿಸುವ ಕಾರ್ಮಿಕರ ವೈದ್ಯಕೀಯ ತಪಾಸಣೆಗೆ ಆಗ್ರಹ

ಮಂಗಳೂರು: ಹಳೆ ಬಂದರು ಏರಿಯಾದಲ್ಲಿ ಲಕ್ಷದ್ವೀಪಕ್ಕೆ ಮಂಗಳೂರಿಂದ ಸಾಗಿಸಲ್ಪಡುವ ಅಕ್ಕಿ ಮತ್ತು ಅವಶ್ಯಕ ವಸ್ತುಗಳನ್ನು ಸಾಗಿಸಲು ಕೇರಳದಿಂದ ಬಾಜ್೯ ಆಗಮಿಸಿ ಏಕಾಏಕಿ ಸರಕು ಸಾಗಣೆ ಮಾಡಲು ಪ್ರಾರಂಭ ಗೊಂಡಿರುವುದರಿಂದ ಸುಮಾರು 40ಕ್ಕೂ ಅಧಿಕ ಸರಕುಸಾಗಾಣಿಕೆ ಹಡಗುಗಳಿಗೆ ಅನುಮತಿನೀಡದೇಇರುವುದನ್ನು ಗಮನಿಸಿ 150ಕ್ಕೂ ಅಧಿಕ ಬೇರೆ ಬೇರೆ ಪ್ರದೇಶಗಳಿಂದ ಆಗಮಿಸಿದ ಕೂಲಿ ಕಾರ್ಮಿಕರು ಪ್ರತಿಭಟನೆ ಮಾಡಿ ತಮಗೆ ಯಾವುದೇ ಮೂಲಭೂತ ಸೌಕರ್ಯ ಒದಗಿಸಿಲ್ಲ ಎಂದು ದೂರಿದರು.

ಮಾಹಿತಿ ತಿಳಿಸಿದು ಸ್ಥಳಕ್ಕೆ ಆಗಮಿಸಿದ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಜಿಲ್ಲಾಡಳಿತ ಕರೋನಾ ವೈರಸ್ ಹರಡದಂತೆ ತೆಗೆದುಕೊಳ್ಳುವ ಯಾವುದೇಕ್ರಮವನ್ನು ಪಾಲಿಸದೆ ಇರುವುದನ್ನು ಕಂಡು ಮತ್ತು ಕೇರಳ ದಿಂದ ಆಗಮಿಸಿದ, ಹಡಗಿನಲ್ಲಿ ಆಗಮಿಸಿದ ಕಾರ್ಮಿಕರಿಗೆ ಯಾವುದೇ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿಲ್ಲ ಎಂಬ ದೂರನ್ನು ಗಮನಿಸಿ ಸ್ಥಳೀಯ ಕಾಪೋ೯ರೇಟರ್ ಲತೀಫ್ ಕಂದಕ ಮಾಜಿ ಮೇಯರ್ ಅಶ್ರಫ್, ಮನಸಾ ವಿರೋಧ ಪಕ್ಷದ ನಾಯಕರಾದ ಅಬ್ದುಲ್ ರವೂಫ್ ಇವರುಗಳೊಗೊಂಡ ನಿಯೋಗವು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಗಮನಕ್ಕೆ ತಂದಾಗ ಜಿಲ್ಲಾಡಳಿತ ತೆಗೆದುಕೊಳ್ಳುವ ಯಾವುದೇ ಕ್ರಮವನ್ನು ಕಂಡುಬಂದ ಕಾರ್ಮಿಕರಿಗೆ ಯಾವುದೇ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ ಎಂಬ ದೂರನ್ನು ಗಮನಿಸಿ ಕಾರ್ಪೊರೇಟರ್ ಪಕ್ಷದ ನಾಯಕರು ಮಾಜಿ ಮೇಯರ್ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು

ಈ ಸಂದರ್ಭದಲ್ಲಿ ಮಾತನಾಡಿದ ಐವನ್ ಡಿಸೋಜಾ ಅಗತ್ಯ ವಸ್ತುಗಳ ಸಾಗಣೆಕೆಗೆ ಪರವಾನಿಗೆ ನೀಡಲಾಗಿದ್ದು ಇತರ ರಾಜ್ಯದಿಂದ ಹಡಗುಗಳ ಆಗಮಿಸಿದ ಪ್ರತಿಯೊಬ್ಬ ಕಾರ್ಮಿಕರಿಗೂ ವೈದ್ಯಕೀಯ ತಪಾಸಣೆ ನಡೆಸ ಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಯಿತು. ಜಿಲ್ಲಾಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು


Spread the love