ಲಯನ್ಸ್ ಲೀಯೋ ಕ್ಲಬ್ ವತಿಯಿಂದ ಸಾಧನ ಸಲಕರಣೆ  ವಿತರಣೆ

Spread the love

ಮಂಗಳೂರು : ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವ ಶಿಕ್ಷಣ ಅಭಿಯಾನ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಮಂಗಳೂರು ಉತ್ತರ ವಲಯ ಹಾಗೂ ಲಯನ್ಸ್ ಲೀಯೋ ಕ್ಲಬ್ ನೇತ್ರಾವತಿ ಮಂಗಳೂರು ಇವರ ಸಹಯೋಗದಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಸಾಧನ ಸಲಕರಣೆ ವಿತರಣೆ ಕಾರ್ಯಕ್ರಮವು ಸೋಮವಾರ ಬಿ.ಆರ್.ಸಿ ಗಾಂಧೀನಗರ ಇಲ್ಲಿ ನೆರವೇರಿತು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ವಾಲ್ಟರ್ ಡಿಮೆಲ್ಲೋ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಸಾಧನ ಸಲಕರಣೆಗಳನ್ನು ವಿತರಿಸುತ್ತಾ, ಈ ಸಾಧನಗಳನ್ನು ಬಳಸಿಕೊಂಡು ಮಕ್ಕಳನ್ನು  ಮುಖ್ಯವಾಹಿನಿಗೆ ತರಲು ಪ್ರಯತ್ನಿಸಬೇಕು ಎಂದು ತಿಳಿಸಿದರು ಸರ್ವ ಶಿಕ್ಷಣ ಅಭಿಯಾನದಿಂದ ಗೃಹಾಧಾರಿತ ಮಕ್ಕಳಿಗೆ ಕಿಟ್‍ನ್ನು ವಿತರಿಸಲಾಯಿತು.

ಲಯನ್ಸ್ ಲೀಯೋ ಕ್ಲಬ್ ಅಧ್ಯಕ್ಷೆ ಮಂದಾಕಿನಿ ಸಮನ್ವಯ ಶಿಕ್ಷಣ ಕೇಂದ್ರಕ್ಕೆ ಸೂಚನ ಫಲಕವನ್ನು ಕೊಡುಗೆಯಾಗಿ ನೀಡಿ ಇನ್ನು ಮುಂದೆಯೂ  ತಾವು ಇದೇ ರೀತಿ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಸಹಕಾರವನ್ನು  ನೀಡುವುದಾಗಿ ತಿಳಿಸಿದರು.  ಮಂಗಳೂರು ಉತ್ತರ ಕ್ಷೇತ್ರ ಶಿಕ್ಷಣಾಧಿಕಾರಿ ರಾಜಲಕ್ಷ್ಮೀ ಸ್ವಾಗತಿಸಿದರು. ಸರ್ವ ಶಿಕ್ಷಣ ಅಭಿಯಾನದ ಉಪಯೋಜನಾ ಸಮನ್ವಯಾಧಿಕಾರಿ ಗೀತಾ, ಬಿ.ಆರ್.ಪಿಗಳಾದ  ವಿಜಯಲಕ್ಷ್ಮೀ, ಗೀತಾ,  ವಸಂತ್ ಪಾಲನ್ ,ಸಿ.ಆರ್.ಪಿ ವಿಶೇಷ ಶಿಕ್ಷಕರಾದ  ಜ್ಯೋತಿ , ಶಶಿಕಲಾ , ಮತ್ತಿತರರು ಉಪಸ್ಥಿತರಿದ್ದರು.


Spread the love