ಲಯನ್ ಡಿ. ಪದ್ಮನಾಭ ಕುಮಾರ್ – ಮಲೇಷ್ಯಾದ ಮುಖ್ಯಮಂತ್ರಿಗಳಿಂದ ಸನ್ಮಾನ 

Spread the love

ಲಯನ್ ಡಿ. ಪದ್ಮನಾಭ ಕುಮಾರ್ – ಮಲೇಷ್ಯಾದ ಮುಖ್ಯಮಂತ್ರಿಗಳಿಂದ ಸನ್ಮಾನ 

ಮಂಗಳೂರು : ಮಲೇಷ್ಯಾದ ಮುಖ್ಯಮಂತ್ರಿ ಮಿಸ್ಟರ್. ಯುಬ್ ಮನ್ ಚೆವ್ ಕಾನ್ ಯೆನ್ ರವರು ಭಾರತೀಯ ಮೂಲದ ನ್ಯಾಯವಾದಿ ಅಂತಾರಾಷ್ಟ್ರೀಯ ಕ್ರೀಡಾಪಟು,  ಭಾರತೀಯ ಗಣ್ಯ ಕ್ರೀಡಾಪಟು ಹಾಗೂ ಸದ್ರಿ ಕೂಟದಲ್ಲಿ 6 ವಿಭಾಗಗಳಲ್ಲಿ ಪಾಲ್ಗೊಂಡು ಅವುಗಳಲ್ಲಿ ಪದಕಗಳನ್ನು ಪಡೆದ ಲಯನ್ ಡಿ. ಪದ್ಮನಾಭ ಕುಮಾರ್‍ರವರನ್ನು ಮಲೇಷ್ಯಾದ ಕುಮಟೂರುನಲ್ಲಿರುವ ತಮ್ಮ ಕಚೇರಿಯಲ್ಲಿ ಸನ್ಮಾನಿಸಿದರು. ಏಶಿಯನ್ ಮಾಸ್ಟರ್ಸ್ ಅಥ್ಲೇಟಿಕ್ ಚಾಂಪಿಯನ್ 2018 ಮಲೇಷ್ಯಾದ ಪಿನಾಂಗ್‍ನಲ್ಲಿರುವ ಬಂಡಾರಾಯ ಸಿಟಿ ಸ್ಟೇಡಿಯಂನಲ್ಲಿ ಸೆಪ್ಟಂಬರ್ 7 ರಿಂದ 15 ರ ವರೆಗೆ ನಡೆಯಿತು.

ಸದ್ರಿ ಕೂಟದಲ್ಲಿ ಒಟ್ಟಿಗೆ 6500 ಸಾವಿರ ಕ್ರೀಡಾ ಪಟುಗಳಿದ್ದು, 65 ದೇಶಗಳಿಂದ ಭಾಗವಹಿಸಿದ್ದರು. ಅವುಗಳಲ್ಲಿ ಭಾರತದಿಂದ ಸುಮಾರು 500 ಕ್ರೀಡಾಪಟುಗಳು ಭಾಗವಹಿಸಿ ಎರಡನೇ ಸ್ಥಾನದಲ್ಲಿದಿದ್ದರೆ, ಮಲೇಷ್ಯಾದಿಂದ ಸುಮಾರು 3500 ಕ್ರೀಡಾಪಟುಗಳು ಭಾಗವಹಿಸಿ ಮೊದಲ ಸ್ಥಾನದಲ್ಲಿದ್ದರು..

ಸದ್ರಿ ಕೂಟದಲ್ಲಿ ಮಂಗಳೂರು ಮೂಲದ ವಕೀಲ ಲ. ಡಿ. ಪದ್ಮನಾಭ ಕುಮಾರ್‍ರವರು ಗರಿಷ್ಟ ಒಂದೇ ತರಹ 6 ವಿಭಾಗಗಳಲ್ಲಿ ಭಾಗವಹಿಸಿದ್ದರು.

ಅವುಗಳಲ್ಲಿ ಮೂರು ವಿಭಾಗಗಳಲ್ಲಿ ಪದಕ ಪಡೆದ ಏಕೈಕ ಭಾರತೀಯ ವೇಗದ ಓಟಗಾರರಾಗಿರುತ್ತಾರೆ. ಅವರು ಪಡೆದ ಪದಕಗಳು ಎರಡು ಕಂಚು ಒಂದು ಬೆಳ್ಳಿ.

ಸದ್ರಿ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಮಲೇಷ್ಯಾದ ಮುಖ್ಯಮಂತ್ರಿಗಳಲ್ಲದೇ ಒಡಿ.   ಅಧ್ಯಕ್ಷರು ಅಂತಾರಾಷ್ಟ್ರೀಯ ಅಥ್ಲೇಟಿಕ್ ಅಸೋಸಿಯೇಶನ್ ಯಬ್ ಚಾಂಗ್ ಇಂಗ್ ಅಧ್ಯಕ್ಷರು  ಟುಂಕು ಇಮ್ರಾನ್ ಟುಂಕು ಜಾಫರ್ ಗೌರವ ರಾಯಭಾರಿ ಂ ಹಾಜರಿದ್ದರು.

ಈವರೆಗೆ ಇದು ಸೇರಿ ಡಿ. ಪದ್ಮನಾಭ ಕುಮಾರ್ ರವರದ್ದು 6ನೇ ಅಂತಾರಾಷ್ಟ್ರೀಯ ಕ್ರೀಡಾಕೂಟವಾಗಿದ್ದು ಈ ಹಿಂದೆ ಶ್ರೀಲಂಕ, ಸಿಂಗಾಪುರ, ಮಲೇಷ್ಯಾ ನ್ಯೂಜಿಲ್ಯಾಂಡ್‍ಗಳಲ್ಲಿ ಭಾಗವಹಿಸಿ ಸತತ ಪದಕಗಳನ್ನು ಪಡೆದ ಏಕೈಕ ಭಾರತೀಯ ವೇಗದ ಓಟಗಾರರಾಗಿರುತ್ತಾರೆ.


Spread the love