ಲಾಕ್ ಡೌನ್ ನಿಯಮ ಉಲ್ಲಂಘಿಸಿ ಲಾರಿಯಲ್ಲಿ ಜನರ ಸಾಗಾಟ – ಮೂವರ ಬಂಧನ

Spread the love

ಲಾಕ್ ಡೌನ್ ನಿಯಮ ಉಲ್ಲಂಘಿಸಿ ಲಾರಿಯಲ್ಲಿ ಜನರ ಸಾಗಾಟ – ಮೂವರ ಬಂಧನ

ಕುಂದಾಪುರ: ಸೆಕ್ಷನ್ 144 ನಿಯಮ ಉಲ್ಲಂಘಿಸಿ ಲಾರಿಯಲ್ಲಿ ಜನರನ್ನು ಉಡುಪಿ ಜಿಲ್ಲೆಯಿಂದ ಬೇರೆ ಜಿಲ್ಲೆಗೆ ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಬೈಂದೂರು ಠಾಣೆಯಲ್ಲಿ ಮೂವರ ಮೇಲೆ ಪ್ರಕರಣ ದಾಖಲಿಸಿ ಲಾರಿಯನ್ನು ಜಫ್ತಿ ಮಾಡಲಾಗಿದೆ.

ಲಾರಿ ಮಾಲಕ‌ ಮತ್ತು ಚಾಲಕನಾಗಿರುವ ರಾಯಚೂರು ಲಿಂಗನೂರು ಮೂಲದ ಮೈಬುಬ್ ನದಾಪ್ (24), ಕ್ಲೀನರ್ ಗಳಾದ ಬಾಗಲಕೋಟೆ ಮೂಲದ ದಾವುದ್ ಸಾಬ್ (24), ರಾಯಚೂರು ಮೂಲದ ಉಮೇಶ್ ನಾಯಕ್ (18) ಬಂಧಿತರು.

ಏಪ್ರೀಲ್ 18ರಂದು ಗಂಗೊಳ್ಳಿ ಪೊಲೀಸ್ ಠಾಣೆ ಉಪ ನಿರೀಕ್ಷರಾದ ಭೀಮಾ ಶಂಕರ್ ಸಿನ್ನೂರ ಸಂಗಣ್ಣ ಅವರು ಬೈಂದೂರು ಪೊಲೀಸ್ ಠಾಣಾ ಸರಹದ್ದಿನ ಶಿರೂರು ಟೋಲ್ ಗೇಟ್ ನಲ್ಲಿ ಸಿಬ್ಬಂದಿಯವರೊಂದಿಗೆ ಅಂತರ್ ಜಿಲ್ಲಾ ಚೆಕ್ ಪೋಸ್ಟ್ ಕರ್ತವ್ಯದಲ್ಲಿರುವಾಗ ಬೈಂದೂರು ಕಡೆಯಿಂದ KA-36-B-7691ನೇ ಲಾರಿಯೊಂದು ಬಂದಿದ್ದು, ಲಾರಿಯನ್ನು ತಡೆದು ನಿಲ್ಲಿಸಿ ಪರಿಶೀಲಿಸಿದ್ದು, ಲಾರಿಯಲ್ಲಿ ಚಾಲಕ ಮತ್ತು ಇಬ್ಬರು ಕ್ಲೀನರ್ ಇದ್ದು, ಅಲ್ಲದೇ ಲಾರಿಯ ಹಿಂಬದಿಯಲ್ಲಿ 11 ಜನ ಪ್ರಯಾಣಿಕರು ಇದ್ದರು.

ಜನರಲ್ಲಿ ಹೊರಗಡೆ ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸದಂತೆ ಸರಕಾರದ ಆದೇಶ ಇದ್ದರೂ ಮಾನವ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕು ಹರಡುವ ಸಾಧ್ಯತೆ ಇದೆ ಎನ್ನುವ ವಿಷಯ ತಿಳಿದು ಸಹ ನಿರ್ಲಕ್ಷತನವನ್ನು ತೋರಿಸಿ ಈ ರೀತಿ ಸಂಚರಿಸುತ್ತಿದ್ದ ಬಗ್ಗೆ ವಿಚಾರಿಸಿದ್ದು ಲಾರಿಯಲ್ಲಿ ಪ್ರಯಾಣಿಸುತ್ತಿದ್ದ ಜನರು ಕೂಲಿ ಕೆಲಸದ ಬಗ್ಗೆ ಉಡುಪಿ ಜಿಲ್ಲೆಗೆ ಬಂದಿದ್ದು ಮಂದರ್ತಿ ಪರಿಸರದಲ್ಲಿ ಕೆಲಸ ಮಾಡಿಕೊಂಡಿದ್ದೇವು. ಲಾಕ್ ಡೌನ್ ಆದ ನಂತರ ಊರಿಗೆ ಹೋಗಲು ಆಗಿರಲಿಲ್ಲ. ನಮ್ಮ ಊರಿನ ಕಡೆಗೆ ಹೋಗುವ ಲಾರಿಯ ಬಗ್ಗೆ ಮಾಹಿತಿ ತಿಳಿದು ಬ್ರಹ್ಮಾವರದಿಂದ KA-36-B- 7691 ನೇ ಲಾರಿಯಲ್ಲಿ ತಮ್ಮ ಊರಿನ ಕಡೆಗೆ ಪ್ರಯಾಣಿಸುತ್ತಿದ್ದುದಾಗಿ ತಿಳಿಸಿರುತ್ತಾರೆ.

ಲಾರಿಯ ಚಾಲಕನು ಲಾರಿಯ ಪರವಾನಿಗೆ ಆದೇಶ ಉಲ್ಲಂಘಿಸಿ ಗೂಡ್ಸ್ ವಾಹನದಲ್ಲಿ ಪ್ರಯಾಣಿಕರನ್ನು ಸಾಗಿಸಿರುತ್ತಾನೆ ಅಲ್ಲದೇ ಗುಂಪುಗೂಡಿ ಸಂಚರಿಸುವುದರಿಂದ ಸಾಂಕ್ರಾಮಿಕ ರೋಗ ಹರಡುವ ಸಾದ್ಯತೆ ಇದೆ ಎಂದು ಎನ್ನುವ ವಿಷಯ ತಿಳಿದೂ ಸಹ ಲಾರಿಯ ಚಾಲಕ ಹಾಗೂ ಕ್ಲೀನರ್ರವರು ಗೂಡ್ಸ್ ಲಾರಿಯಲ್ಲಿ ಪ್ರಯಾಣಿಕೆರನ್ನು ಒಟ್ಟು ಸೇರಿ ಸಾಗಿಸಿರುತ್ತಾರೆ. ಇದೇ ರೀತಿ ಸಂಚರಿಸಿದಲ್ಲಿ ಸಾರ್ವಜನಿಕರ ಪ್ರಾಣಕ್ಕೆ ಅಪಾಯಕಾರಿಯಾದ ಕೋವಿಡ್-19 (ಕರೋನಾ ವೈರಸ್) ವ್ಯಾಪಕವಾಗಿ ರೋಗದ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಲಾರಿಯ ಚಾಲಕ ಹಾಗೂ ಇಬ್ಬರು ಕ್ಲೀನರ್ ಹಾಗೂ ಲಾರಿಯನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.

ಈ ಬಗ್ಗೆ ಬೈಂದೂರು ಪೊಲಿಸ್ ಠಾಣೆ ಯಲ್ಲಿ ಕಲಂ: 269 ಜೊತೆಗೆ 34 ಐಪಿಸಿ ಮತ್ತು 184, 177 ಕಲ: ಮೋಟಾರ್ ವಾಹನ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.


Spread the love