ಲಾಕ್ ಡೌನ್ ; ಪರಿಹಾರ ಹಾಗೂ ಸೌಲಭ್ಯ ಕಲ್ಪಿಸುವಂತೆ ಸರಕಾರಕ್ಕೆ ದಕ ಜಿಲ್ಲಾ ಕಾಂಗ್ರೆಸ್ ಮನವಿ

Spread the love

ಲಾಕ್ ಡೌನ್ ; ಪರಿಹಾರ ಹಾಗೂ ಸೌಲಭ್ಯ ಕಲ್ಪಿಸುವಂತೆ ಸರಕಾರಕ್ಕೆ ದಕ ಜಿಲ್ಲಾ ಕಾಂಗ್ರೆಸ್ ಮನವಿ

ಮಂಗಳೂರು: ಲಾಕ್ ಡೌನ್ ಸಂದರ್ಭ ನಾಗರೀಕರು ಎದುರಿಸುವ ಸಮಸ್ಯೆಗೆ ಪರಿಹಾರ ಹಾಗೂ ಸೌಲಭ್ಯ ಕಲ್ಪಿಸುವಂತೆ ಸರಕಾರವನ್ನು ಕೋರಿ ದಕ ಜಿಲ್ಲಾ ಕಾಂಗ್ರೆಸ್ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ

ಕೊರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಘೋಷಿಸಲಾಗಿರುವ ಲಾಕ್ ಡೌನ್ ಸಂದರ್ಭ ನಾಗರಿಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು ಸೂಕ್ತ ಪರಿಹಾರ ಹಾಗೂ ಸೌಲಭ್ಯ ಸರಕಾರ ಕಲ್ಪಿಸುವರೇ ವಿನಂತಿಸಲಾಗಿದೆ.

1. ಎಪ್ರಿಲ್ ಮತ್ತು ಮೇ ತಿಂಗಳ ಪಡಿತರ ತಲಾ 10 ಕೆ.ಜಿಯಂತೆ ವಿತರಿಸಿದ್ದು – 4 ಕೆ.ಜಿ ಕಡಿತಗೊಳಿಸಲಾಗಿದೆ. ಅದನ್ನು ಸರಿದೂಗಿಸಲು ಮತ್ತೆ ಮೇ ತಿಂಗಳಲ್ಲಿ 4 ಕೆ.ಜಿ ಕುಚಲಕ್ಕಿ ನೀಡಬೇಕು ಮತ್ತು ವಿತರಿಸದಿರುವ ಗೋಧಿಯನ್ನು ನೀಡಬೇಕು. ಅಲ್ಲದೆ ಕನಷ್ಠ 2 ತಿಂಗಳ ದಿನಸಿ ವಸ್ತುಗಳನ್ನು ಬಡ ಕುಟುಂಬಗಳಿಗೆ ಉಚಿತವಾಗಿ ನೀಡಬೇಕು.

2. ಮೇ ತಿಂಗಳಲ್ಲಿ ಪ್ರತಿ ಎ.ಪಿ.ಲ್ ಕಾರ್ಡ್ಗೆ 15 ಕೆ.ಜಿ ಅಕ್ಕಿ , 2 ಕೆ.ಜಿ ಗೋಧಿ ಮತ್ತು ಬೇಳೆ ಉಚಿತವಾಗಿ ನೀಡಲು ಮನವಿ.

3. ಪ್ರತಿ ಬಿ.ಪಿ.ಎಲ್ ಕಾರ್ಡುದಾರರಿಗೆ 1 ಸಿಲಿಂಡರ್ ಉಚಿತವಾಗಿ ನೀಡುವಂತೆ ಮನವಿ.

4. ಜನರಿಗೆ ಮೂರು ತಿಂಗಳ ಇಒI ಪಾವತಿಸಲು ಸರಕಾರವು ಸಮಯಾವಕಾಶ ನೀಡಿದ್ದು ಅದರ ಬಡ್ಡಿ ಮನ್ನಾ ಮಾಡಬೇಕು. ಖಾಸಗಿ ಇಒI ಪಾವತಿಯನ್ನು ಮುಂದೂಡುವಂತೆಯೂ ಅದರ ಮೆಲಿನ ಬಡ್ಡಿಯನ್ನು ಮನ್ನಾ ಮಾಡುವಂತೆಯೂ ಮನವಿ.

5. ಬೀಡಿ ಕಾರ್ಮಿಕರನ್ನು , ಬುಡಕಟ್ಟು ಜನಾಂಗದವರನ್ನು ಗುರುತಿಸಿ ವಿಶೇಷ ಪ್ಯಾಕೇಜ್ ನೀಡುವಂತೆ ಮನವಿ.

6. ಹೊರಜಿಲ್ಲೆ , ಹೊರ ರಾಜ್ಯದಲ್ಲಿ ಸಿಲುಕಿಕೊಂಡಿರುವ ನಮ್ಮ ರಾಜ್ಯದ ನಾಗರಿಕರಿಗೆ ಅವರ ಊರು , ಮನೆ ಸೇರುವ ಅವಕಾಶ ಸರಕಾರ ಮಾಡಿಕೊಡಬೇಕು. ಅಸಾಧ್ಯವಾದಲ್ಲಿ ಬೇರೆ ರಾಜ್ಯಗಳಲ್ಲಿರುವ ಕನ್ನಡಿಗರಿಗೆ ಆ ರಾಜ್ಯದ ಸರಕಾರಗಳು ದಿನಬಳಕೆಯ ವಸ್ತುಗಳನ್ನು ನೀಡುವಂತೆ ಮನವಿ.

ಈ ಮೇಲಿನ ಸೌಲಭ್ಯಗಳನ್ನು ನೀಡಿದಲ್ಲಿ ಖಂಡಿತವಾಗಿಯೂ ಜನರು ಸರಕಾರಕ್ಕೆ ಲಾಕ್ ಡೌನ್ಗೆ ಸಹಕಾರ ನೀಡುತ್ತಾರೆ. ಈ ಎಲ್ಲಾ ಬೇಡಿಕೆಗಳಿಗೆ ಸರಕಾರ ಸ್ಪಂದಿಸಿ ಕೋರೋನಾ ವೈರಸನ್ನು ರಾಜ್ಯದಿಂದ , ದೇಶದಿಂದ ನಿರ್ಮೂಲನೆಗೊಳಿಸಲು ಜನರ ಸಹಕಾರ ಬಯಸಬಹುದಾಗಿದೆ ಎಂದು ಮನವಿಯಲ್ಲಿ ವಿನಂತಿಸಲಾಗಿದೆ


Spread the love