ಲಾವಣ್ಯ ಕೊಲೆ ಪ್ರಕರಣ: ಸಾಮಾಜಿಕ ಜಾಲತಾಣದಲ್ಲಿ ಸುಳ್ಳು, ಪ್ರಚೋದನಾತ್ಮಕ ಪೋಸ್ಟ್ : ಪ್ರಕರಣ ದಾಖಲು

Spread the love

ಲಾವಣ್ಯ ಕೊಲೆ ಪ್ರಕರಣ: ಸಾಮಾಜಿಕ ಜಾಲತಾಣದಲ್ಲಿ ಸುಳ್ಳು, ಪ್ರಚೋದನಾತ್ಮಕ ಪೋಸ್ಟ್ : ಪ್ರಕರಣ ದಾಖಲು

ಮಂಗಳೂರು: ಬಿ. ಸಿ ರೋಡ್ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಯುವತಿ ಲಾವಣ್ಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಹಾಗೂ ಪ್ರಚೋದನಾತ್ಮಕ ಪೋಸ್ಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ 5 ಪ್ರಕರಣಗಳು ದಾಖಲಾಗಿವೆ.

ಕೊಲೆ ಆರೋಪಿ ಚೇತನ್ ಭಾವಚಿತ್ರವನ್ನು ಎಡಿತ್ ಮಾಡಿ ಬಜರಂಗದಳದ ಸದಸ್ಯ ಎಂಬಂತೆ ಬಿಂಬಿಸಿದ ಆರೋಪದ ಮೇಳೆ ತ troll_master.__ Instagram Account, ಉದೈಫ್, ಯುವ ಬೆಳ್ತಂಗಡಿ, ಪಿ ಪದ್ಮರಾಜ್, ಪದ್ಮರಾಜ್, ಯುವ ಕಾಂಗ್ರೆಸ್ ಬೆಳ್ತಂಗಡಿ, ಫ್ಯಾಕ್ಸ್ಟ್ & ಜಸ್ಟೀಸ್, ಶೈಲಜಾ ಅಮರನಾಥ್ ಚೇತನ್ ಬೆಳ್ಚಡ,ಹರ್ಷಾ ಕೆ ಶೆಟ್ಟಿ ಹಾಗೂ ಕಿರಣ್ ಆರಾಧ್ಯ ಎಂಬವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

ಆರೋಪಿಗಳು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಹಾಗೂ ಪ್ರಚೋದನಾತ್ಮಕ ಪೋಸ್ಟ್ ಮೂಲಕ ಶಾಂತಿ ಕದಡುವ ಕೆಲಸ ಮಾಡಲಾಗಿದ್ದು ಅವರ ವಿರುದ್ದ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.


Spread the love
Subscribe
Notify of

0 Comments