‘ಲೇಕ್ 2016’- ‘’ಪಶ್ಚಿಮ ಘಟ್ಟದ ಸಂರಕ್ಷಣೆ ಹಾಗೂ ಸುಸ್ಥಿರ ಅಭಿವೃದ್ಧಿ’’ ವಿಚಾರ ಸಂಕಿರಣ

Spread the love

‘ಲೇಕ್ 2016’- ‘’ಪಶ್ಚಿಮ ಘಟ್ಟದ ಸಂರಕ್ಷಣೆ ಹಾಗೂ ಸುಸ್ಥಿರ ಅಭಿವೃದ್ಧಿ’’ ವಿಚಾರ ಸಂಕಿರಣ
ಮೂಡಬಿದಿರೆ: ಶಕ್ತಿ ಮತ್ತು ಜೌಗು ಪ್ರದೇಶಗಳ ಸಂಶೋಧನಾ ಕೇಂದ್ರ (ಎನರ್ಜಿ & ವೆಟ್‍ಲ್ಯಾಂಡ್ ರಿಸರ್ಚ ಗ್ರೂಪ್) ಪರಿಸರ ವಿಜ್ಞಾನಗಳ ಕೇಂದ್ರ, ಭಾರತೀಯ ವಿಜ್ಞಾನÀ ಸಂಸ್ಥೆ, ಬೆಂಗಳೂರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡಬಿದಿರೆ, ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ, ಮಿಜಾರು, ಆಳ್ವಾಸ್ ಕಾಲೇಜು, ವಿದ್ಯಾಗಿರಿ ಇವರ ಸಂಯುಕ್ತ ಆಶ್ರಯದಲ್ಲಿ, ಡಿಸೆಂಬರ್ 28,29, 30,31, ನಾಲ್ಕು ದಿನಗಳ ಕಾಲ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ‘ಲೇಕ್-2016′ ವಿದ್ಯಾಗಿರಿಯ ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಜರುಗಲಿದೆ.
ಕೆರೆ ಹಾಗೂ ಪರಿಸರ ಸಂರಂಕ್ಷಣೆಗಾಗಿ, ಶಕ್ತಿ ಮತ್ತು ಜೌಗು ಪ್ರದೇಶಗಳ ಸಂಶೋಧನಾ ಕೇಂದ್ರ, ಪರಿಸರ ವಿಜ್ಞಾನಗಳ ಕೇಂದ್ರ, ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು, 1998ರ ಆರಂಭದಿಂದಲೂ `ಲೇಕ್ ವಿಚಾರ ಸಂಕಿರಣ’ ಮಾಡುವುದರ ಮೂಲಕ ಜನರಲ್ಲಿ ಪರಿಸರ ಕಾಳಜಿಯನ್ನು ಮೂಡಿಸುತ್ತಾ ಬಂದಿದೆ. ಈ ಕಾರ್ಯಕ್ರಮವು ಸರ್ಕಾರ ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಪಾಲ್ಗೊಳ್ಳುವ ಮೂಲಕ `ಲೇಕ್-2000′ ಎಂಬ ನಾಮಧೇಯದೊಂದಿಗೆ ಹೊಸ ಆಯಾಮ ಪಡೆದು, ಪರಿಸರದ ಕಾಳಜಿಯನ್ನು ಜನರಲ್ಲಿ ಇಮ್ಮಡಿಗೊಳಿಸಿತು. `ಲೇಕ್ ವಿಚಾರ ಸಂಕಿರಣ’ ಎರಡು ವರ್ಷಗಳಿಗೊಮ್ಮೆ ನಡೆಯುವ ಅಂತಾರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಈ ಬಾರಿಯ ಹತ್ತನೆಯ ಅಂತರಾಷ್ಟ್ರೀಯ ಸಮ್ಮೇಳನವು ಪಶ್ಚಿಮಘಟ್ಟಗಳ ಮಡಿಲಿನ ಸುಂದರ ಪರಿಸರವಾದ ಮೂಡಬಿದಿರೆಯಲ್ಲಿ ಜರುಗಲಿದೆ. ‘ಲೇಕ್ 2016′ ಕಾರ್ಯಕ್ರಮವು ಕೆರೆ, ತೇವಾಂಶವುಳ್ಳ ಪ್ರದೇಶವು ಹೇಗೆ ಪರಿಸರದಲ್ಲಿ ಸಮತೋಲನವನ್ನು ಕಾಪಾಡಿ, ನಶಿಸಿ ಹೋಗುತ್ತಿರುವ ಜೀವ ಪರಿಸರವನ್ನು ಸಂರಕ್ಷಿಸುತ್ತವೆ ಎಂಬುದನ್ನು ತಿಳಿಸುತ್ತದೆ. ಈ ಕಾರ್ಯಕ್ರಮವು ಸಂಶೋಧಕರಲ್ಲಿ, ಸರ್ಕಾರದ ಪ್ರತಿನಿಧಿಗಳಲ್ಲಿ, ಶಿಕ್ಷಕರಲ್ಲಿ, ವಿದ್ಯಾರ್ಥಿ ಸಮುದಾಯಗಳಲ್ಲಿ ಚರ್ಚೆಗೆ ಮುಕ್ತ ಅವಕಾಶವನ್ನು ನೀಡಿ ವೈಜ್ಞಾನಿಕ ಚಿಂತನೆಯನ್ನು ಬಿತ್ತಿ, ಪರಿಸರ ಕಾಳಜಿಯನ್ನು ಉತ್ತೇಜನಗೊಳಿಸುತ್ತವೆ.
ಪರಿಸರದ ವಿವಿಧ ಕ್ಷೇತ್ರಗಳ ವಿಭಿನ್ನ ವಿಷಯಗಳ ಕುರಿತು ಸಂಶೋಧನಾ ಪ್ರಬಂಧಗಳನ್ನು ವಿದ್ಯಾರ್ಥಿಗಳಿಂದ, ಶಿಕ್ಷಕರಿಂದ, ಸಂಶೋಧಕರಿಂದ, ಆರ್ಥಿಕ ತಜ್ಞರಿಂದ ಆಹ್ವಾನಿಸಲಾಗಿದೆ.
ಸಹ್ಯಾದ್ರಿ ಪ್ರಶಸ್ತಿ ಪುರಸ್ಕಾರ
ಪ್ರೌಢವಿಭಾಗ(8,9,10), ಕಾಲೇಜು ವಿಭಾಗ (11,12 & ಡಿಗ್ರಿ) ಹಾಗೂ ಶಿಕ್ಷಕರು, ಹೀಗೆ ಮೂರು ವಿಭಾಗದಲ್ಲಿ ಪ್ರಶಸ್ತಿಗಳನ್ನು ನೀಡಲಾಗುವುದು. ಅತ್ಯುತ್ತಮ ಪ್ರಬಂಧ ಮಂಡನೆ ಮಾಡಿದ ವಿದ್ಯಾರ್ಥಿಗೆ ‘’ಸಹ್ಯಾದ್ರಿ ಯಂಗ್ ಸೈಂಟಿಸ್ಟ್’’ ಹಾಗೂ ಶಿಕ್ಷಕರಿಗೆ ‘’ ಸಹ್ಯಾದ್ರಿ ಶಿಕ್ಷಕ ಅವಾರ್ಡ’’ ನೀಡಿ ಗೌರವಿಸಲಾಗುತ್ತದೆ.
ಸಾಧಕರಿಗೆ ಸನ್ಮಾನ
ಪರಿಸರ, ವೈಜ್ಞಾನಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಾಡಿನ ಹತ್ತು ಜನ ಸಾಧಕರನ್ನು ಗುರುತಿಸಿ, ಸನ್ಮಾನವನ್ನು ಮಾಡಲಾಗುತ್ತದೆ.
ಪ್ರದರ್ಶನ ಮಳಿಗೆಗಳು:
ವಿಚಾರ ಸಂಕಿರಣದ ಮುಖ್ಯ ವಿಷಯಕ್ಕೆ ಸಂಬಂಧಿಸಿದಂತೆ ವಿವಿಧ ತಂತ್ರಜ್ಞಾನಗಳ ಕುರಿತ ವಿಚಾರ ಮಂಡನೆ ಹಾಗೂ ವಸ್ತುಪ್ರದರ್ಶನವನ್ನು ಏರ್ಪಡಿಸಲಾಗಿದೆ. ಜಿಯೋಗ್ರಾಫಿಕಲ್ ಇನ್‍ಫಾರ್ಮೇಶನ್ ಸಿಸ್ಟಮ್, ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್, ರಿಮೋಟ್ ಸೆನ್ಸಿಂಗ್, ಇಮೇಜ್ ಪ್ರೊಸೆಸಿಂಗ್, ಕಾರ್ಟೋಗ್ರಫಿ ಉಪಕರಣಗಳು ಪ್ರದರ್ಶನವಿರಲಿದೆ. ಎಲ್ಲಾ ವೈಜ್ಞಾನಿಕ ಉಪಕರಣಗಳ ಪ್ರದರ್ಶನಕ್ಕೂ ಅವಕಾಶವಿದ್ದು, ಆಸಕ್ತ ಸಂಸ್ಥೆಗಳು ಭಾಗವಹಿಸಬಹುದಾಗಿದೆ. ಪ್ರದರ್ಶನ ಮಳಿಗೆಗಳ ನೋಂದಾವಣೆ ಶುಲ್ಕ ರು.25000 ಇದ್ದು, `ಲೇಕ್ 2016, ಆಳ್ವಾಸ್ ಕಾಲೇಜ್’ ಮೂಡಬಿದಿರೆ ಹೆಸರಿನಲ್ಲಿ ಡಿಡಿ ಮೂಲಕ ಪಾವತಿಸಬಹುದಾಗಿದೆ. ನೋಂದಾಯಿತ ಸಂಸ್ಥೆಗಳಿಗೆ 10 ನಿಮಿಷಗಳ ವಿಚಾರ ಮಂಡನಗೆÉ ಅವಕಾಶ ಕಲ್ಪಿಸಲಾಗಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಲೇಕ್ ವಿಚಾರಸಂಕಿರಣದ ಅಧ್ಯಕ್ಷರನ್ನು ಸಂಪರ್ಕಿಸಲು ಕೋರಲಾಗಿದೆ.
ಕಾರ್ಯಕ್ರಮದ ವಿವರಗಳು
ಡಿಸೆಂಬರ್ 28ರಂದು ಬೆಳಗ್ಗೆ 9.00ಕ್ಕೆ ಲೇಕ್ ವಿಚಾರಸಂಕಿರಣದ ಉದ್ಘಾಟನೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಎಸ್.ಭೈರಪ್ಪ ನೆರವೇರಿಸಲಿದ್ದಾರೆ. ಶಿರಸಿಯ ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸ್ವಾಮೀಜಿ, ಮೂಡುಬಿದಿರೆಯ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾಚಾರ್ಯ ಸ್ವಾಮೀಜಿ, ಪಂಡಿತಾಚಾರ್ಯವರ್ಯ ಸಾಮೀಜಿ, ಬೆಂಗಳೂರಿನ ಆರ್.ಕೆ. ಮಿಶನ್‍ನ ಶ್ರೀ ವಿಷ್ಣುಮಾಯಂದಾ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ. ಉಳಿದಂತೆ ಮೂಡುಬಿದಿರೆಯ ಶಾಸಕ ಅಭಯಚಂದ್ರ ಜೈನ್, ಅಧಮ್ಯ ಚೇತನ ಪೌಂಡೇಶನ್ ನ ತೇಜಸ್ವಿನಿ ಅನಂತಕುಮಾರ್, ಪಶ್ಚಿಮ ಘಟ್ಟಗಳ ಟಾಸ್ಕ್ ಫೋರ್ಸ್‍ನ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಸಿಸರ್ ಭಾಗವಹಿಸಲಿದ್ದಾರೆ.
ಡಿಸೆಂಬರ್ 29, 2016
ಯುವ ಲೇಕ್ ವಿಚಾರಸಂಕಿರಣ
ಕೇಂದ್ರ ಸಚಿವ ಅನಂತಕುಮಾರ್ ಯುವ ಲೇಕ್ ವಿಚಾರಸಂಕಿರಣವನ್ನು ಉದ್ಘಾಟಿಸಲಿದ್ದಾರೆ. ಶೈಕ್ಷಣಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರನ್ನು ಇದೇ ವೇದಿಕೆಯಲ್ಲಿ ಕೇಂದ್ರ ಸಚಿವರು ಗೌರವಿಸಲಿದ್ದಾರೆ. ವಿವಿಧ ಹತ್ತು ಸಭಾಂಗಣಗಳಲ್ಲಿ ವಿಚಾರ ಸಂಕಿರಣದ ವಿಷಯಗಳ ವಿಚಾರ ಮಂಡನೆ ನಡೆಯಲಿದ್ದು, (ವಿ.ಎಸ್ ಆಚಾರ್ಯ ಸಭಾಂಗಣ, ಕುವೆಂಪು ಸಭಾಭವನ, ಪಯಸ್ವಿನಿ ಹಾಲ್, ಪಲ್ಗುಣಿ ಹಾಲ್, ಸೀತಾನದಿ ಹಾಲ್, ಶಾಂಭವಿ ಹಾಲ್, ನಂದಿನಿ ಹಾಲ್, ಹೊಸ ಪದವಿ ಕಟ್ಟಡ) ಯುವ ವಿಜ್ಞಾನಿಗಳು, ಸಂಶೋಧಕರು, ವಿದ್ಯಾರ್ಥಿಗಳು ತಮ್ಮ ಸಂಶೋಧನೆಗಳನ್ನು ಮಂಡಿಸಲಿದ್ದಾರೆ.
ಜಾನಿ ಬಾಯೋಸ್ಫಿಯರ್ ಕಾರ್ಯಕ್ರಮ
ಬೆಂಗಳೂರಿನ ಕೆ.ಕೆ ಪ್ರೌಡಶಾಲೆಯ ಪ್ರಾಚಾರ್ಯ, ಎಂ.ಎ ಖಾನ್, ಪ್ರೌಡ ಶಾಲಾ ಮಕ್ಕಳಿಗಾಗಿ, ನುಡಿಸಿರಿ ವೇದಿಕೆಯಲ್ಲಿ ಪರಿಸರ, ನೆಲ, ಜಲ ಸಂರಕ್ಷಣೆ ಹಾಗೂ ಸುಸ್ಥಿರ ನಿರ್ವಹಣೆ ಕುರಿತು ಮಾಹಿತಿ ನೀಡಲಿದ್ದಾರೆ.


Spread the love