ವರ್ಷಾಚರಣೆಯ ಸಂಭ್ರಮದಲ್ಲಿ‘ಉದಯರಾಗ’

Spread the love

ವರ್ಷಾಚರಣೆಯ ಸಂಭ್ರಮದಲ್ಲಿ‘ಉದಯರಾಗ’

ಸುರತ್ಕಲ್‍ನ ನಾಗರಿಕ ಸಲಹಾ ಸಮಿತಿ ಮತ್ತು ಮಣಿಕೃಷ್ಣಸ್ವಾಮಿಅಕಾಡಮಿ (ರಿ) ಸಂಸ್ಥೆಗಳು ದಿನಾಂಕ 01.04.2018ರಂದು ಪ್ರಾರಂಭಿಸಿದ ಸುರತ್ಕಲ್ ಫ್ಲೈಓವರ್ ತಳಭಾಗದಲ್ಲಿನ ಉದಯರಾಗ ಸಂಗೀತಕಾರ್ಯಕ್ರಮವು ದಿನಾಂಕ 03.03.2019ರ ತನ್ನ 13ನೇ ಕಾರ್ಯಕ್ರಮದ ಸಂಗೀತಕಛೇರಿಯೊಂದಿಗೆಒಂದು ವರ್ಷವನ್ನು ಪೂರ್ತಿಗೊಳಿಸುತ್ತಿದೆ.

ಪ್ರತಿ ತಿಂಗಳ ಮೊದಲ ಭಾನುವಾರ ಬೆಳಗ್ಗೆ ಗಂ 6.00ರಿಂದ 7.00ರ ತನಕ ನಡೆಯುತ್ತಿರುವಈ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಸುಮಾರು 40ಕ್ಕೂ ಮೀರಿಯುವ ಕಲಾವಿದರುಗಳು ಪ್ರದರ್ಶನಗಳನ್ನು ನೀಡಿರುತ್ತಾರೆ.ಪ್ರತಿಕಾರ್ಯಕ್ರಮಕ್ಕೂ ಕೇಳುಗರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು ಪ್ರಸ್ತುತ ಸುಮಾರು 80ರಿಂದ 100 ಮಂದಿ ಈ ಕಾರ್ಯಕ್ರಮಕ್ಕೆ ಶ್ರೋತೃಗಳಾಗಿ ಭಾಗವಹಿಸುತ್ತಿದ್ದಾರೆ.

ಸುಂದರೀಕರಣಗೊಂಡ ಫ್ಲೈಓವರ್ ತಳಭಾಗದಲ್ಲಿ ಈ ರೀತಿ ಸಂಗೀತಕಛೇರಿ ನಡೆಯುತ್ತಿರುವುದುರಾಷ್ಟ್ರದಲ್ಲೇಅಪರೂಪವಾಗಿದ್ದುಚೆನ್ನೈ, ಬೆಂಗಳೂರು, ಮೈಸೂರಿನಂತಹಾ ಸಂಗೀತ ವಲಯದಲ್ಲೂ ಈ ಕಾರ್ಯಕ್ರಮವುಅತ್ಯಂತ ಪ್ರಶಂಸಗೆ ಪಾತ್ರವಾಗಿದೆ.ವಿಭಿನ್ನ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸ್ಥಳೀಯ ಬಾಲ ಮತ್ತುಯುವ ಪ್ರತಿಭೆಗಳನ್ನು ಗುರುತಿಸಿ,ಪ್ರೋತ್ಸಾಹಿಸುತ್ತಿರುವಕಾರ್ಯಕ್ರಮ ಸಾರ್ವಜನಿಕರಿಂದ ವಿಶೇಷ ಮನ್ನಣೆಗೆ ಪಾತ್ರವಾಗಿದೆ.

03.03.2019, ಭಾನುವಾರದಂದು ಬೆಳಗ್ಗೆ ಗಂ 6.00ರಿಂದ 7.00ರ ತನಕ ನಡೆಯಲಿರುವಕಾರ್ಯಕ್ರಮದಲ್ಲಿ ಸಂಗೀತ ಗುರುಗಳಾದ ರಾಜೇಶ್‍ಬಾಗಲೋಡಿಇವರಶಿಷ್ಯರಾದ ಸಂಜನಾಆರ್ ಬಾಗಲೋಡಿ, ಶ್ರೀ ಹರ್ಷ, ಸಾಯಿ ಸಂಕೇತ್, ವಿಶ್ವನಾಥ ಮಲ್ಯಮತ್ತುರಾಮಕೃಷ್ಣ ಮಲ್ಯಇವರಿಂದಕೊಳಲು ವಾದನ ನಡೆಯಲಿದ್ದುಇವರಿಗೆ ಧನಶ್ರೀ ಶಬರಾಯ ವಯಲಿನ್‍ನಲ್ಲಿಹಾಗೂ ಸುಮುಖ ಕಾರಂತ ಮೃದಂಗದಲ್ಲಿ ಸಹಕರಿಸಲಿದ್ದಾರೆ. ಸಂಗೀತಕಾರ್ಯಕ್ರಮದ ಬಳಿಕ ವರ್ಷಪೂರ್ತಿಉದಯರಾಗ ಸರಣಿ ಸಂಗೀತಕಾರ್ಯಕ್ರಮಕ್ಕೆ ಸಹಕರಿಸಿದವರನ್ನು ಸನ್ಮಾನಿಸಲಿದ್ದು ಈ ಕಾರ್ಯಕ್ರಮದಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು, ಎಮ್‍ಆರ್ ಪಿ ಎಲ್‍ನ ಆಡಳಿತ ನಿರ್ದೇಶಕ ಎಂ ವೆಂಟೇಶ್ ಮತ್ತು ಹಿರಿಯ ನಾಗಸ್ವರ ವಿದ್ವಾಂಸ ನಾಗೇಶ್ ಎ ಬಪ್ಪನಾಡು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವುದಾಗಿ ಮಣಿಕೃಷ್ಣಸ್ವಾಮಿಅಕಾಡಮಿಯ ಕಾರ್ಯದರ್ಶಿ ಪಿ ನಿತ್ಯಾನಂದರಾವ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿರುತ್ತಾರೆ.

ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿಕಲಾಸಕ್ತರು ಆಗಮಿಸಬೇಕಾಗಿ ನಾಗರಿಕಾ ಸಲಹಾ ಸಮಿತಿಯ ಸಂಚಾಲಕರಾದಡಾ ಕೆ ರಾಜಮೋಹನ್‍ರಾವ್‍ಕೇಳಿಕೊಂಡಿರುತ್ತಾರೆ.ಪತ್ರಿಕಾ ಗೋಷ್ಠಿಯಲ್ಲಿಅಕಾಡಮಿಯಗೌರವಾಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು, ನಾಗರಿಕಾ ಸಲಹಾ ಸಮಿತಿಯ ಪ್ರೊಕೃಷ್ಣಮೂರ್ತಿ ಮತ್ತುಕೆ ಸಚ್ಚಿದಾನಂದಇವರು ಉಪಸ್ಥಿತರಿದ್ದರು.


Spread the love