ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಸ್ಪೂರ್ತಿಯಾಗಲಿ- ಪ್ರಮೋದ್ ಮಧ್ವರಾಜ್

Spread the love

ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಸ್ಪೂರ್ತಿಯಾಗಲಿ- ಪ್ರಮೋದ್ ಮಧ್ವರಾಜ್

ಉಡುಪಿ: ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಸಾಧನೆಗಳನ್ನು ಮಾಡಲು ಡಾ. ಬಿ.ಆರ್. ಅಂಬೇಡ್ಕರ್ ಅವರ ಸ್ಪೂರ್ತಿಯಾಗಲಿದೆ ಎಂದು ರಾಜ್ಯದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

ಅವರು ಶುಕ್ರವಾರ, ಉಡುಪಿಯ ಪುರಭವನದಲ್ಲಿ , ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಷ್ಟ್ರೀಯ ಸೇವಾ ಯೋಜನಾ ಕೋಶ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಡಾ. ಬಿ.ಆರ್ ಅಂಬೇಡ್ಕರ್ ರಾಜ್ಯಮಟ್ಟದ ಅಧ್ಯಯನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಸ್ಪøಶ್ಯತೆಯ ಕಾರಣದಿಂದ ಬಾಲ್ಯದಲ್ಲಿ ಶಾಲೆಯ ಹೊಸ್ತಿಲಲ್ಲಿ ಕುಳಿತು ವಿಧ್ಯಾಬ್ಯಾಸ ಮಾಡಿದ ಅಂಬೇಡ್ಕರ್ ನಂತರ ಕೊಲಂಬಿಯ ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ಸೇರಿದಂತೆ ಹಲವು ಡಿಗ್ರಿಗಳನ್ನು ಪಡೆದು, ರಾಷ್ಟ್ರದ ಕಾನೂನು ಸಚಿವರಾಗಿ ದುರ್ಬಲರ, ಶೋಷಿತರ, ಮಹಿಳೆಯರಿಗಾಗಿ ಹಲವು ಕಾನೂನು ರೂಪಿಸಿದರಲ್ಲಧೇ, ಕಾರ್ಮಿಕರಿಗೆ ಲೇಬರ್ ಲಾ, ಹಿಂದೂ ಕೋಡ್ ಬಿಲ್ ಮೂಲಕ ಮಹಿಳೆಯರಿಗೆ ಆಸ್ತಿಯಲ್ಲಿ ಸಮಾನ ಹಕ್ಕು ನೀಡುವ ಕುರಿತು ಪ್ರಥಮವಾಗಿ ಪ್ರಯತ್ನಿಸಿದ್ದರು , ಅಂಬೇಡ್ಕರ್ ಅವರನ್ನು ದಲಿತರ ಪ್ರತಿನಿಧಿ ಎಂಬುದಾಗಿ ಪ್ರತಿಬಿಂಬಿಸುವುದು ಸರಿಯಲ್ಲ, ಅವರು ಇಡೀ ಭಾರತಕ್ಕೆ ಮತ್ತು ವಿಶ್ವಕ್ಕೆ ಸೇರಿದವರು , ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆಗಳು ವಿದ್ಯಾರ್ಥಿಗಳಿಗೆ ಉತ್ತಮ ರೋಲ್ ಮಾಡೆಲ್ ಎಂದು ಸಚಿವರು ತಿಳಿಸಿದರು.

ತಾವು ಸಚಿವರಾದ ಸಂದರ್ಭದಲ್ಲಿ ರಾಜ್ಯದಲ್ಲಿ 3.5 ಲಕ್ಷ ಎನ್.ಎಸ್.ಎಸ್. ಸ್ವಯಂ ಸೇವಕರಿದ್ದು, ಈ ಸಂಖ್ಯೆಯನ್ನು 10 ಲಕ್ಷಕ್ಕೆ ಏರಿಸುವ ಗುರಿ ಹೊಂದಿದ್ದು, ಪ್ರಸ್ತುತ 4.5 ಲಕ್ಷ ಸ್ವಯಂ ಸೇವಕರಿದ್ದಾರೆ, ರಾಜ್ಯದ ಬಜೆಟ್ ನಲ್ಲಿ ಎನ್.ಎಸ್.ಎಸ್ ಗೆ ನೀಡುವ ಅನುದಾನವನ್ನು 5 ಕೋಟಿಯಿಂದ 13 ಕೋಟಿಗೆ ಹಾಗೂ ಕ್ರೀಡಾ ಇಲಾಖೆಗೆ 145 ಕೋಟಿಯುಂದ 285 ಕೋಟಿಗಳಿಗೆ ಹೆಚ್ಚಿಸಲಾಗಿದೆ, ಎನ್.ಎಸ್.ಎಸ್ ನ್ನು ಬಲಪಡಿಸಲು ಹಾಗೂ ವಿದ್ಯಾರ್ಥಿಗಳನ್ನು ಆಕರ್ಷಿಸಲು ಅನೇಕ ಕಾರ್ಯಕ್ರಮಗಳನ್ನು ರೂಪಿಸಲು ನಿರ್ಧರಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಡುಪಿ ಜಿ.ಪಂ. ಅಧ್ಯಕ್ಷ ದಿನಕರ ಬಾಬು, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹ ಮೂರ್ತಿ, ಅಪರ ಜಿಲ್ಲಾದಿಕಾರಿ ಜಿ.ಅನುರಾಧ, ಮಹಿಳಾ ಸರಕಾರಿ ಪ್ರ.ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಜಗದೀಶ ರಾವ್, ಶಿವಸುಂದರ್, ಮಂಗಳೂರು ವಿವಿಯ ಎನ್.ಎಸ್.ಎಸ್ ಸಂಯೋಜನಾಧಿಕಾರಿ ಪ್ರೊ.ವಿನಿತಾ ರೈ ಉಪಸ್ಥಿತರಿದ್ದರು.

ರಾಜ್ಯ ಎನ್.ಎಸ್.ಎಸ್ ಅಧಿಕಾರಿ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಕೋಶದ ಪದ ನಿಮಿತ್ತ ಸರಕಾರದ ಜಂಟಿ ಕಾರ್ಯದರ್ಶಿ ಡಾ. ಗಣನಾಥ ಎಕ್ಕಾರು ಸ್ವಾಗತಿಸಿದರು. ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಶೆಟ್ಟಿ ನಿರೂಪಿಸಿದರು. ಅಧ್ಯಯನ ಶಿಬಿರದಲ್ಲಿ ವಿವಿಧ ವಿಶ್ವವಿದ್ಯಾಲಯಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಭಾಗವಹಿಸಿದ್ದರು.


Spread the love