ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ನೀಡುವುದೇ ಶಿಕ್ಷಣ ವ್ಯವಸ್ಥೆಯ ಆದ್ಯತೆಯಾಗಬೇಕು

Spread the love

ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ನೀಡುವುದೇ ಶಿಕ್ಷಣ ವ್ಯವಸ್ಥೆಯ ಆದ್ಯತೆಯಾಗಬೇಕು

ಮ0ಗಳೂರು : ಪ್ರಯೋಗಶೀಲತೆಯು ಪ್ರತಿ ಶಿಕ್ಷಕನ ವೃತ್ತಿಯ ಭಾಗವಾಗಬೇಕು. ಅರ್ಥಪೂರ್ಣ ಕಲಿಕೆಯ ಸಾಧನೆಗಾಗಿ ಶಿಕ್ಷಕನ ಹುಡುಕಾಟ ಸದಾ ಸಾಗುತ್ತಿರಬೇಕು ಎಂದು ಪ್ರಾಂಶುಪಾಲರಾದ ಎಸ್. ನಾಗೇಂದ್ರ ಮದ್ಯಸ್ಥ ಹೇಳಿದರು.

ಅವರು ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ಹಾಗೂ ಮಂಗಳೂರು ನಗರ ಪ್ರೌಢಶಾಲಾ ಮುಖ್ಯಸ್ಥರು ಮತ್ತು ಪ.ಪೂ. ಪ್ರಾಂಶುಪಾಲರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಎ.ಎಸ್. ನೀಲ್ ಇವರ ಸಮರ್‍ಹಿಲ್ ಕೃತಿಯ ಚಿಂತನ ಮಂಥನ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಎ.ಎಸ್.ನೀಲ್ ಒರ್ವ ಶ್ರೇóಷ್ಠ ಶಿಕ್ಷಣ ತಜ್ಞನಾಗಿದ್ದು, ಆತನ ಪ್ರಯೋಗಶೀಲತೆಯು ಇಂದಿಗೂ ಅತ್ಯಂತ ಉಪಯುಕ್ತವಾಗಿದೆ. ಈ ನಿಟ್ಟಿನಲ್ಲಿ ಆತನ ಪುಸ್ತಕದ ಅನುವಾದವನ್ನು ಮಾಡಿರುತ್ತೇನೆ. ವಿದ್ಯಾರ್ಥಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡುವ ನಿಟ್ಟಿನಲ್ಲಿ ಶಿಕ್ಷಕರ ಹಾಗೂ ಪೋಷಕರ ದೃಷ್ಟಿಕೋನ ಬದಲಾಗಬೇಕು. ಸಂತೃಪ್ತ ಮಗು ಎಂದರೆ ದುಗುಡವಿಲ್ಲದ ಮಗು.. ಎಂದು ಅನುವಾದಕರಾದ ಡಾ. ಎನ್. ಸುಕುಮಾರ ಗೌಡ ಹೇಳಿದರು. ಅವರ ಈ ಪುಸ್ತಕವನ್ನು ಮಂಗಳೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದಿಂದ ಶೀಘ್ರವೇ ಬಿಡುಗಡೆ ಆಗುವ ಕುರಿತು ವಿಶ್ವಾಸವನ್ನು ವ್ಯಕ್ತಪಡಿಸಿದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಅಲೋಸಿಯಸ್ ಡಿಸೋಜ ವಹಿಸಿದ್ದರು. ಸಮರ್‍ಹಿಲ್- ವೈದ್ಯನ ನೆಲೆಯಲ್ಲಿ: ಡಾ ಅರುಣಾ ಯಡ್ಯಾಲ್, ಪ್ರಾಧ್ಯಾಪಕರು, ಫಾದರ್ ಮುಲ್ಲರ್ಸ್ ಮೆಡಿಕಲ್ ಕಾಲೇಜು, ಸಮರ್‍ಹಿಲ್- ಶಿಕ್ಷಕನ ನೆಲೆಯಲ್ಲಿ: ಡಾ. ಎಚ್. ಕುಮಾರಸ್ವಾಮಿ, ಉಪನ್ಯಾಸಕರು, ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ, ಸಮರ್‍ಹಿಲ್- ಪೋಷಕನ ನೆಲೆಯಲ್ಲಿ: ಪ್ರೋ. ಝೇವಿಯರ್ ಡಿಸೋಜ, ಪ್ರಾಂಶುಪಾಲರು, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಪುತ್ತೂರು ಹಾಗೂ ಇಂದಿನ ವಿದ್ಯಮಾನದಲ್ಲಿ ಸಮರ್‍ಹಿಲ್‍ನ ಪ್ರಸ್ತುತತೆ ಕುರಿತಂತೆ ಕೆ.ಆರ್. ವಿದ್ಯಾಧರ್, ನ್ಯಾಯವಾದಿಗಳು, ಸಾಹಿತಿ ಹಾಗೂ ಪ್ರಗತಿಪರ ಚಿಂತಕರು, ಮಡಿಕೇರಿ ಇವರು ಮಾತನಾಡಿದರು.
ಇತಿಹಾಸ ತಜ್ಞ ಪ್ರೋ ಸುರೇಂದ್ರರಾವ್ ಸಮಯೋಚಿತವಾಗಿ ಮಾತನಾಡಿದರು. ಕಾಲೇಜಿನ ಉಪನ್ಯಾಸಕರಾದ ಅಶೋಕ ಕಾಮತ್ ಕಾರ್ಯಕ್ರಮ ನಿರ್ವಹಿಸಿದರು. ಪ್ರವಾಚಕರಾದ ವೈ ಶಿವರಾಮಯ್ಯ ಸ್ವಾಗತಿಸಿದರು. ಮಂಗಳೂರು ಉತ್ತರ ವಲಯದ ಪ್ರೌಢಶಾಲಾ ಮುಖ್ಯಶಿಕ್ಷಕರು ಹಾಗೂ ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ದೊಂಡಿದ್ದರು.


Spread the love