ವಿದ್ವಾಂಸರ ಸಬಲೀಕರಣಕ್ಕೆ ಪರಿಣಾಮಕಾರಿ ಸಂಶೋಧನಾ ಕಾರ್ಯಾಗಾರಗಳು ಅನಿವಾರ್ಯ : ಅಲೋಶಿಯಸ್ ಹೆನ್ರಿ ಸಿಕ್ವೇರ

Spread the love

ಸಂಶೋಧನೆಗಳು ವೈಜ್ಞಾನಿಕವಾಗಿ ಜ್ಞಾನವನ್ನು ವೃದ್ಧಿಸಲು ಸಹಕಾರಿಯಾಗುತ್ತದೆ. ಗುಣಾತ್ಮಕ ಸಂಶೋಧನೆ ನಡೆಸಲು ಹಾಗೂ ಭವಿಷ್ಯದಲ್ಲಿ ಸವಾಲುಗಳನ್ನು ಎದುರಿಸಲು ಹೊಸ ಸಂಶೋಧಕರಿಗೆ ಸಂಶೋಧನಾ ಕಾರ್ಯಾಗಾರಗಳು ಅನಿವಾರ್ಯವಾಗಿದೆ. ಉತ್ತಮ ಸಂಶೋಧನಾ ಫಲಿತಾಂಶ ಪಡೆಯಲು ಕಾರ್ಯಾಗಾರಗಳು ಕೀಲಿಕೈ ಇದ್ದಂತೆ ಎಂದು ಎನ್.ಐ.ಟಿ.ಕೆಯ ಸಂಶೋಧನಾ ತಜ್ಞರಾದ ಪೆÇ್ರ. ಆಲೋಶಿಯಸ್ ಹೆನ್ರಿ ಸಿಕ್ವೇರ ಇವರು ಹೇಳಿದರು.

besent-workshop

ಅವರು ಇತ್ತೀಚೆಗೆ ಬೆಸೆಂಟ್ ಸಂಧ್ಯಾ ಕಾಲೇಜಿನಲ್ಲಿ ಮೂರು ದಿನಗಳಲ್ಲಿ ನಡೆದ “ವಿದ್ವಾಂಸರ ಸಬಲೀಕರಣಕ್ಕಾಗಿ ಪರಿಣಾಮಕಾರಿ ಸಂಶೋಧನಾ ಪದ್ದತಿ” ಎಂಬ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಾ ಸಂಶೋಧನೆಗಳು ಜೀವನ ಮಟ್ಟವನ್ನು ವೃದ್ಧಿಸುತ್ತವೆ. ಪ್ರಧಾನಮಂತ್ರಿಯವರ ಕನಸಿನ ಯೋಜನೆಯಾದ ‘ಮೇಕ್ ಇನ್ ಇಂಡಿಯಾ’ ಪರಿಣಾಮಕಾರಿಯಾಗಿ ಯಶಸ್ವಿಯಾಗಲು ಹಾಗೂ ಭಾರತ ಅಭಿವೃದ್ಧಿಯಾಗಲು ‘ರಿಸರ್ಚ್ ಇನ್ ಇಂಡಿಯಾ’ ಕೂಡಾ ಇಂದು ಹೆಚ್ಚು ಪ್ರಸ್ತುತ. ಭಾರತದಲ್ಲಿ ಸಂಶೋಧನೆಯ ಕೊರತೆ ಇದೆ. ಗುಣಾತ್ಮಕ ಸಂಶೋಧನೆಯನ್ನು ಮಾಡಲು ವಿಪುಲವಾದ ಅವಕಾಶಗಳಿವೆ. ಸಂಶೋಧನೆಗಳು ಸ್ವ-ಇಚ್ಛೆಯಿಂದ ನಡೆಯಬೇಕು ಹಾಗೂ ಜೀವನದ ಭಾಗವಾಗಬೇಕು. ಸಂಶೋಧನೆಯನ್ನು ಪ್ರೀತಿಸುವ ಹಾಗೂ ಮೈಗೂಡಿಸಿಕೊಳ್ಳುವ ಸ್ವಭಾವ ನಮ್ಮದಾಗಬೇಕು. ಕೃತಿಚೌರ್ಯ ಸಂಶೋಧನೆಗೆ ಮಾರಕವಾಗಿದೆ. ಇದು ಗುಣಾತ್ಮಕ ಫಲಿತಾಂಶ ನೀಡುವುದಿಲ್ಲ ಎಂದು ಹೇಳಿದರು.
ಇನ್ನೋರ್ವ ಮುಖ್ಯ ಅಥಿತಿ ನಿಟ್ಟೆಯ ಜಸ್ಟಿಸ್ ಕೆ.ಎಸ್. ಹೆಗ್ಡೆ ಆಡಳಿತ ಸಂಸ್ಥೆಯ ಡಾ. ಆಶಲತಾ ಕೆ ಇವರು ತಮ್ಮ ಭಾಷಣದಲ್ಲಿ ಸಂಶೋಧನೆಗಳು ಶಿಕ್ಷಣದ ಅವಿಭಾಜ್ಯ ಅಂಗ, ನಾವು ಗತಕಾಲವನ್ನು ಬದಲಿಸಲು ಸಾಧ್ಯವಿಲ್ಲ ಆದರೆ ಗುಣಾತ್ಮಕ ಸಂಶೋಧನೆಗಳ ಮೂಲಕ ಭವಿಷ್ಯವನ್ನು ಬದಲಿಸಲು ಸಾಧ್ಯ. ಉತ್ತಮ ಸಂಶೋಧನಾ ಕಾರ್ಯಾಗಾರಗಳ ಮೂಲಕ ಸೃಜನಾತ್ಮಕ ಸಂಶೋಧನೆ ಮಾಡಲು ಸಾಧ್ಯ ಎಂದು ಹೇಳಿದರು.
ರಾಷ್ಟ್ರೀಯ ಮಹಿಳಾ ಶಿಕ್ಷಣ ಸಂಘದ ಅಧ್ಯಕ್ಷರಾದ ಶ್ರೀ ಕುಡ್ಪಿ ಜಗದೀಶ್ ಶೆಣೈಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸಂಶೋಧನೆಗಳು ನಮ್ಮ ಜೀವನದ ಗುಣಮಟ್ಟವನ್ನು ವೃದ್ಧಿಸುತ್ತವೆ ಎಂದರು ಹಾಗೂ ಸಂಘಟಕರನ್ನು ಈ ಸಂದರ್ಭದಲ್ಲಿ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಕಾರ್ಯಾಗಾರದ ಸಿ.ಡಿ. ಹಾಗೂ ಕಾಲೇಜಿನ ಸಂಶೋಧನಾ ನಿಯತಕಾಲಿಕೆ ‘ಗ್ಲೋಬಲ್ ರಿಸರ್ಚ್ ರಿವ್ಯೂ’ವನ್ನು ಬಿಡುಗಡೆಗೊಳಿಸಲಾಯಿತು. ಕಾಲೇಜಿನ ಸಂಚಾಲಕರಾದ ನಗರ್ ನಾರಾಯಣ್ ಶೆಣೈ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಕಾರ್ಮೆಲಿಟಾ ಗೋವಿಯಸ್‍ರವರು ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಕಾರ್ಯಾಗಾರದ ಸಂಘಟನಾ ಕಾರ್ಯದರ್ಶಿ ಡಾ.ವಾಸಪ್ಪ ಗೌಡ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಾಗಾರದ ಸಲಹೆಗಾರ ಜ್ಞಾನೇಶ್ವರ್ ಪೈ ಮಾರೂರ್ ಇವರು ನಿಯತಕಾಲಿಕೆಯ ಬಗ್ಗೆ ಮಾತನಾಡಿದರು. ತಾರಾ ಶೆಟ್ಟಿ ಇವರು ವಂದಿಸಿದರು. ಕುಮಾರಿ ದೀಕ್ಷಾ ರಾವ್ ಕಾರ್ಯಕ್ರಮವನ್ನು ನಿರೂಪಿಸಿದರು.


Spread the love