ವಿನಾ ಕಾರಣ ಹಿಂದೂ ಕಾರ್ಯಕರ್ತರ ಮೇಲೆ ಕೊಲೆ ಯತ್ನ ಕೇಸು ದಾಖಲಿಸಿದ್ದು ಖಂಡನೀಯ – ದಿನೇಶ್ ಮೆಂಡನ್
ಉಡುಪಿ: ವಿನಾ ಕಾರಣ ಹಿಂದೂ ಕಾರ್ಯಕರ್ತರ ಮೇಲೆ ಕೊಲೆ ಯತ್ನ ಕೇಸು ದಾಖಲು ಮಾಡಿದ ಪೊಲೀಸ್ ಇಲಾಖೆಯ ನಡೆ ಖಂಡನೀಯ ಎಂದು ವಿಶ್ವ ಹಿಂದೂ ಪರಿಷದ್ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್ ತಿಳಿಸಿದ್ದಾರೆ.
ಮೇ 1 ರಂದು ರಾತ್ರಿ ಹಿರಿಯಡಕ ಬಜರಂಗದಳ ಕಾರ್ಯಕರ್ತರಿಬ್ಬರ ಮೇಲೆ ಕೊಲೆ ಯತ್ನ ದಾಖಲು ಮಾಡಿದ ಕ್ರಮವನ್ನು ವಿಶ್ವ ಹಿಂದು ಪರಿಷದ್ ಬಜರಂಗದಳ ಉಡುಪಿ ಜಿಲ್ಲೆ ತೀವ್ರವಾಗಿ ಖಂಡಿಸುತ್ತದೆ. ವೈಯಕ್ತಿಕ ವಿಚಾರವಾಗಿ ನಡೆದ ಗಲಾಟೆಯನ್ನು ಕಾಂಗ್ರೆಸ್ ಸರ್ಕಾರದ ಒತ್ತಡಕ್ಕೆಮಣಿದು ಹಿಂದೂ ಕಾರ್ಯಕರ್ತರನ್ನು ದಮನಿಸುವ ಕೆಲಸ ಈ ರಾಜ್ಯದಲ್ಲಿ ಮುಂದುವರೆದಿದ್ದು ಉಡುಪಿ ಜಿಲ್ಲೆಯಲ್ಲಿಯೂ ಕೂಡ ಕಾರ್ಯಕರ್ತರ ಮೇಲೆ ಕೇಸು ದಾಖಲು ಮಾಡಿ ಕಾರ್ಯಕರ್ತರ ಮಾನಸಿಕತೆಯನ್ನು ಕುಗ್ಗಿಸುವ ಯತ್ನ ನಡೆಯುತ್ತಿದೆ. ಇದೇ ರೀತಿ ಜಿಲ್ಲೆಯಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ವಿನಾ ಕಾರಣ ಕೇಸು ದಾಖಲು ಮಾಡುವುದನ್ನು ಮುಂದುವರೆಸಿದರೆ ಮುಂದಿನ ದಿನದಲ್ಲಿ ಎಲ್ಲಾ ಹಿಂದೂ ಸಂಘಟನೆಯ ನೇತೃತ್ವದಲ್ಲಿ ಇಲಾಖೆ ವಿರುದ್ಧ ಬ್ರಹತ್ ಪ್ರತಿಭಟನೆಯನ್ನು ನಡೆಸಬೇಕಾಗುತ್ತದೆ ಎಂದು ದಿನೇಶ್ ಮೆಂಡನ್ ಮಾಧ್ಯಿಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.