ವಿಶ್ವ ಕೊಂಕಣಿ ಕೇಂದ್ರ 5 ಪ್ರಶಸ್ತಿಗಳಿಗೆ ಅರ್ಜಿ ಅಹ್ವಾನ

Spread the love

ವಿಶ್ವ ಕೊಂಕಣಿ ಕೇಂದ್ರ 5 ಪ್ರಶಸ್ತಿಗಳಿಗೆ ಅರ್ಜಿ ಅಹ್ವಾನ

2025 ನೇ ಸಾಲಿನ “ಬಸ್ತಿ ವಾಮನ್ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರ್ 1 & 2” ಹಾಗೂ “ವಿಮಲಾ ವಿ ಪೈ ವಿಶ್ವ ಕೊಂಕಣಿ 3) ಜೀವನ ಸಿದ್ದಿ ಸಮ್ಮಾನ್ 4) ಸಾಹಿತ್ಯ ಕೃತಿ, 5) ಕವಿತಾ ಕೃತಿ ಈ 5 ಪ್ರಶಸ್ತಿಗಳಿಗೆ ಅರ್ಜಿ ಅಹ್ವಾನ

ಬಸ್ತಿ ವಾಮನ್ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರ್ 1&2”: ಮೂಲತ ಕೊಂಕಣಿ ಭಾಷಿಕರಾಗಿದ್ದು ಶಿಕ್ಷಣ, ಆಡಳಿತ, ಕೊಂಕಣಿತೇತರ ಸಾಹಿತ್ಯ, ಪ್ರದರ್ಶನ ಕಲೆ, ಆರೊಗ್ಯ-ವೈದ್ಯಕೀಯ, ವಿಜ್ಞಾನ-ತಂತ್ರಜ್ಞಾನ, ಪತ್ರಿಕೋದ್ಯಮ, ಲೆಕ್ಕಪರಿಶೋಧನೆ, ಬ್ಯಾಂಕಿಂಗ್, ವಾಣಿಜ್ಯೋದ್ಯಮ, ರಕ್ಷಣಾಪಡೆ, ಕ್ರೀಡೆ, ಹಿರಿಯರ-ಮಕ್ಕಳ-ಮಹಿಳೆಯರ-ನೊಂದವರ ಸೇವೆ, ಜನ-ಸಮಾಜ-ದೇಶಸೇವೆ ಇತ್ಯಾದಿ ಕ್ಷೇತ್ರದಲ್ಲಿ ಉನ್ನತ ಪ್ರಮಾಣದ ಪ್ರಾಮಾಣಿಕ ಸೇವೆ ನೀಡಿರುವ ವ್ಯಕ್ತಿ ಅಥವಾ ಸಂಘ ಸಂಸ್ಥೆ-ಸಂಘಟನೆಗಳೂ ಸೇರಿ -ತಲಾ ಒರ್ವ ಪುರುಷ ಹಾಗೂ ಓರ್ವ ಮಹಿಳೆಗೆ ಬೇರೆ ಬೇರೆಯಾಗಿ, “ಬಸ್ತಿ ವಾಮನ್ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರ 1&2” ಪ್ರಶಸ್ತಿಗಳಿಗೆ ಸಾರ್ವಜನಿಕರು ಹೆಸರು ಸೂಚಿಸುವಂತೆ ಕೇಳಿಕೊಳ್ಳಲಾಗಿದೆ.

“ವಿಮಲಾ ವಿ ಪೈ ವಿಶ್ವ ಕೊಂಕಣಿ ಜೀವನ ಸಿದ್ದಿ ಸಮ್ಮಾನ್”: ಮೂರನೆಯದಾಗಿ, ಕೊಂಕಣಿ ಭಾಷೆ, ಶಿಕ್ಷಣ, ಕಲೆ, ಸಂಸ್ಕೃತಿಯ ಬೆಳವಣಿಗಾಗಿ ಜೀವನವನ್ನೇ ಮುಡಿಪಾಗಿಟ್ಟು ದುಡಿದ ಓರ್ವ ಕೊಂಕಣಿ ಹಿರಿಯ ನಾಗರಿಕರಿಗೆ ಕೊಡಮಾಡುವ ” ವಿಮಲಾ ವಿ ಪೈ ವಿಶ್ವ ಕೊಂಕಣಿ ಜೀವನ ಸಿದ್ದಿ ಸಮ್ಮಾನ್” ಈ ಪ್ರಶಸ್ತಿಗೂ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

“ವಿಮಲಾ ವಿ ಪೈ ವಿಶ್ವ ಕೊಂಕಣಿ ಸಾಹಿತ್ಯ ಕೃತಿ ಮತ್ತು ಕವಿತಾ ಕೃತಿ ಪುರಸ್ಕಾರ:

ಜನವರಿ-1, 2022 ರಿಂದ ಡಿ 31, 2024 ರ ಅವಧಿಯಲ್ಲಿ ಪ್ರಕಟಗೊಂಡ ಉತ್ತಮ ಒಂದು ಸಾಹಿತ್ಯ ಕೃತಿ (ಗದ್ಯ) ಮತ್ತು ಒಂದು ಕವಿತಾ ಕೃತಿ ಇವುಗಳಿಗೆ ತಲಾ ಒಂದು ಪ್ರಶಸ್ತಿ ನೀಡಲಾಗುವುದು. ಅರ್ಹ ಕೃತಿಗಳ ಹೆಸರನ್ನು ಸೂಚಿಸಿ, ಅರ್ಜಿ ಆಹ್ವಾನಿಸಲಾಗಿದೆ. ಕೃತಿಗಳು ಅನುವಾದಿತ ಅಥವಾ ಶಿಕ್ಷಣಾಧ್ಯಯನಕ್ಕೆ ಸಂಬಂಧಿಸಿದವುಗಳಾಗಿರಬಾರದು.

ಈ ಐದು ಪ್ರಶಸ್ತಿಯು ತಲಾ ಒಂದು ಲಕ್ಷ ರೂಪಾಯಿ ನಗದು ಹಾಗೂ ಸನ್ಮಾನ ಪತ್ರ ಫಲಕಗಳನ್ನು ಒಳಗೊಂಡಿದ್ದು, ವಿಶ್ವ ಕೊಂಕಣಿ ಕೇಂದ್ರದ ಮಹಾಪೋಷಕರಾದ ಶ್ರೀ ಟಿ ವಿ ಮೊಹನದಾಸ್ ಪೈಯವರ ಮಾತೃಶ್ರೀ ವಿಮಲಾ ವಿ ಪೈ ಇವರ ಸ್ಮರಣಾರ್ಥ ಕೊಡಲಾಗುತ್ತಿದೆ.

ಆಸಕ್ತ ವ್ಯಕ್ತಿಗಳು ಅಥವಾ ಸಂಘ ಸಂಸ್ಥೆಗಳು ವಿಶ್ವ ಕೊಂಕಣಿ ಕೇಂದ್ರದ ವೆಬ್ ಸೈಟ್ www.vishwakonkani.org ನಿಂದ ಮಾಹಿತಿ ಪಡೆದು, ದಿನಾಂಕ 30-09-2೦25 ರ ಒಳಗಾಗಿ ಆನ್-ಲೈನ್ ರೂಪದಲ್ಲಿ ನಾಮನಿರ್ದೇಶನ ನೊಂದಾಯಿಸಿಕೊಂಡು, ಈ ಬಗ್ಗೆ ಸಲ್ಲಿಸುವ ಭಾವಚಿತ್ರ, ಪ್ರಶಂಸಾ ಪತ್ರ ಹಾಗೂ ಸಾಹಿತ್ಯ ಕೃತಿ ಮತ್ತು ಕವಿತಾ ಕೃತಿ ಪುಸ್ತಕಗಳು ಇತ್ಯಾದಿ ಎಲ್ಲಾ ದಾಖಲೆಗಳನ್ನು ನೇರವಾಗಿ ಅಂಚೆ ಮೂಲಕ ಅಧ್ಯಕ್ಷರು, ವಿಶ್ವ ಕೊಂಕಣಿ ಕೇಂದ್ರ, ಶಕ್ತಿನಗರ, ಮಂಗಳೂರು-575016 ಕಳುಹಿಸಿ ಕೊಡಬೇಕಾಗಿ ಕೋರಲಾಗಿದೆ.


Spread the love
Subscribe
Notify of

0 Comments
Inline Feedbacks
View all comments