ವ್ಯಾಸರಾಜರ ಬೃಂದಾವನ ದ್ವಂಸ ಪ್ರಕರಣ – ಸಂಸದ ನಳಿನ್ ಖಂಡನೆ

Spread the love

ವ್ಯಾಸರಾಜರ ಬೃಂದಾವನ ದ್ವಂಸ ಪ್ರಕರಣ – ಸಂಸದ ನಳಿನ್ ಖಂಡನೆ

ಮಂಗಳೂರು: ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮದ ತುಂಗಭದ್ರಾ ನದಿಯ ದಡದಲ್ಲಿರುವ ನವಬೃಂದಾವನದಲ್ಲಿ ವ್ಯಾಸರಾಜರ ಬೃಂದಾವನವನ್ನು ದುಷ್ಕರ್ಮಿಗಳು ನಿಧಿ ಆಸೆಗಾಗಿ ಧ್ವಂಸಗೊಳಿಸಿರುವ ಘಟನೆ ತೀವ್ರ ಆಘಾತವನ್ನುಂಟುಮಾಡಿದೆ. ದುಷ್ಕರ್ಮಿಗಳ ಈ ಹೇಯ ಕೃತ್ಯವನ್ನು ದಕ ಜಿಲ್ಲಾ ಸಂಸದ ನಳೀನ್ ಕುಮಾರ್ ಕಟೀಲ್ ಖಂಡಿಸಿದ್ದಾರೆ.

ನವಬೃಂದಾವನವು ಹಂಪಿ ಪ್ರಾಧಿಕಾರದ ಕ್ಷೇತ್ರವ್ಯಾಪ್ತಿಯಲ್ಲಿದ್ದು ಸಂರಕ್ಷಿತ ಸ್ಮಾರಕಗಳಲ್ಲಿ ಒಂದಾಗಿದೆ. ಹಿಂದೂಗಳ ಶ್ರದ್ಧಾ ಕೇಂದ್ರಗಳಲ್ಲೊಂದಾದ ಈ ಪುಣ್ಯ ಸ್ಮಾರಕವನ್ನು ಸಂರಕ್ಷಿಸುವುದು ಸರ್ಕಾರದ ಹಾಗೂ ಹಂಪಿ ಪ್ರಾಧಿಕಾರದ ಆದ್ಯ ಕರ್ತವ್ಯವಾಗಿದೆ. ಇಂತಹ ಪವಿತ್ರ ಸ್ಮಾರಕಗಳು ಕಿಡಗೇಡಿಗಳಿಂದ ಧ್ವಂಸಗೊಳ್ಳಲು ಸರಕಾರದ ಹಾಗೂ ಇಲಾಖೆಯ ನಿರ್ಲಕ್ಷ್ಯವೇ ಕಾರಣ.

ಜಿಲ್ಲಾಡಳಿತ ಹಾಗೂ ಸಂಬಂಧಿತ ಇಲಾಖೆಗಳು ಇನ್ನು ಮುಂದೆ ಇಂತಹ ಕೃತ್ಯ ನಡೆಯದಂತೆ ಈ ಸ್ಮಾರಕ ಸೇರಿದಂತೆ ರಾಜ್ಯಾದ್ಯಂತ ಇರುವ ಎಲ್ಲಾ ಸ್ಮಾರಕಗಳಿಗೆ ವಿಶೇಷ ರಕ್ಷಣೆ ನೀಡಬೇಕೆಂದು ಆಗ್ರಹಿಸುತ್ತೇನೆ. ಈ ಹೇಯ ಕೃತ್ಯ ನಡೆಸಿದ ಎಲ್ಲಾ ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಹಚ್ಚಲು ಪೊಲೀಸ್ ಇಲಾಖೆಯು ಶೀಘ್ರ ಕ್ರಮ ಕೈಗೊಳ್ಳಬೇಕು ಹಾಗೂ ಹಾನಿಗೊಳಗಾದ ಬೃಂದಾವನವನ್ನು ಸಂಬಂಧ ಪಟ್ಟ ಇಲಾಖೆಯು ಪುನರ್ ನಿರ್ಮಿಸಿ ಅದರ ಪಾವಿತ್ರ್ಯತೆಯನ್ನು ಕಾಪಾಡಬೇಕೆಂದು ಆಗ್ರಹಿಸಿದ್ದಾರೆ.


Spread the love