ಶಂಕರನಾರಾಯಣ: ಇಸ್ಪೀಟ್ – ಜೂಜಾಟವಾಡುತ್ತಿದ್ದ 10 ಮಂದಿಯ ಬಂಧನ

Spread the love

ಶಂಕರನಾರಾಯಣ: ಇಸ್ಪೀಟ್ – ಜೂಜಾಟವಾಡುತ್ತಿದ್ದ 10 ಮಂದಿಯ ಬಂಧನ

ಕುಂದಾಪುರ: ಹಣವನ್ನು ಪಣವಾಗಿರಿಸಿ ಅಂದರ್ – ಬಾಹರ್ ಇಸ್ಪೀಟ್ ಜೂಜು ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ, ಹತ್ತು ಮಂದಿಯನ್ನು ವಶಕ್ಕೆ ಪಡೆದ ಘಟನೆ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದಾಪುರದಲ್ಲಿ ಶುಕ್ರವಾರ ನಡೆದಿದೆ.

ಬಂಧಿತರನ್ನು ಸುಬ್ರಹ್ಮಣ್ಯ, ಅಶ್ರಫ್, ಸುನೀಲ್, ಧೀರಜ್, ಶಂಕರ, ಸುಧೀರ್ ಕುಮಾರ, ಮಧುಕರ, ಮನೋಹರ, ಗಣೇಶ ಮತ್ತು ರಾಮ ಎಂದು ಗುರುತಿಸಲಾಗಿದೆ.

ಶುಕ್ರವಾರ ಕುಂದಾಪುರ ತಾಲೂಕು ಸಿದ್ದಾಪುರ ಗ್ರಾಮದ ಮಂಜುನಾಥ ಕಾಂಪ್ಲೆಕ್ಸ್ ಕಟ್ಟಡದ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಸಂಘಟಿತರಾಗಿ ಹಣವನ್ನು ಪಣವಾಗಿರಿಸಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಟ ಅಡುತ್ತಿದ್ದ ಬಗ್ಗೆ ದೊರೆತ ಮಾಹಿತಿಯಂತೆ ಶಂಭುಲಿಂಗಯ್ಯ ಎಮ್.ಇ, ಪೊಲೀಸ್ ಉಪನಿರೀಕ್ಷಕರು, ಶಂಕರನಾರಾಯಣ ಪೊಲೀಸ್ ಠಾಣೆ ಇವರು ಸಿಬ್ಬಂದಿಗಳೊಂದಿಗೆ ದಾಳಿ ಮಾಡಿ ಆರೋಪಿಗಳನ್ನು ದಸ್ತಗಿರಿ ಮಾಡಿ ಅವರಿಂದ ಆಟಕ್ಕೆ ಬಳಸಿದ ನಗದು ಹಣ ರೂ 8810, 10 ಮೊಬೈಲ್ ಫೋನ್, ಮೂರು ದ್ವಿಚಕ್ರ ವಾಹನಗಳು ಸೇರಿದಂತೆ ಇತರ ವಸ್ತುಗಳನ್ನು ವಶಕ್ಕೆ ಪಡೆದಿರುತ್ತಾರೆ

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 57/2025 ಕಲಂ: 112 ಬಿ ಎನ್ ಎಸ್ & ಕಲಂ: 87 ಕರ್ನಾಟಕ ಪೊಲೀಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.


Spread the love
Subscribe
Notify of

0 Comments
Inline Feedbacks
View all comments