ಶಂಕರಪುರ: ಹೃದಯಾಘಾತದಿಂದ 18 ವರ್ಷದ ಯುವಕ ನಿಧನ

Spread the love

ಶಂಕರಪುರ: ಹೃದಯಾಘಾತದಿಂದ 18 ವರ್ಷದ ಯುವಕ ನಿಧನ

ಉಡುಪಿ: ಹೃದಯಾಘಾತದಿಂದಾಗಿ 18 ವರ್ಷದ ಯುವಕನೋರ್ವ ಮೃತಪಟ್ಟ ಘಟನೆ ಶಂಕರಪುರ ಸಮೀಪದ ಸರ್ಕಾರಿಗುಡ್ಡೆ ಬಳಿ ನಡೆದಿದೆ.

ಮೃತ ಯುವಕನನ್ನು ಶಂಕರಪುರ ಸಮೀಪದ ಸರ್ಕಾರಿಗುಡ್ಡೆ ನಿವಾಸಿ ಚಂದ್ರ ಪೂಜಾರಿ ಅವರ ಪುತ್ರ ಕಾರ್ತಿಕ್ ಪೂಜಾರಿ (18) ಎಂದು ಗುರುತಿಸಲಾಗಿದೆ.

ಮೃತ ಕಾರ್ತಿಕ್ ಪೂಜಾರಿ ಹಿಂದಿನಿಂದಲೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಶುಕ್ರವಾರ ಬೆಳಿಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಕಾರ್ತಿಕ್ ಕಾಪು ಮತ್ತು ಕಟಪಾಡಿ ವಲಯದ ಕಟ್ಟಡ ಸಾಮಾಗ್ರಿ ಸಾಗಾಟ ಲಾರಿ, ಟೆಂಪೋ ಮಾಲಕರ ಸಂಘದ ಅಧ್ಯಕ್ಷ, ಸಮಾಜಸೇವಕ ಚಂದ್ರ ಪೂಜಾರಿ ಹಾಗೂ ಕಟಪಾಡಿ ಗ್ರಾಮ ಪಂಚಾಯತ್ ಸದಸ್ಯೆ ಶಾಲಿನಿ ಚಂದ್ರ ದಂಪತಿಗಳ ಪುತ್ರರಾಗಿದ್ದಾರೆ.


Spread the love

Leave a Reply