ಶರತ್ ಕೊಲೆಯ ಸ್ಪೋಟಕ ಮಾಹಿತಿ ಇದ್ದಲ್ಲಿ ಪೋಲಿಸರಿಗೆ ನೀಡಿ ; ಸಚಿವ ಯು.ಟಿ.ಖಾದರ್

Spread the love

ಶರತ್ ಕೊಲೆಯ ಸ್ಪೋಟಕ ಮಾಹಿತಿ ಇದ್ದಲ್ಲಿ ಪೋಲಿಸರಿಗೆ ನೀಡಿ ; ಸಚಿವ ಯು.ಟಿ.ಖಾದರ್

ಮಂಗಳೂರು: ಸ್ಪೋಟಕ ಮಾಹಿತಿ ಇದ್ದಲ್ಲಿ ಅದನ್ನು ಪೋಲಿಸರಿಗೆ ನೀಡಿ ತಪ್ಪಿತಸ್ಥರನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸುವಲ್ಲಿ ತನಿಖೆಗೆ ಸಹಕಾರ ನೀಡಬೇಕು, ಮಾಹಿತಿಯನ್ನು ಗುಟ್ಟಲ್ಲಿಡುವುದು ಕೂಡ ಕಾನೂನಿಗೆ ವಿರುದ್ದ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಖಾತೆ ಸಚಿವ ಯು.ಟಿ.ಖಾದರ್ ಪ್ರತಿಕ್ರಿಯಿಸಿದ್ದಾರೆ.

ನಗರದ ಸರ್ಕ್ಯೂಟ್ ಹೌಸಿನಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ದಕ್ಷಿಣ ಕನ್ನಡ ಜಿಲ್ಲೆಯ ಜನರು ಘಟನೆಯ ಬಳಿಕ ತಮ್ಮ ಕೆಲಸಗಳಲ್ಲಿ ನಿರತರಾಗಿದ್ದಾರೆ ಅಲ್ಲದೆ ಜಿಲ್ಲೆಯ ಪರಿಸ್ಥಿತಿ ಕೂಡ ಸಹಜ ಸ್ಥಿತಿಗೆ ಬಂದಿದೆ. ಇಂತಹ ಸಂದರ್ಭದಲ್ಲಿ ಜನರಲ್ಲಿ ಗೊಂದಲ ಮೂಡಿಸುವುದು ಸರಿಯಲ್ಲ. ಮಾತನ್ನು ಕಡಿಮೆ ಮಾಡಿ ಒಗ್ಗಟ್ಟಿನಿಂದ ಕೆಲಸ ಮಾಡುವುದು ಅಗತ್ಯವಿದೆ ಅಲ್ಲದೆ ಕೋಮು ಘಲಭೆಗಳಲ್ಲಿ ಭಾಗವಹಿಸಿದವರ ಬಂಧನ ಮಾಡುವಲ್ಲಿ ಸಹಕರಿಸಬೇಕಾಗಿದೆ ಎಂದರು.

ಶರತ್ ಸಾವಿನ ಎರಡು ದಿನಗಳ ಹಿಂದೆ ಅಸ್ಪತ್ರೆಯಲ್ಲಿ ಅವರನ್ನು ಭೇಟಿಯಾದ ಕುರಿತು ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮಿಜಿ ಮಾಡಿದ ಆರೋಪದ ಕುರಿತು ಮಾತನಾಡಿದ ಅವರು ನಾನು ನೀಡಿದ ಭೇಟಿ ಕೇವಲ ಮಾನವೀಯತೆ ಮತ್ತ ಸಹೋದರತ್ವದ ಉದ್ದೇಶದಿಂದಲೇ ಹೊರತು ಬೇರೆ ಯಾವುದೇ ಉದ್ದೇಶ ಇರಲಲ್ಲ. ಶರತ್ ಸಾವಿನ ಸುದ್ದಿಯನ್ನು ವಿಳಂಬವಾಗಿ ಘೋಷಿಸಿರುವ ವಿಚಾರ ಆಸ್ಪತ್ರೆ ಮತ್ತು ಆಡಳಿತಾತ್ಮಕ ವಿಷಯಕ್ಕೆ ಸಂಬಂಧಿಸಿದ್ದು ಅವರೇ ಅದಕ್ಕೆ ಸ್ಪಷ್ಟನೆ ನೀಡಬೇಕು. ನಾನು ಭೇಟಿ ನೀಡಿದ ವೇಳೆ ಈ ವಿಚಾರದಲ್ಲಿ ಯಾರನ್ನೂ ಕೂಡ ಮಾತನಾಡಿಸಿಲ್ಲ ಈ ವಿಚಾರವನ್ನು ಸುಮ್ಮನೆ ರಾಜಕೀಯ ಮಾಡಲಾಗುತ್ತಿದೆ ಎಂದರು.

ಒಂದು ವೇಳೆ ನಾವು ಆಸ್ಪತ್ರೆಗೆ ಭೇಟಿ ನೀಡದೇ ಹೋದರೂ ಕೂಡ ಟೀಕಿಸುವರು ಇದ್ದಾರೆ. ಮೂರು ತಿಂಗಳ ಹಿಂದೆ ನನ್ನ ಸಂಬಂಧಿಕರನ್ನು ಭೇಟಿ ಮಾಡುವ ಸಲುವಾಗಿ ಬಂಟ್ವಾಳಕ್ಕೆ ತೆರಳಿದ ವೇಳೆಯಲ್ಲಿ ಶರತ್ ನನ್ನನ್ನು ಭೇಟಿ ಮಾಡಿದ್ದರು ಆ ವೇಳೆ ನನ್ನನ್ನು ಮಾತನಾಡಿಸಿದ ಅವರು ತಾನು ಬೇರೆ ಸಂಘಟನೆಯಲ್ಲಿದ್ದರೂ ಕೂಡ ತಾವು ಸಚಿವರಾಗಿ ಮಾಡಿದ ಉತ್ತಮ ಕೆಲಸವನ್ನು ಪ್ರಶಂಸಿತ್ತೇನೆ ಎಂಬ ಮಾತನ್ನು ಆಡಿದ್ದರು. ಅದರಂತೆ ನಾನೂ ಕೂಡ ಅವರು ಕೂಡಲೇ ಚೇತರಿಸಿಕೊಳ್ಳಲಿ ಎಂಬ ಪ್ರಾರ್ಥನೆಯೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿದ್ದೆ ಎಂದರು.

ಶರತ್ ಆಗಲಿ, ಅಶ್ರಫ್ ಆವರಾಗಲಿ  ಅಥವಾ ಇತರ ಮೇಲೆ ನಡೆದ ಹಲ್ಲೆಗಳಾಗಿ, ಯಾರೇ ಅದನ್ನು ಮಾಡಿದ್ದರೂ ಕೂಡ ಕೂಡಲೇ ಪತ್ತೆ ಹಚ್ಚಿ ಅವರಿಗೆ ಕಠಿಣ ಶಿಕ್ಷೆಯಾಗುವ ನಿಟ್ಟಿನ್ನಲ್ಲಿ ಪೋಲಿಸರ ಕರ್ತವ್ಯಕ್ಕೆ ಎಲ್ಲರೂ ಸಹಕಾರ ನೀಡಬೇಕಾಗಿದೆ. ಇದುವರೆಗೆ ಆಗಿರುವ ಅನಾಹುತಗಳನ್ನು ಕೆಟ್ಟ ಘಳಿಗೆ ಎಂದು ಮರೆತು ದುಷ್ಕೃತ್ಯ ಎಸಗಿದವರ ವಿರುದ್ದ ಕ್ರಮಕ್ಕೆ ನಾವೆಲ್ಲಾ ಒಗ್ಗಟ್ಟಿನಿಂದ ಶ್ರಮಿಸುವ ಅಗತ್ಯವಿದ್ದು, ರಾಜಕೀಯ ಬದಿಗಿಟ್ಟು ಶಾಂತಿ ಸ್ಥಾಪನೆಗೆ ಸಹಕಾರ ನೀಡಿ ಎಂದರು.

ಮೃತರಿಗೆ ಪರಿಹಾರ ನೀಡುವ ಕಾರ್ಯ ಪೋಲಿಸ್ ಇಲಾಖೆಯಿಂದ ಸರಕಾರಕ್ಕೆ ವರದಿ ಹೋದ ಬಳಿಕವಷ್ಠೆ ನಿರ್ಧಾರವಾಗಲಿದ್ದು, ಅದನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಮೇಯರ್ ಕವಿತಾ ಸನೀಲ್, ಸದಸ್ಯಾದ ಮಹಾಬಲ ಮಾರ್ಲ ಹಾಗೂ ಇತರರು ಉಸಪಸ್ಥಿತರಿದ್ದರು.


Spread the love