ಶಾಲಾ ವಾರ್ಷಿಕೋತ್ಸವದಿಂದ ವಿದ್ಯಾರ್ಥಿ ಪ್ರತಿಭೆಗಳು ಅನಾವರಣಗೊಳ್ಳುತ್ತವೆ- ಪ್ರಮೋದ್ ಮಧ್ವರಾಜ್

Spread the love

ಶಾಲಾ ವಾರ್ಷಿಕೋತ್ಸವದಿಂದ ವಿದ್ಯಾರ್ಥಿ ಪ್ರತಿಭೆಗಳು ಅನಾವರಣಗೊಳ್ಳುತ್ತವೆ- ಪ್ರಮೋದ್ ಮಧ್ವರಾಜ್

ಉಡುಪಿ : ವಿದ್ಯಾರ್ಥಿ ಪ್ರತಿಭೆಗಳು ಅನಾವರಣಗೊಳ್ಳಲು ಶಾಲಾ ವಾರ್ಷಿಕೋತ್ಸವ ಉತ್ತಮ ವೇದಿಕೆಯಾಗಿದೆ. ತಮ್ಮ ಸಾಧನೆಗೆ ಪುರಸ್ಕಾರ ದೊರೆತಾಗ ವಿದ್ಯಾರ್ಥಿಗಳು ಖುಷಿ ಪಡುತ್ತಾರೆ. ಬಹುಮಾನ ಪಡೆದ ವಿದ್ಯಾರ್ಥಿಗಳು ಬಹುಮಾನ ಪಡೆಯದ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗುತ್ತಾರೆ. ವಳಕಾಡು ಶಾಲೆ ತನ್ನದೇ ಆದ ವಿಶಿಷ್ಟ ಸಾಧನೆಯಿಂದ ಇತರ ಶಾಲೆಗಳಿಗೆ ಮಾದರಿಯಾಗಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ   ಪ್ರಮೋದ್ ಮಧ್ವರಾಜ್ ನುಡಿದರು.

ಅವರು ದಿನಾಂಕ   ಉಡುಪಿ ವಳಕಾಡಿನ ಸರಕಾರಿ ಸಂಯುಕ್ತ ಪ್ರೌಢಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ದೀಪ ಬೆಳಗಿಸಿ, ಶಾಲಾ ಪತ್ರಿಕೆ ‘ವನಸುಮ’ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.

ನಳಿನಿ ಪ್ರದೀಪ್ ರಾವ್ ಅಧ್ಯಕ್ಷರು, ತಾಲೂಕು ಪಂಚಾಯತ್, ಉಡುಪಿ ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶೀಲಾ ಕೆ. ಶೆಟ್ಟಿ ಉಪಾಧ್ಯಕ್ಷರು, ಜಿಲ್ಲಾ ಪಂಚಾಯತ್, ಉಡುಪಿ, ಗೀತಾ ರವಿಶೇಟ್ ನಗರಸಭಾ ಸದಸ್ಯರು, ವಳಕಾಡು, ವಿದ್ಯಾಲಕ್ಷ್ಮೀ ಆರ್. ಅಸಿಸ್ಟೆಂಟ್ ಜನರಲ್ ಮ್ಯಾನೇಜರ್, ಕರ್ನಾಟಕ ಬ್ಯಾಂಕ್ ರೀಜನಲ್ ಆಫೀಸು, ಉಡುಪಿ, ಡಾ| ಮಾಧವಿ ಭಂಡಾರಿ  ನಿವೃತ್ತ ಪಾಂಶುಪಾಲರು, ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು, ಉಡುಪಿ, ವಿದ್ಯಾಲತ ಯು. ಶೆಟ್ಟಿ ಲಯನೆಸ್ ಜಿಲ್ಲಾ ಸಂಯೋಜಕಿ,   ಅಮೃತ್ ಶೆಣೈ ಪಿ. ಅಧ್ಯಕ್ಷರು, ಹಳೆ ವಿದ್ಯಾರ್ಥಿ ಸಂಘ, ಇಂದು ರಮಾನಂದ ಭಟ್ಉಪಾಧ್ಯಕ್ಷರು, ಪ್ರೌಢ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ., ನಾಗಭೂಷಣ ಶೇಟ್ ಅಧ್ಯಕ್ಷರು, ಪ್ರಾಥಮಿಕ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ರವಿರಾಜ್ ನಾಯಕ್, ಯಜ್ಞೇಶ್ ಆಚಾರ್ಯ, ಕುಸುಮ  ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶಾಲಾ ಪತ್ರಿಕೆ ‘ವನಸುಮ’ ಸಂಚಿಕೆ – 6 ಬಿಡುಗಡೆ, ಪ್ರೌಢಶಾಲಾ ಹಸ್ತಪತ್ರಿಕೆ ‘ಮುಂಬೆಳಕು’ ಬಿಡುಗಡೆ, ಪ್ರಾಥಮಿಕ ಶಾಲಾ ಹಸ್ತಪತ್ರಿಕೆ ‘ಮಿನುಗು’ ಬಿಡುಗಡೆ,  ದತ್ತಿನಿಧಿ ಬಹುಮಾನ ವಿತರಣೆ, ‘ಪುಸ್ತಕ ಓದಿ, ಬಹುಮಾನ ಗೆಲ್ಲಿ’ ಬಹುಮಾನ ವಿತರಣೆ ನಡೆಯಿತು. ಶಾಲಾ ಪ್ರತಿಭಾನ್ವಿತ ವಿದ್ಯಾರ್ಥಿ ನಚಿಕೇತ ನಾಯಕ್ ಅವರಿಗ ಸನ್ಮಾನಿಸಿ ಗೌರವಿಸಲಾಯಿತು.

ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ನಿರ್ಮಲ ಬಿ. ಅತಿಥಿಗಳನ್ನು ಸ್ವಾಗತಿಸಿದರು. ಹಿರಿಯ ಶಿಕ್ಷಕಿ ಸುಗುಣಾ ಎಂ. ವರದಿ ವಾಚನ ಮಾಡಿದರು. ಚಿತ್ರಕಲಾ ಶಿಕ್ಷಕ ಉಪಾಧ್ಯಾಯ ಮೂಡುಬೆಳ್ಳೆ ಧನ್ಯವಾದವಿತ್ತರು.


Spread the love