ಶಾಸಕ ಬಾವರ ಕೋಟಿ ಕಾರಿಗೆ ಪೆಟ್ರೋಲ್ ಬದಲು ಡಿಸೇಲ್ ತುಂಬಿಸಿದ ಬಂಕ್ ಸಿಬಂದಿ!

Spread the love

ಶಾಸಕ ಬಾವರ ಕೋಟಿ ಕಾರಿಗೆ ಪೆಟ್ರೋಲ್ ಬದಲು ಡಿಸೇಲ್ ತುಂಬಿಸಿದ ಬಂಕ್ ಸಿಬಂದಿ!

ಮಂಗಳೂರು: ಕೋಟಿ ವೆಚ್ಚದಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊಯ್ದಿನ್ ಬಾವ ಅವರು ಖರೀದಿಸಿದ ಪೆಟ್ರೋಲ್ ಹಾಗೂ ಬ್ಯಾಟರಿ ಚಾಲಿತ ವೋಲ್ವೊ ಎಕ್ಸಲೆಂಟ್ ಹೈಬ್ರಿಡ್ ಕಾರಿಗೆ ಪೆಟ್ರೋಲ್ ಪಂಪ್ ನ ಸಿಬಂದಿ ತನ್ನ ಅಚಾತುರ್ಯದಿಂದ ಡಿಸೇಲ್ ತುಂಬಿಸಿದ ಪರಿಣಾಮ ಕೆಲವು ಕಾಲ ಗದ್ದಲ ಏರ್ಪಟ್ಟ ಘಟನೆ ನಗರದ ಪೆಟ್ರೋಲ್ ಪಂಪಿನಲ್ಲಿ ನಡೆಯಿತು.

ಮೊಯ್ದಿನ್ ಬಾವ ಅವರ ಪುತ್ರ ಈ ಕಾರನ್ನು‌ನಗರಕ್ಕೆ ತಂದಿದ್ದು ಕದ್ರಿಯ ಬಂಕ್‌ಗೆ ಪೆಟ್ರೋಲ್ ಹಾಕಲು ಕೊಂಡೊಯ್ದು ನಿಲ್ಲಿಸಿದರು. ಆದರೆ ಬಂಕ್ ನಿರ್ವಾಹಕ ಪೆಟ್ರೋಲ್ ಬದಲು ಡೀಸೆಲ್ ತುಂಬಿಸಿದ್ದಾನೆ. ಗೊತ್ತಾದ ಬಳಿಕ‌ ಬಾವ ಅವರ ಪುತ್ರ ಮತ್ತು ಬಂಕ್‌ನವರಿಗೆ ವಾಗ್ವಾದ ನಡೆದಿದೆ.

ಬಂಕ್‌ ಮಾಲೀಕರು ತಮ್ಮಿಂದ ತಪ್ಪಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ವೋಲ್ವೋ ಸರ್ವೀಸ್ ಸೆಂಟರ್ ಮಂಗಳೂರಿನಲ್ಲಿ ಇಲ್ಲದ ಕಾರಣ ಬೆಂಗಳೂರಿನ ಡೀಲರ್‌ಗೆ ಮಾಹಿತಿ ಕೊಟ್ಟಿದ್ದು ಅವರು ಬಂದು ಸರಿಪಡಿಸಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.

1.65 ಕೋಟಿ ರೂ ಮೊತ್ತದ ಈ ಹೈಬ್ರಿಡ್ ಕಾರು ಭಾರತದಲ್ಲಿ ಪ್ರಥಮ ಬಾರಿಗೆ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, ಶಾಸಕ ಮೊಯ್ದಿನ್ ಬಾವ ಪ್ರಥಮ ಗ್ರಾಹಕರಾಗಿದ್ದರು.

ಇದನ್ನೂ ಒದಿ

ವೋಲ್ವೊ ಹೈಬ್ರೀಡ್ ವಿಲಾಸಿ ಕಾರು ಖರೀದಿಸಿದ ಶಾಸಕ ಮೊಯ್ದಿನ್ ಬಾವ


Spread the love

2 Comments

  1. Stupid gas station attendant. The gas station owner has to pay the damages. They usually empty the gas tank and flush it with gas. If he is lucky it may just be a minor problem. They need to have diesel pumps separate from gas pump. Gas station is clearly at fault. Sorry to hear this.

  2. If Bawa had been BJP MLA, for sure party would have called Mangalore bandh for this purposely-made mistake due to jealousy. Even though Mangalore rated 6th safest city in the world but seeing such thing, its unsafe to vehicle owner to fill even correct gasoline to their vehicle.

Comments are closed.