ಶಿಕ್ಷಣ ಸಂಸ್ಥೆಗಳು ಮೌಲ್ಯವುಳ್ಳ ಮಾನವರನ್ನು ಸೃಷ್ಠಿಸಬೇಕು : ಡಾ|. ಎಂ. ಆರ್. ರವಿ

Spread the love

ಶಿಕ್ಷಣ ಸಂಸ್ಥೆಗಳು ಮೌಲ್ಯವುಳ್ಳ ಮಾನವರನ್ನು ಸೃಷ್ಠಿಸಬೇಕು : ಡಾ|. ಎಂ. ಆರ್. ರವಿ

ಶಿಕ್ಷಣ ಸಂಸ್ಥೆಗಳು ಕಾರ್ಖಾನೆಗಳಾಗುತ್ತಿದ್ದು ವಿದ್ಯಾರ್ಥಿ ಸಂಪನ್ಮೂಲವನ್ನು ಸರಕುಗಳನ್ನಾಗಿಸುತ್ತಿದೆ. ವಿದ್ಯಾರ್ಥಿಗಳು ಇವತ್ತು ಬಳಸಿ ನಾಳೆ ಎಸೆಯಲ್ಪಡುವ ವಸ್ತುಗಳಾಗುವ ಅಪಾಯವಿದೆ. ಅದ್ದರಿಂದ ಶಿಕ್ಷಣ ಸಂಸ್ಥೆಗಳು ಮೌಲ್ಯವುಳ್ಳ ಮಾನವರನ್ನು ಸೃಷ್ಟಿಸಬೇಕು. ಸಿಲೆಬಸ್‍ನ ಜೊತೆಗೆ ಮಾನವೀಯ ಮೌಲ್ಯಗಳು, ಸಂವಿಧಾನ, ಸಿದ್ಧಾಂತಗಳ ಕುರಿತು ತಿಳಿಯಬೇಕು ಎಂದು ದ.ಕ. ಜಿಲ್ಲಾ ಕಾರ್ಯನಿರ್ವಹಣಾಧಿಕಾರಿ ಡಾ|. ಎಂ. ಆರ್. ರವಿ ಹೇಳಿದರು.

ಅವರು ಗೋವಿಂದ ದಾಸ ಕಾಲೇಜು ಆಂತರಿಕ ಗುಣಮಟ್ಟ ಘಟಕ ಹಾಗೂ ಶಿಕ್ಷಕ-ರಕ್ಷಕ ಸಂಘದ ಸಂಯುಕ್ತ ಆಶ್ರಯದಲ್ಲಿ ಜರಗಿದ ‘ಮಾನವ ಹಕ್ಕುಗಳು ಹಾಗೂ ಗ್ರಾಹಕ ಶಿಕ್ಷಣ ಘಟಕ’ದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು.

ಇಂದಿನ ಭಾರತೀಯ ಶಿಕ್ಷಣದ ಪ್ರಮುಖ ಸಮಸ್ಯೆ ಎಂದರೆ ಯಾವ ರೀತಿಯ ಮಾನವ ಸಂಪನ್ಮೂಲಗಳನ್ನು ಸೃಷ್ಟಿಸುತ್ತಿದ್ದೆವೆ? ಎಂಬುದು. ಹೆಚ್ಚಿನ ಬಾರಿ ವಿಶ್ವವಿದ್ಯಾನಿಲಯಗಳು ಅಸಹಕಾರಿಯಾಗಿ ಬಿಡುತ್ತವೆ ಎಂದರು.

‘ಭಾರತೀಯರು ಉತ್ತಮ ಯೋಜನೆಗಾರರು ಆದರೆ ಕೆಟ್ಟ ಅನುಷ್ಠಾನಗಾರರು. ಅದೆಷ್ಟೋ ಉತ್ತಮ ಯೋಜನೆಗಳು ಸಾಮಾನ್ಯ ಜನರನ್ನು ತಪುಪದೇ ಹಾಗೆ ಉಳಿಯುತ್ತವೆ. ದೇಶದ ಅಭಿವೃದ್ಧಿಗೆ ತೊಡಕಾಗಿರುವ ಜನಸಂಖ್ಯೆಯನ್ನು ಸಂಪನ್ಮೂಲವನ್ನಾಗಿ ಪರಿವರ್ತಿಸುವ ಅನಿವಾರ್ಯತೆ ಇದೆ’ ಎಂದು ಅವರು ಈ ಸಂದರ್ಭ ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ದ.ಕ. ಜಿಲ್ಲಾ ಗ್ರಾಹಕ ಒಕ್ಕೂಟಗಳ ಸಮಘದ ಅಧ್ಯಕ್ಷರಾದ ಎಂ.ಜೆ. ಸಾಲ್ಯಾನ್ ಅವರು ಜಾಗೃತಿ ಗ್ರಾಹಕನಿಂದ ಮಾತ್ರ ಮಾರುಕಟ್ಟೆಯಲ್ಲಿ ನೆಡಯುವ ಮೋಸವನ್ನು ತಪ್ಪಿಸಲು ಸಾಧ್ಯ. ಗ್ರಾಹಕ ಘಟಕ ವಿದ್ಯಾರ್ಥಿಗಳಲ್ಲಿ ಗ್ರಾಹಕ ಹಕ್ಕುಗಳ ಕುರಿತು ಜಾಗೃತಿ ಮೂಡಿಸುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ. ಮುರಳೀಧರ ರಾವ್ ವಹಿಸಿದ್ದರು. ಉಪಪ್ರಾಂಶುಪಾಲ ಪ್ರೊ.ಕೃಷ್ಣಮೂರ್ತಿ ಸ್ವಾಗತಿಸಿದರು. ಗ್ರಾಹಕ ಶಿಕ್ಷಣ ಘಟಕದ ಸಂಯೋಜಕಿ ಡಾ|.ಪಿ. ಆಶಾಲತಾ ಪ್ರಾಸ್ತಪಿಸಿದರು. ಆಂತರಿಕ ಗುಣಮಟ್ಟ ಘಟಕದ ಸಂಯೋಜಕ ಡಾ| ಕೆ. ಶಿವಶಂಕರ ಭಟ್ ಧನ್ಯವಾದ ಅರ್ಪಿಸಿದರು. ಉಪನ್ಯಾಸಕಿ ಸುಧಾ ಯು. ನಿರೂಪಿಸಿದರು.


Spread the love