ಶಿರ್ವ ಚರ್ಚ್ ಧರ್ಮಗುರು ವಂ|ಡೆನಿಸ್ ಡೆಸಾ ರಿಗೆ ಬೆದರಿಕೆ – 15ಮಂದಿ ವಿರುದ್ದ ದೂರು ದಾಖಲು

Spread the love

ಶಿರ್ವ ಚರ್ಚ್ ಧರ್ಮಗುರು ವಂ|ಡೆನಿಸ್ ಡೆಸಾ ರಿಗೆ ಬೆದರಿಕೆ – 15ಮಂದಿ ವಿರುದ್ದ ದೂರು ದಾಖಲು

ಉಡುಪಿ: ಶಿರ್ವ ಚರ್ಚಿನ ಸಹಾಯಕ ಧರ್ಮಗುರು ಫಾ. ಮಹೇಶ್ ಡಿಸೋಜಾ ಆತ್ಮಹತ್ಯೆ ಪ್ರಕರಣದಲ್ಲಿ ಚರ್ಚಿನ ಪ್ರಧಾನ ಧರ್ಮಗುರುಗಳ ನಿಂದನೆ ಮತ್ತು ಅವರಿಗೆ ಬೆದರಿಕೆ ಒಡ್ಡಿದ ಆರೋಪದ ಮೇಲೆ 15 ಜನರ ಮೇಲೆ ಶಿರ್ವ ಪೊಲೀಸ್ ಠಾಣೆಯಲ್ಲಿ ವಂ|ಡೆನಿಸ್ ಡೆಸಾ ದೂರು ನೀಡಿದ್ದಾರೆ.

ನವೆಂಬರ್ 2 ಮತ್ತು 3ನೇ ತಾರೀಕಿನಂದು ಶಿರ್ವ ಚರ್ಚ್ ಆವರಣದಲ್ಲಿ ಸೇರಿದ ಪ್ರತಿಭಟಾನಕಾರರು ಚರ್ಚಿನ ಪ್ರಧಾನ ಧರ್ಮಗುರುಗಳಾದ ಫಾ. ಡೆನ್ನಿಸ್ ಡೇಸಾ ವಿರುದ್ಧ ಸುನಿಲ್ ಕಾಬ್ರಾಲ್, ಜಾನ್ಸನ್ ಡಾಲ್ಪ್ರೆಡ್ ಕ್ಯಾಸ್ತಲಿನೋ @ ಡಾಲ್ಪೀ, ಕೋನಾರ್ಡ್ ಕ್ತಾಸ್ತಲಿನೋ, ಪೀಟರ್ ಕೋರ್ಡಾ, ರಾಯನ್ ಮೆನೆಜಸ್   ಮರಾಯನ್ ಮೆನೆಜಸ್ ಕುಡ್ತಮಜಲ್, ಅರ್ಥರ್ ಮೆನೇಜಸ್ , ಅಂತೋನಿ ಮೆನೇಜಸ್ ಪಿಲಾರು , ವಿಲ್ಪ್ರೆಡ್ ಮಿನೇಜಸ್, ಕ್ಲಾರಾ ಕ್ವಾಡ್ರಸ್, ಸುನಿತಾ ಮೆನೇಜಸ್, ನಿಕಿಲ್ ಮಥಾಯಿಸ್, ಪ್ರತೀಕ್ಷಾ ಡಿಸೋಜಾ, ಲೀನಾ ಡಿಸೋಜಾ, ಡೆನೀಸಾ ಮಥಾಯಸ್ ಇವರು ಕಾಪು ತಾಲೂಕಿನ ಶಿರ್ವ ಗ್ರಾಮದ ಶಿರ್ವ ಸಾವುದ್ ಅಮ್ಮನವರ ಚರ್ಚನ ಧಪನ ಭೂಮಿಯ ಎದುರುಗಡೆ ಕೂಡಿಕೊಂಡು ಅಕ್ರಮವಾಗಿ ಅಡ್ಡಗಟ್ಟಿ ನಿಲ್ಲಿಸಿ ಅವಾಚ್ಯ ಶಬ್ದದಿಂದ ಬೈದು ಜೀವ ಬೆದರಿಕೆ ಹಾಕಿ ಹಲ್ಲೆ ಮಾಡಲು ಬಂದಿರುತ್ತಾರೆ. ಅಲ್ಲದೆ ಆ ಬಳಿಕ ನವೆಂಬರ್ 3ರಂದು ಚರ್ಚಿನ ಎದುರುಗಡೆ ಉಡುಪಿಯ ಬಿಷಪ್ ಹಾಗೂ ಪಿರ್ಯಾದಿದಾರ ವಂ|ಡೆನಿಸ್ ಡೆಸಾರಿಗೆ ಬೆದರಿಕೆ ಹಾಕಿರುತ್ತಾರೆ ಹಾಗೂ ಚರ್ಚ್ ನ ಕಛೇರಿಯ ಸಿಬ್ಬಂದಿಯವರಲ್ಲಿ ಕೆಲಸ ಮಾಡದಂತೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ವಂ| ಡೆನ್ನೀಸ್ ಡೇಸಾ ರವರು ನೀಡಿದ ದೂರಿನಂತೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 96/2019, ಕಲಂ: 143, 147, 341, 504 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.


Spread the love