ಶಿರ್ವ ಸೈಂಟ್ ಮಿಲಾಗ್ರಿಸ್ ಸೊಸೈಟಿ ವತಿಯಿಂದ ಅಕ್ಸಿಲಿಯಂ ವಸತಿ ನಿಲಯಕ್ಕೆ ಅಗತ್ಯ ವಸ್ತುಗಳ ವಿತರಣೆ

Spread the love

ಶಿರ್ವ ಸೈಂಟ್ ಮಿಲಾಗ್ರಿಸ್ ಸೊಸೈಟಿ ವತಿಯಿಂದ ಅಕ್ಸಿಲಿಯಂ ವಸತಿ ನಿಲಯಕ್ಕೆ ಅಗತ್ಯ ವಸ್ತುಗಳ ವಿತರಣೆ

ಉಡುಪಿ: ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ವರ್ಷ ಪ್ರತಿಯಂತೆ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿ. ಕಾರವಾರ ಇದರ ಶಿರ್ವ ಶಾಖೆಯ ವತಿಯಿಂದ ಶಿರ್ವ ಆಕ್ಸಿಲಿಯಂ ನಿವಾಸ ವಸತಿ ನಿಲಯದ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಶಿರ್ವ ರೋಟರಿವಕ್ಲಬ್ನ ಅಧ್ಯಕ್ಷರಾದ ವಿಲಿಯಂ ಮಚಾದೋ, ಶಶಿ ಕಿಚನ್ ಯೂ ಟ್ಯೂಬರ್ ಶಶಿಕಲಾ ಮತ್ತು ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಆಪ್ತಸಮಲೋಚಕಿ ವಸಂತಿ ಹಾಗೂ ಕಾನ್ವೆಂಟಿನ ಮೇಲ್ವಿಚಾರಕಿ ಸಿಸ್ಟರ್ ಲೀಮಾ ಉಪಸ್ಥಿತರಿದ್ದರು .

ಶಾಖಾ ವ್ಯವಸ್ಢಾಪಕರಾದ ವಿಲ್ಸನ್ ಪ್ರಿತೇಶ್ ಡಿಸೋಜಾ ಪ್ರಾಸ್ತಾವಿಕ ಮಾತುಗಳನ್ನಾಡಿ ಸಂಸ್ಥೆಯ ಉದ್ದೇಶಗಳನ್ನು ವಿವರಿಸಿದರು. ಶಿರ್ವ ಶಾಖಾ ಸಿಬ್ಬಂದಿ ತೃಪ್ತಿ ಸ್ವಾಗತಿಸಿ , ಬ್ಲೆಸ್ಸಿ ಕಾರ್ಯಕ್ರಮ ನಿರೂಪಿಸಿದರು. ವಸತಿನಿಲಯದ ವಿದ್ಯಾರ್ಥಿನಿಯರು ಧನ್ಯವಾದ ಸಮರ್ಪಿಸಿದರು. ಶಿರ್ವ ಶಾಖೆಯ ಸಿಬ್ಬಂದಿಗಳು ಹಾಗೂ ಕಾನ್ವೆಂಟಿನ ಧರ್ಮಭಗಿನಿಯರು ಕಾರ್ಯಕ್ರಮಕ್ಕೆ ಸಹಕರಿಸಿದರು .


Spread the love
Subscribe
Notify of

0 Comments
Inline Feedbacks
View all comments