ಶಿವಮೊಗ್ಗ | ಕಾಂತಾರ ಚಲನಚಿತ್ರದ ಕಲಾವಿದ ಹೃದಯಾಘಾತದಿಂದ ಮೃತ್ಯು

Spread the love

 ಶಿವಮೊಗ್ಗ | ಕಾಂತಾರ ಚಲನಚಿತ್ರದ ಕಲಾವಿದ ಹೃದಯಾಘಾತದಿಂದ ಮೃತ್ಯು
 

ಶಿವಮೊಗ್ಗ: ಕಾಂತಾರ ಚಲನಚಿತ್ರದ ಕಲಾವಿದನೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ತೀರ್ಥಹಳ್ಳಿಯ ಆಗುಂಬೆ ಬಳಿ ಬುಧವಾರ ರಾತ್ರಿ ನಡೆದಿದೆ.

ಮೃತರನ್ನು ಕೇರಳದ ತ್ರಿಶೂರ್ ಮೂಲದ ವಿಜು ವಿ.ಕೆ. ಮಿಮಿಕ್ರಿ ಕಲಾವಿದ ಎಂದು ಗುರುತಿಸಲಾಗಿದೆ.

ಕಾಂತರ ಚಲನಚಿತ್ರಕ್ಕಾಗಿ ಆಗುಂಬೆ ಸಮೀಪದ ಹೋಂ ಸ್ಟೇ ಒಂದರಲ್ಲಿ ತಂಗಿದ್ದರು. ಅವರಿಗೆ ನಿನ್ನೆ ರಾತ್ರಿ ಏಕಾಏಕಿ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನ ತೀರ್ಥಹಳ್ಳಿಯ ಆಸ್ಪತ್ರೆಗೆ ರವಾನಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ತೀರ್ಥಹಳ್ಳಿಯ ಜೆ.ಸಿ ಆಸ್ಪತ್ರೆಯಲ್ಲಿ ಮೃತ ದೇಹ ಇರಿಸಲಾಗಿದ್ದು, ಕೇರಳದಿಂದ ಕುಟುಂಬಸ್ಥರು ಆಗಮಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.


Spread the love
Subscribe
Notify of

0 Comments
Inline Feedbacks
View all comments