ಶ್ರೀನಿವಾಸ ಮಲ್ಯ ‘52 ನೇ ಸ್ಮøತಿ ದಿವಸ’ ಸಮಾರಂಭ

Spread the love

ಶ್ರೀನಿವಾಸ ಮಲ್ಯ ‘52 ನೇ ಸ್ಮøತಿ ದಿವಸ’ ಸಮಾರಂಭ

ಮಂಗಳೂರು : ಕೊಂಕಣಿ ಭಾಸ್ ಆನಿ ಸಂಸ್ಕøತಿ ಪ್ರತಿಷ್ಠಾನ, ವಿಶ್ವ ಕೊಂಕಣಿ ಕೇಂದ್ರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು ಹಮ್ಮಿಕೊಂಡಿರುವ ಆಧುನಿಕ ಮಂಗಳೂರು ನಗರ ನಿರ್ಮಾತೃ ದಿ. ಉಳ್ಳಾಲ ಶ್ರೀನಿವಾಸ ಮಲ್ಯ ರ 52 ನೇ ಸ್ಮøತಿ ದಿವಸ ಉದ್ಘಾಟನಾ ಸಮಾರಂಭವು ವಿಶ್ವ ಕೊಂಕಣಿ ಕೇಂದ್ರ, ಶಕ್ತಿನಗರದಲ್ಲಿ ಜರುಗಿತು.

ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಶ್ರೀ ಬಸ್ತಿ ವಾಮನ ಶೆಣೈ ಬಂದ ಅತಿಥಿಗಳನ್ನು ಸ್ವಾಗತಿಸಿ ದಿ. ಉಳ್ಳಾಲ ಶ್ರೀನಿವಾಸ ಮಲ್ಯರು ಮಾಡಿದ ಮಹತ್ತರ ಕಾರ್ಯಗಳ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿ ಮುಂದಿನ ಜನಾಂಗಕ್ಕೆ ದಿ. ಮಲ್ಯರ ಒಳ್ಳೆಯ ವಿಚಾರಗಳನ್ನು ಚಿರಸ್ಥಾಯಿಯಾಗಿಡಬೇಕು ಎಂದು ನುಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಗಳೂರು ಮಹಾನಗರ ಪಾಲಿಕೆ ಸನ್ಮಾನ್ಯ ಮಹಾ ಪೌರರಾದ ಕವಿತಾ ಸನಿಲ್‍ಲವರು ದಿ. ಉಳ್ಳಾಲ ಶ್ರೀನಿವಾಸ ಮಲ್ಯರು ಪ್ರತಿಫಲಾಪೇಕ್ಷೆ ಇಲ್ಲದೆ ದುಡಿಯುತ್ತಿದ್ದ ಓರ್ವ ಮಹಾನ್ ಚೇತನ. ಅವರು ಮಾಡಿದ ಮಹಾಕಾರ್ಯಗಳಿಗೆ ಎಣೆಯಿಲ್ಲ. ಮಂಗಳೂರು – ಹಾಸನ ರೈಲೇ, ಮಂಗಳೂರು ಆಕಾಶವಾಣಿ, ಮಂಗಳೂರು ವಿಮಾನ ನಿಲ್ದಾಣ, ನ್ಯಾಷನಲ್ ಹೈವೇ-17, 42 ಮತ್ತು ಎನ್. ಐ. ಟಿ.ಕೆ. ಇಂಜಿನಿಯರಿಂಗ ಕಾಲೇಜು ಸುರತ್ಕಲ್, ಮೊದಲಾದ ಇನ್ನೂ ಹಲವಾರು ಕೆಲಸ ಕಾರ್ಯಗಳನ್ನು ಕಾರ್ಯರೂಪಕ್ಕಿಳಿಸಿದ ಮಲ್ಯರ ಕಾರ್ಯಗಳನ್ನು ಹೊಗಳಿ ಗುಣಗಾನಮಾಡಿದರು. ವಿಶ್ವ ಕೊಂಕಣಿ ಕೇಂದ್ರ ಹಮ್ಮಿಕೊಂಡ ಈ ಕಾರ್ಯಕ್ರದಲ್ಲಿ ಭಾಗಿಯಾದುದಕ್ಕೆ ಸಂತೋಷ ವ್ಯಕ್ತ ಪಡಿಸಿದರು.

ಮಂಗಳೂರು ಮಹಾನಗರ ಪಾಲಿಕಾ ಕಾರ್ಪೊರೇಟರ್ ಅಖಿಲಾ ಆಳ್ವಾ ಅವರು ದಿ. ಮಲ್ಯರ ಆದರ್ಶ ವ್ಯಕ್ತಿತ್ವದ ಬಗ್ಗೆ ಹಾಗೂ ಅವರು ದ. ಕ. ಜಿಲ್ಲೆಗೆ ನೀಡಿದ ಅಪಾರ ಕೊಡುಗೆಯನ್ನು ಸ್ಮರಿಸಿ ತಮ್ಮ ಜೀವನ ಮುಡುಪಾಗಿಟ್ಟ ಮಲ್ಯರ 52 ನೇ ಸ್ಮøತಿದಿವಸ ಕಾರ್ಯಕ್ರಮವನ್ನು ಹಮ್ಮಿಕೊಂಡ ವಿಶ್ವ ಕೊಂಕಣಿ ಕೇಂದ್ರವನ್ನು ಶ್ಲಾಘಿಸಿದರು. ಹಾಗೂ ಎಲ್ಲಾ ಗಣ್ಯರು ದಿ. ಮಲ್ಯರ ಛಾಯಾಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿ ಸ್ಮರಿಸಿದರು.

ಈ ಸಂಧರ್ಭದಲ್ಲಿ ವಿಶ್ವ ಕೊಂಕಣಿ ಕೇಂದ್ರದ ವತಿಯಿಂದ ದ. ಕ. ಜಿಲ್ಲೆ ಮತ್ತು ಉಡುಪಿ ಜಿಲ್ಲೆಗಳ 120 ಕಾಲೇಜು ವಿದ್ಯಾರ್ಥಿಗಳಿಗೆ ಜರುಗಿದ ದಿ. ಉಳ್ಳಾಲ ಶ್ರೀನಿವಾಸ ಮಲ್ಯ ಜೀವನ- ಸಾಧನೆ ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರಿಂದ ಬಹುಮಾನ ವಿತರಣಾ ಕಾರ್ಯಕ್ರಮವೂ ನಡೆಯಿತು. ಪ್ರಥಮ ಬಹುಮಾನ ವೆಂಕಟರಮಣ ಕಾಲೇಜು ಬಂಟವಾಳದ ಕುಮಾರಿ ರೇಶ್ಮಾ ಭಟ್, ದ್ವತೀಯ ಬಹುಮಾನ ಸಂತ ಆನ್ಸ್ ಕಾಲೇಜ ಆಫ್ ಎಜುಕೇಶನ್ ಮಂಗಳೂರಿನ ಶಿಲ್ಪಾ ಯು, ಹಾಗೂ 7 ಜನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಬಹುಮಾನವನ್ನು ವಿತರಿಸಲಾಯಿತು.

ಪ್ರೀತಿ. ಕೆ. ವಾಮಂಜೂರು, ಶೆಫಾಲಿ ತಗ್ಗರಸೆ, ಶ್ರೀನಾಥ ಶೆಣೈ ಎಮ್, ಆನಂದ ಶ್ರೀನಿವಾಸ ಪೈ, ಶಾಂತಿ ಅರ್ಶದಾ, ಆಯಿಶಾ ನಿಶಾನ್, ರಿಚರ್ಡ್ ಪಿ. ಬಾರ್ಜಿಸ್ ವಿದ್ಯಾರ್ಥಿಗಳು ಗಣ್ಯರಿಂದ ಬಹುಮಾನಗಳನ್ನು ಪಡೆದರು.

ವಿಶ್ವ ಕೊಂಕಣಿ ಕೇಂದ್ರ ಉಪಾಧ್ಯಕ್ಷ ವೆಂಕಟೇಶ. ಎನ್. ಬಾಳಿಗಾ ಅವರು ಮಾನ್ಯ ಮಂತ್ರಿ ಹಾಗೂ ವಿಶ್ವ ಕೊಂಕಣಿ ಕೇಂದ್ರದ ಚೆಯರ್‍ಮೆನ ಎಮಿರಿಟಸ್ ಆರ್. ವಿ. ದೇಶಪಾಂಡೆಯವರು ಕಳುಹಿಸಿದ ಶುಭ ಸಂದೇಶ ಪತ್ರವನ್ನು ಎಲ್ಲರಿಗೂ ಓದಿ ತಿಳಿಸಿದರು.

ವಿಶ್ವ ಕೊಂಕಣಿ ಕೇಂದ್ರದ ಟ್ರಸ್ಟಿ ಗಿಲ್ಬರ್ಟ್ ಡಿಸೋಜಾ, ಕೊಂಕಣಿ ಭಾಷಾ ಮಂಡಳದ ಅಧ್ಯಕ್ಷಾ ಗೀತಾ ಸಿ. ಕಿಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಶ್ವ ಕೊಂಕಣಿ ಕೇಂದ್ರದ ಕಾರ್ಯದರ್ಶಿ ಬಿ. ಪ್ರಭಾಕರ ಪ್ರಭು ಧನ್ಯವಾದ ಸಮರ್ಪಿಸಿದರು. ಲಕ್ಮಿ ವಿ. ಕಿಣಿ ಪ್ರಾರ್ಥಿಸಿ ದೇಶಭಕ್ತಿ ಗೀತೆಯ ಮೂಲಕ ದಿ. ಮಲ್ಯರನ್ನು ಸ್ಮರಿಸಿದರು. ಮಂಗಳೂರು ಆಕಾಶವಾಣಿ ಕೇಂದ್ರದ ನಿವೃತ್ತ ಹಿರಿಯ ಉದ್ಘೋಷಕಿ ಶಕುಂತಳಾ ಆರ್. ಕಿಣಿ ಕಾರ್ಯಕ್ರಮ ನಿರೂಪಣೆ ಮಾಡಿದರು.


Spread the love