ಶ್ರೀ ಮಹಾವೀರ ಸಮವಸರಣ ಆರಾಧನಾ ವಿಧಾನ

Spread the love

ಶ್ರೀ ಮಹಾವೀರ ಸಮವಸರಣ ಆರಾಧನಾ ವಿಧಾನ

ಕಾರ್ಕಳ : ಪರಮ ಪೂಜ್ಯ 108 ಮುನಿಶ್ರೀ ವೀರಸಾಗರ ಮಹಾರಾಜರ ಪಾವನ ಸಾನಿಧ್ಯ ಮತ್ತು ಮಾರ್ಗದರ್ಶನದಲ್ಲಿ ದಿನಾಂಕ : 26.08.2018ನೇ ಭಾನುವಾರದಂದು ಕಾರ್ಕಳದ ಹಿರಿಯಂಗಡಿ ಶ್ರೀ ಮಹಾವೀರ ಭವನದಲ್ಲಿ ಶ್ರೀ ಮಹಾವೀರ ಸಮವಸರಣ ಆರಾಧನಾ ವಿಧಾನವು ಯಶಸ್ವೀಯಾಗಿ ಸಂಪನ್ನಗೊಂಡಿತ್ತು.

ಶ್ರೀ ಬಾಹುಬಲಿ ಸೇವಾ ಸಮಿತಿ, ಧರ್ಮಸ್ಥಳ ಇಲ್ಲಿಯ ಸದಸ್ಯರು ಸೇವಾಕರ್ತೃಗಳಾಗಿದ್ದರು ಹಾಗೂ ಆರಾಧನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಬೆಳಿಗ್ಗೆ ಮುನಿಮಹಾರಾಜರ ಆಹಾರದಾನ, ಸಮವಸರಣ ಆರಾಧನೆ, ಮುನಿಮಹಾರಾಜರ ಆಶೀರ್ವಚನ, ಶಂಕಾಪ್ರಶ್ನೋತ್ತರ, ದಾನಿಗಳ ಸನ್ಮಾನ ಮುಂತಾದ ಕಾರ್ಯಕ್ರಮಗಳು ದಿನ ಪೂರ್ತಿ ಧಾರ್ಮಿಕ ಪರಿಸರವನ್ನೇ ಸೃಷ್ಠಿಸಿತು.

ಪ್ರತಿ ಭಾನುವಾರಗಳಂದು ಬೇರೆ ಬೇರೆ ಆರಾಧನಾ ವಿಧಾನಗಳನ್ನು ಏರ್ಪಡಿಸಲಾಗಿದೆ. ಪ್ರತಿ ಶನಿವಾರಗಳಲ್ಲಿ ಜೈನ ಧರ್ಮಕ್ಕೆ ಸಂಬಂಧಿಸಿದಂತೆ ಭಾಷಣ, ಕಲೆ ಮುಂತಾದ ವಿಷಯಗಳಲ್ಲಿ ಸ್ಪರ್ಧೆಗಳನ್ನು ಏರ್ಪಡಿಸುವುದಾಗಿ ಮುನಿಮಹಾರಾಜರು ಘೋಷಣೆಮಾಡಿದರು. ಹೆಚ್ಚಿನ ಸಂಖ್ಯೆಯಲ್ಲಿ ಶ್ರಾವಕರು ಭಾಗವಹಿಸುವಂತೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಪರಮ ಪೂಜ್ಯ 108 ಶ್ರೀ ವೀರಸಾಗರ ಮುನಿಮಹಾರಾಜ ಚಾರ್ತುಮಾಸ ಸಮಿತಿಯವರು ಭಕ್ತಾದಿಗಳಿಗೆ ಉತ್ತಮ ವ್ಯವಸ್ಥೆಯನ್ನು ಮಾಡಿರುತ್ತಾರೆ.


Spread the love