ಸಂಗಾತಿಗಳಿಬ್ಬರೂ ಬದುಕಿನ ಬಂಡಿಯನ್ನು ಸಮಾನವಾಗಿ ಹೊತ್ತು ಗುರಿಮುಟ್ಟಬೇಕು : ವೀರೇಂದ್ರ ಹೆಗ್ಗಡೆ

Spread the love

ನೆಮ್ಮದಿ ಜೀವನ ನಡೆಸಲು ಸಂಗಾತಿಗಳಿಬ್ಬರೂ ಸಮಾನ ಮನಸ್ಕರಾಗಿ, ಬದುಕಿನ ಬಂಡಿಯನ್ನು ಇಬ್ಬರೂ ಸಮಾನವಾಗಿ ಹೊತ್ತು ಗುರಿಮುಟ್ಟಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ತಿಳಿಸಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಮೀಣಾಭಿವೃದ್ಧಿ ಯೋಜನೆ ಮತ್ತು ಕಾಪೆರ್Çರೇಶನ್‍ಬ್ಯಾಂಕ್ ವತಿಯಿಂದ 7501 ಪ್ರಗತಿ ಬಂಧು ಸ್ವಸಹಾಯ ಸಂಘಗಳ ಉದ್ಘಾಟನೆ ಹಾಗೂ ವಿವಿಧ ಅನುದಾನಗಳ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಸಂಗಾತಿಗಳಿಬ್ಬರು ಬದುಕಿನ ಬಂಡಿಯನ್ನು ಸಮಾನವಾಗಿ ಹೊತ್ತು, ಎಳೆದು ಸಾಗಿಸಬೇಕು ಎಂದು ತಿಳಿಸಿದರು.

veerendra-hegde-kolar

ಎಲ್ಲರೂ ಬದಕಿನಲ್ಲಿ ಏನಾದರೂ ಸಾಧಿಸಲು ಸಂಕಲ್ಪ ಮಾಡಿ, ಎಲ್ಲರೂ ಜಾತಿ, ಧರ್ಮದ ಬೇಧವನ್ನು ಬಿಟ್ಟು ನೆಮ್ಮದಿ ಜೀವನ ಸಾಗಿಸಿ. ತಾವು ಮಾಡುವ ಉದ್ಯೋಗದಲ್ಲಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಇದರಿಂದ ತಮ್ಮ ಆದಾಯ ಹೆಚ್ಚುತ್ತದೆ. ಇಂದಿನ ದಿನಗಳಲ್ಲಿ ಎಲ್ಲಾ ರಂಗಗಳಲ್ಲಿಯೂ ಮಹಿಳೆ ಮುಂದಿದ್ದಾಳೆ ಹಿಂದಿನ ದಿನಗಳಲ್ಲಿ ಪುರುಷರ ಮರೆಯಲ್ಲಿ ಜೀವನ ಸಾಗಿಸುತ್ತಿದ್ದ ಮಹಿಳೆ ಇಂದು ಸ್ವಸಹಾಯ ಸಂಘಗಳಿಂದ ತಾನೂ ಹಣ ಪಡೆದು ದುಡಿಯುವಂತಾಗಿದ್ದಾಳೆ ಎಂದು ತಿಳಿಸುತ್ತಾರೆ.

ಹಿಂದಿನ ದಿನಗಳಲ್ಲಿ ಮನೆಯಲ್ಲಿ ಹೆಣ್ಣು ಮಕ್ಕಳು ಮಕ್ಕಳನ್ನು ಆಡಿಸಿಕೊಂಡು. ಗೃಹಕೃತ್ಯಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು. ಆದರೆ ಇಂದಿನ ದಿನಗಳಲ್ಲಿ ಮಹಿಳೆಯೂ ಸಹ ಪುರುಷನಿಗೆ ಹೆಗಲಾಗಿ ಸಂಸಾರದ ಬಾರ ಹೊರಲು ಸಿದ್ದಳಿದ್ದಾಳೆ ಎಂದು ತಿಳಿಸಿದರು.

ಎಲ್ಲರೂ ದೇವರಲ್ಲಿ ತನಗೆ ಆಯಸ್ಸು ಆರೋಗ್ಯ ನೀಡು ಎಂದು ಬೇಡಿಕೊಳ್ಳುತ್ತೇವೆ. ಎಲ್ಲರೂ ಇಂದಿನ ಸಮಾಜದಲ್ಲಿ ನೆಮ್ಮದಿಗಾಗಿ ಪರಿತಪಿಸುತ್ತಿದ್ದಾರೆ. ಹಾಗೆಯೇ ರೈತರು ನಮಗೆ ನೀರು ಕೊಡಿ ಎಂದು ಕೇಳುತ್ತಾರೆ. ರೈತರಿಗೆ ನೀರನ್ನು ಕೊಟ್ಟರೆ ಅವರು ಮತ್ತೇನನ್ನೂ ಕೇಳದೆ ತಮ್ಮ ಕಾರ್ಯದಲ್ಲಿ ತಾವು ತಲ್ಲೀನರಾಗುತ್ತಾರೆ ಎಂದು ತಿಳಿಸಿದರು.

ಹಿಂದಿನ ದಿನಗಳಲ್ಲಿ ಪರ ದೇಶದವರು ಹೇಗಿದ್ದಾರೆ. ಅವರ ತಿನಿಸು ಸಾಂಸ್ಕøತಿಕತೆ ಇತ್ಯಾದಿಗಳು ಸ್ಥಳಿಯರಿಗೆ ಅರಿವಾಗುತ್ತಿರಲಿಲ್ಲ. ಆದರೆ ಇಂದಿನ ದೃಶ್ಯ ಮಾದ್ಯಮಗಳಿಂದ ಇಂದು ಎಲ್ಲಾ ದೇಶದಲ್ಲಿಯೂ ಜನರು ಹೇಗಿದ್ದಾರೆ. ಅವರ ಉಡುಗೆ ತೊಡುಗೆ ಶ್ರೀಮಂತಿಕೆ ಅರಿವು ಇದೆ ಎಂದು ತಿಳಿಸಿದರು.

ಮಹಿಳೆಯರು ಇತರರ ಸಮಸ್ಯೆಗಳಿಗೆ ಬೇಗನೆ ಸ್ಪಂದಿಸುತ್ತಾರೆ. ಇದರಿಂದಾಗಿ ಮಹಿಳೆಯರಿಗೆ ಸಾಲ ನೀಡಲು ನಮ್ಮ ಸಂಸ್ಥೆ ಮುಂದಿದೆ. ಸ್ವಸಹಾಯ ಎಂದರೆ ನಾವು ಮತ್ತೊಬ್ಬರಿಗೆ ಸಹಾಯ ಮಾಡುವುದೇ ಆಗಿದೆ. ಸಂಘಗಳಲ್ಲಿ ವಾರಕ್ಕೊಮ್ಮೆ ಸಭೆ ನಡೆಸಿ ಸಂಘದ ಎಲ್ಲಾ ಮಹಿಳೆಯರು ಯಾರಿಗಾದರೂ ಸಮಸ್ಯೆ ಇದ್ದಲ್ಲಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿ, ಸಂಘದಿಂದ ಪಡೆದ ಹಣವನ್ನು ಭವಿಷ್ಯದ ಒಳಿತಿಗಾಗಿ ವಿನಿಯೋಗಿಸಿ ಅದಕ್ಕಾಗಿ ಹಣ ಪಡೆಯುವ ಮೊದಲೇ ತೀರ್ಮಾನ ಮಾಡಿ ಎಂದು ಮಾರ್ಗದರ್ಶನ ಮಾಡಿದರು.

ಕಾರ್ಯಕ್ರಮದಲ್ಲಿ ಹಾಲು ಉತ್ಪಾದಕ ಸಹಕಾರ ಸಂಘಗಳಿಗೆ ಅನುದಾನ, ಜನಧನ್ ಖಾತೆದಾರದಿಗೆ ರೂಪೇ ಕಾರ್ಡ್, ಮಶಾಸನ, ಪ್ರಗತಿ ನಿಧಿಯನ್ನು ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಪಿ.ರಾಜೇಶ್, ಕೆಎಂಎಫ್ ಅಧ್ಯಕ್ಷ ಪಿ.ನಾಗರಾಜು, ನಗರಸಭೆ ಅಧ್ಯಕ್ಷ ಲೋಹಿತ್ ಬಾಬು, ತಾಲೂಕು ಪಂಚಾಯಿತಿ ಅಧ್ಯಕ್ಷ ಡಿ.ಎಂ.ಮಹದೇವಯ್ಯ, ಕಾಪೆರ್Çರೇಷನ್ ಬ್ಯಾಂಕ್ ವ್ಯವಸ್ಥಾಪಕ ಪಿ.ಪರಮಶಿವಂ, ಸಿಇಒ ಮಂಜುನಾಥ್, ಎಸ್‍ಕೆಡಿಆರ್‍ಡಿಪಿ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಎಲ್.ಎಚ್.ಮಂಜುನಾಥ್‍ರವರು, ಬಮೂಲ್‍ನ ಕೆ.ರಮೇಶ್, ಡಾ.ಎನ್.ಶಿವಶಂಕರ್, ಡಿವೈಎಸ್‍ಪಿ ಲಕ್ಷ್ಮಿ ಗಣೇಶ್, ಪ್ರಾದೇಶಿಕ ನಿರ್ದೇಶಕರಾದ ಶ್ರೀ ಆನಂದ ಸುವರ್ಣರವರು ಹಾಗೂ ನಿರ್ದೇಶಕರಾದ ಶ್ರೀ ಬಾಬುನಾಯ್ಕರವರು ಸೇರಿದಂತೆ ಮತ್ತಿತರರು ಹಾಜರಿದ್ದರು.


Spread the love