ಸಂತ ಆಗ್ನೇಸ್ ಕಾಲೇಜು ವಿಧ್ಯಾರ್ಥಿ ಸರಕಾರ ಉದ್ಗಾಟನೆ

Spread the love

ಸಂತ ಆಗ್ನೇಸ್ ಕಾಲೇಜು ವಿಧ್ಯಾರ್ಥಿ ಸರಕಾರ ಉದ್ಗಾಟನೆ

ಮಂಗಳೂರು: ಸಂತ ಆಗ್ನೇಸ್ ಸ್ವಾಯತ್ತ ಕಾಲೇಜಿನ ವಿಧ್ಯಾರ್ಥಿ ಸರಕಾರವನ್ನು ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ದೀಪ ಬೆಳಗಿಸಿ ಉದ್ಗಾಟಿಸಿದರು. ವಿಧ್ಯಾರ್ಥಿದಿಶೆಯಲಿರುವಾಗಲೇ ಸ್ವಂತಿಕೆಯ ವ್ಯಕ್ತಿತ್ವವನ್ನು ರೂಢಿಸಿಕೊಳ್ಳಲು ಯತ್ನಿಸಬೇಕು. ನಾವು ಹೇಗಿರಬೇಕು; ಎನಾಗಬೇಕು ಎಂಬುದು ನಮ್ಮ ಸ್ವಂತ ಚಿಂತನೆಗಳಿಂದ ಮೂಡಿಬರಬೇಕು. ಪ್ರತಿಯೊಬ್ಬ ವ್ಯಕ್ತಿಯೂ ಬಿನ್ನ. ವ್ರತ್ತಿಯ ಆಯ್ಕೆ ಆ ಭಿನ್ನತೆಗಳಿಂದಲೇ ಮೂಡಿಬರಬೇಕು.

ಪದವಿ ಹಂತದಲ್ಲಿರುವಗಲೇ ತನ್ನ ವ್ರತ್ತಿಯ ಆಯ್ಕೆಯ ಬಗ್ಗೆ  ಸ್ಪಷ್ಟತೆಯಿದ್ದರೆ ಅದನ್ನು ಸಾಧಿಸುವುದು ಸುಲಭವಾಗುತ್ತದೆ. ವಿಧ್ಯಾರ್ಥಿ ಹಂತದಲ್ಲಿರುವಾಗ ಸರಿ ತಪ್ಪುಗಳ ಕುರಿತು ದ್ವಂದ್ವ, ಚಂಚಲತೆಗಳಿರುವುದು ಸಹಜ. ಆದರೆ ಸ್ವಂತ ಚಿಂತನೆಗಳಿಂದ ಅದನ್ನು ಬಗೆಹರಿಸಿ ಸಾಧನೆಯ ಕಡೆ ಗಮನ ಹರಿಸಬೇಕು ಎಂದು  ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಉದ್ಘಾಟನಾ ಭಾಷಣದಲ್ಲಿ ನುಡಿದರು.

ಪ್ರತಿಯೊಬ್ಬರು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು, ವಿಧ್ಯಾರ್ಥಿ ಸರಕಾರದ ಪದಾಧಿಕಾರಿಗಳಾಗಿ ದುಡಿಯುವುದು ಅದಕ್ಕೆ ಸಹಕಾರಿ ಎಂದು ಹೇಳಿದ ಅವರು ತಮ್ಮ ವಿಧ್ಯಾರ್ಥಿ ಜೀವನದ ಸವಿ ಘಟನೆಗಳನ್ನು ಮೆಲುಕು ಹಾಕಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಸಿ. ಎಮ್.ಜೆಸ್ವೀನಾ ಎ.ಸಿ. ನೂತನವಾಗಿ ಪದಗಹಣ ಮಾಡಿದ ವಿಧ್ಯಾರ್ಥಿ ಸಂಪುಟಕ್ಕೆ ಪ್ರಾಮಾಣವಚನ ಭೋಧಿಸಿದರು. ಪದವಿ ಕಾಲೇಜಿನ ಅಧ್ಯಕ್ಷೆಯಾಗಿ ಲ್ಯಾಡ್ಲೀನ್ ಜನಿಶಾ ಮೊಂತೇರೋ ಮತ್ತು ಸ್ನಾತಕೋತ್ತರ ವಿಭಾಗದ ಅಧ್ಯಕ್ಷೆಯಾಗಿ ದಾನಿಕ ದರಾಯುಸ್ ಮೀರಾ ಪ್ರಮಾಣವಚನ ಸ್ವೀಕರಿಸಿದರು.

ಸಂತ ಆಗ್ನೇಸ್ ಶಿಕ್ಷಣ ಸಂಸ್ಥೆಗಳ ಜಂಟಿ ಕಾರ್ಯದರ್ಶಿ ಡಾ. ಸಿ. ಎಮ್. ಮರಿಯಾ ರೂಪ, ಉಪಪ್ರಾಂಶುಪಾಲೆ ಡಾ.ಸಿ.ಎಮ್.ವೆನಿಸ್ಸಾ.ಎ.ಸಿ. ಉಪಸ್ಥಿತರಿದ್ದರು. ಶ್ರೀಮತಿ ಎಮಿಮಾ ಡೇವಿಡ್ ಸ್ವಾಗತಿಸಿ,  ಶ್ರೀಮತಿ ಅನುಶ್ರೀ ರಾಜ್ ವಂದಿಸಿದರು. ಶ್ರೀಮತಿ ಪ್ರಜ್ವಲ್ ರಾವ್ ಕಾರ್ಯಕ್ರಮ ನಿರೂಪಿಸಿದರು.


Spread the love