ಸಂಧಿಗ್ಧ ಕಾಲದಲ್ಲೂ ಎಂದೂ ದನಿವರಿಯದೆ ಅವಿರತವಾಗಿ ಶ್ರಮಿಸುತ್ತಿರುವ ಉಪನಗರದ ಮಹಾ ಜನತೆಗೆ ಉಣಬಡಿಸುವ ಹರೀಶ್ ಶೆಟ್ಟಿ ಎರ್ಮಾಳ್

Spread the love

ಸಂಧಿಗ್ಧ ಕಾಲದಲ್ಲೂ ಎಂದೂ ದನಿವರಿಯದೆ ಅವಿರತವಾಗಿ ಶ್ರಮಿಸುತ್ತಿರುವ ಉಪನಗರದ ಮಹಾ ಜನತೆಗೆ ಉಣಬಡಿಸುವ ಹರೀಶ್ ಶೆಟ್ಟಿ ಎರ್ಮಾಳ್
 

ಮುಂಬಯಿ: ಕಳೆದ ಅನೇಕ ದಶಕಗಳಿಂದ ಮುಂಬಯಿಯಲ್ಲಿದ್ದೂ ಓರ್ವ ಉದ್ಯಮಿ, ಸಮಾಜ ಸೇವಕರಾಗಿದ್ದರೂ ವರ್ಷಂಪ್ರತೀ ತವರೂರಲ್ಲಿ ಕೃಷಿ ಮಾಡಿ ಹಲವಾರು ಮಂದಿಗೆ ಕೆಲಸವೂ, ಕಳಸೆ ತುಂಬಾ ಭತ್ತವನ್ನೂ ಬೆಳೆಸಿ ಸಂತಸ ಪಡುತ್ತಿರುವ ಹರೀಶ್ ಶೆಟ್ಟಿ ಎರ್ಮಾಳ್ ತನ್ನ ತವರೂರು ತೆರಳಿ ಎಪ್ರಿಲ್-ಮೇ ತಿಂಗಳ ಬೇಸಿಗೆ ಕಾಲದ ಉರಿಬಿಸಿಲ ತಾಪವನ್ನು ಲೆಕ್ಕಿಸದೆ ಜಮೀನು ಸಮತಟ್ಟು ಗೊಳಿಸಿ ಹೊಲಗದ್ದೆಗಳನ್ನು ಸಿದ್ಧ ಪಡಿಸಿ ಬತ್ತ ಬೆಳೆಯ ಪೂರ್ವಸಿದ್ಧತೆ ನಡೆಸುತ್ತಿರುವ ಉಡುಪಿ ತೆಂಕಎರ್ಮಾಳ್ ಅಲ್ಲಿನ ಅಂಬೋಡಿ ಕಲಾನಿವಾಸ ನಿವಾಸಿ.

ಆದರೆ ಈ ಬಾರಿ ಅವೆಲ್ಲವನ್ನೂ ಮರೆತು ಬೃಹನ್ಮುಂಬಯಿನ (ಉಪನಗರಗಳ ಬೋರಿವಿಲಿಯನ್ನು ಕೇಂದ್ರವಾಗಿಸಿ) ಮಹಾ ಜನತೆಗೆ ಉಣಬಡಿಸುವಲ್ಲಿ ಸಕ್ರೀಯರಾಗಿದ್ದಾರೆ. ಇಷ್ಟು ಬ್ಯೂಸಿ ಅವಧಿಯಲ್ಲೂ ಮೊಬಾಯ್ಲ್ ಕರೆ ಸ್ವೀಕರಿಸಿ ಪಡಿತರ (ರೇಶನ್) ಒದಗಿಸಿ ಕೊಡುತ್ತಿದ್ದರೆ ಅಲ್ಲದೆ ತನ್ನ ಉಸ್ತುವರಿಯಲ್ಲಿ ದಿನಕ್ಕೆ ಸುಮಾರು ನಾಲ್ಕೈದು ಸಾವಿರ ಆಹಾರ ಪೆÇಟ್ಟಣಗಳÀನ್ನು ಸಿದ್ಧಪಡಿಸಿ ಸೇವಾ ನಿರತ ವಿವಿಧ ಇಲಾಖೆಗಳು, ಬಡವ ಬಲ್ಲಿದವರಿಸಿ ರವಾನಿಸುತ್ತಿದ್ದಾರೆ.

ಮಹಾನಗರದಾದ್ಯಂತ ಎರ್ಮಾಳ್ ಹರೀಶ್ ಎಂದೇ ಪರಿಚಿತರಾದ ಇವರು ಬಂಟರ ಸಂಘ ಮುಂಬಯಿ ಇದರ ಶೈಕ್ಷಣಿಕ ನೂತನ ಯೋಜನಾ ಸಮಿತಿ ಉಪಾಧ್ಯಕ್ಷರಾಗಿ ಶ್ರಮಿಸುತ್ತಿದ್ದಾರೆ. ಈ ಹಿಂದೆ ಇಂಡಿಯಾನ್ ಹೊಟೇಲ್ ಎಂಡ್ ರೆಸ್ಟೋರೆಂಟ್ ಅಸೋಸಿಯೇಶನ್ (ಆಹಾರ್) ಇದರ ಉಪಾಧ್ಯಕ್ಷರಾಗಿದ್ದ ಹರೀಶ್ ಶೆಟ್ಟಿ ಮುಂಬಯಿನಾದ್ಯಂತ ಎರ್ಮಾಳ್ ಹರೀಶ್ ಎಂದೇ ಪ್ರಸಿದ್ಧರು. ಅವಿರತ ಶ್ರಮದ ಮೂಲಕ ಹೋಟೇಲು ಉದ್ಯಮದಲ್ಲಿ ಪಳಗಿರುವ ಇವರು ಲಿಂಕ್ ವೀವ್ ಫೈನ್ ಡೈನ್ ಹೋಟೇಲ್‍ನ ಪ್ರಧಾನ ಸಂಸ್ಥೆಯಾದ ಕ್ರೀಷ್ವಿ ಹೋಟೆಲ್ಸ್ ಪ್ರೈವೇಟ್ ಲಿಮಿಟೆಡ್‍ನ ಕಾರ್ಯಾಧ್ಯಕ್ಷರಾಗಿದ್ದು, ಮಲಾಡ್ ಇಲ್ಲಿನ ಮಡಾೈಲ್ಯಾಂಡ್‍ನಲ್ಲೂ ಮಂತ್ರ ರೆಸಿಡೆನ್ಸಿ ಇದರ ಮಾಲೀಕರಾಗಿರುವರು. ಸಮಾಜ ಸೇವೆಯಲ್ಲಿ ಸದಾ ಕಾರ್ಯಶೀಲರಾಗಿರುವ ಇವರು ತೆರೆಯ ಮರೆಯಲ್ಲೇ ಇದ್ದು ತಮ್ಮ ಶ್ರೇಷ್ಠತೆ ಮೆರೆದಿದ್ದಾರೆ. ಇಂತಹ ಸಂಧಿಗ್ಧ ಕಾಲದಲ್ಲೂ ಎಂದೂ ದನಿಯದೆ ಅವಿರತವಾಗಿ ಶ್ರಮಿಸುತ್ತಿರುವ ಎರ್ಮಾಳ್ ಅವರ ಸೇವೆಗೆ ಸಾವಿರಾರು ಜನತೆ ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.


Spread the love