ಸಂಪಿಗೆ – ಮಿಜಾರು ಸೇತುವೆ ಕಾಮಗಾರಿ : ಬದಲಿ ರಸ್ತೆ ವ್ಯವಸ್ಥೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕಿನ ಸಂಪಿಗೆ-ಅಶ್ವಥ್ಥಪುರ-ನೀರ್ಕೆರೆ- ಮಿಜಾರು ಜಿಲ್ಲಾ ಮುಖ್ಯ ರಸ್ತೆಯಲ್ಲಿ ಸೇತುವೆ ಪುನರ್ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುವುದರಿಂದ ರಸ್ತೆಯಲ್ಲಿ ಫೆಬ್ರವರಿ 23 ರಿಂದ 2028 ರ ಫೆಬ್ರವರಿ 22 ರವರೆಗೆ (24 ತಿಂಗಳು) ಎಲ್ಲಾ ತರಹದ ವಾಹನಗಳ ಸಂಚಾರ ನಿಷೇಧಿಸಿ, ಸಂಚಾರ ಮಾರ್ಗ ಬದಲಾಯಿಸಿ ತಾತ್ಕಾಲಿಕ ಅಧಿಸೂಚನೆ ಹೊರಡಿಸಲಾಗಿದೆ.
ನೀರ್ಕೆರೆಯಿಂದ ಸಂಪಿಗೆ ಕಡೆಗೆ ಸಂಚರಿಸುವ ಎಲ್ಲಾ ತರಹದ ವಾಹನಗಳು ನೀರ್ಕೆರೆಯಿಂದ ಮಂಜನಕಟ್ಟೆ- ಮುಚ್ಚೂರು- ನಿಡ್ಡೋಡಿಯಿಂದ ರಾಜ್ಯ ಹೆದ್ದಾರಿ 70 ರಲ್ಲಿ ಸಂಪಿಗೆ ಕಡೆಗೆ ಸಂಚರಿಸಬೇಕು ಅಥವಾ ಮಂಜನಕಟ್ಟೆ – ಎಡಪದವು- ಹಂಡೇಲ್ ಮೂಲಕ ಸಂಪಿಗೆ ಕಡೆಗೆ ಸಂಚರಿಸಬೇಕು.
ಸಂಪಿಗೆ ಕಡೆಯಿಂದ ನೀರ್ಕೆರೆ ಕಡೆಗೆ ಸಂಚರಿಸುವ ಎಲ್ಲಾ ತರಹದ ವಾಹನಗಳು ಸಂಪಿಗೆಯಿಂದ ನಿಡ್ಡೋಡಿಯಾಗಿ ಮುಚ್ಚೂರು ಮುಖಾಂತರ ಮಂಜನಕಟ್ಟೆಯಿಂದ ನೀರ್ಕೆರೆ ಕಡೆಗೆ ಸಂಚರಿಸಬೇಕು ಅಥವಾ ಹಂಡೇಲು- ಎಡಪದವು- ಮಂಜನಕಟ್ಟೆ ಮುಖಾಂತರ ನೀರ್ಕೆರೆ ಕಡೆಗೆ ಸಂಚರಿಸಬೇಕು ಎಂದು ನಗರ ಪೋಲಿಸ್ ಆಯುಕ್ತರು ಆದೇಶಿಸಿದ್ದಾರೆ.













