ಸಂಸದೆ ಶೋಭಾ ಅಸ್ತಿತ್ವ ಉಳಿಸಿಕೊಳ್ಳಲು ಬೇಕಾಬಿಟ್ಟಿ ಹೇಳಿಕೆ ನೀಡುತ್ತಿದ್ದಾರೆ; ಯು.ಟಿ.ಖಾದರ್

Spread the love

ಸಂಸದೆ ಶೋಭಾ ಅಸ್ತಿತ್ವ ಉಳಿಸಿಕೊಳ್ಳಲು ಬೇಕಾಬಿಟ್ಟಿ ಹೇಳಿಕೆ ನೀಡುತ್ತಿದ್ದಾರೆ; ಯು.ಟಿ.ಖಾದರ್

ಉಡುಪಿ: ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ತನ್ನ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಬೇಕಾಬಿಟ್ಟಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಜನಪ್ರತಿನಿಧಿಗಳು ಯಾವುದೇ ಹೇಳಿಕೆ ನೀಡುವಾಗ, ಮಾಹಿತಿ ಬಹಿರಂಗ ಪಡಿಸುವಾಗ ಆ ವಿಷಯದ ಕುರಿತು ಸರಿಯಾಗಿ ಆರಿತುಕೊಂಡು ಮಾತನಾಡಬೇಕು. ಆದರೆ ಶೋಭಾ ಕರಂದ್ಲಾಜೆಯವರು ನೀಡಿದ ಹೇಳಿಕೆಯುವ ಬೇಜಬ್ದಾರಿ ಹಾಗೂ ಅಜ್ಞಾನದಿಂದ ಕೂಡಿದೆ.

ಸಂಸದರಾರಿ ಅವರಿಗೆ ಕಾನೂನಿನ ಅರಿವು ಇರಬೇಕಾಗಿದ್ದು, ಒಂದುವೇಳೆ ಇಲ್ಲದೆ ಹೋದರೆ ಇನ್ನೊಬ್ಬರಿಂದ ಕೇಳಿ ತಿಳಿದುಕೊಳ್ಳಬೇಕು ಆದರೆ ಅದ್ಯಾವುದನ್ನು ಮಾಡದೆ ಕೇವಲ ತನ್ನ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಇಂತಹ ಬೇಜಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಐಎಎಸ್ ಅಧಿಕಾರಿ ಅನುರಾಗ್ ತಿವಾರಿಯ ಸಾವಿನ ಕುರಿತು ಕೂಡ ಶೋಭಾ ಹಾಗೂ ಇತರ ಬಿಜೆಪಿ ನಾಯಕರು ಬೇಕಾಬಿಟ್ಟಿ ಆರೋಪ ಮಾಡಿದ್ದರು ಆದರೆ ವಿಧಾನಸಭೆಯಲ್ಲಿ ಬಿಜೆಪಿ ಶಾಸಕರೇ ಇದರ ಬಗ್ಗೆ ಒಂದು ಮಾತನ್ನು ಕೂಡ ಆಡಿಲ್ಲ ಹೀಗೆ ಅಸ್ತಿತ್ವ ಕಳೆದುಕೊಂಡಿರುವ ಶೋಭಾ ಅವರು ಶರತ್ ಹತ್ಯೆಯನ್ನು ಎನ್ ಐಗೆ ಕೊಡಿ ಎನ್ನುತ್ತಾರೆ. ಎನ್ ಐ ಎ ಗೆ ಯಾವುದನ್ನು ಕೊಡಬೇಕು ಮತ್ತು ಯಾವುದು ಕೊಡಬಾರದು ಎಂಬ ಕನಿಷ್ಠಾ ಜ್ಞಾನ ಸಂಸದೆಯಾದ ಶೋಭಾರಿಗೆ ಇಲ್ಲವೆ ಎಂದು ಖಾದರ್ ಪ್ರಶ್ನಿಸದ್ದಾರೆ.

ಶರತ್ ಪ್ರಕರಣವಲ್ಲದೆ ಅಶ್ರಫ್ ಕಲಾಯಿ, ಹರೀಶ್ ಪೂಜಾರಿ, ವಿನಾಯಕ ಬಾಳಿಗಾ, ಪ್ರವೀಣ್ ಪೂಜಾರಿ ಹತ್ಯೆಯ ಬಗ್ಗೆ ಶೋಭಾ ಯಾಕೆ ಮೌನ ವಹಿಸಿದ್ದಾರೆ. ಬೆಂಗಳೂರಿನ ಶಿವಾಜಿನಗರದಲ್ಲಿ ನಡೆದ ಕೊಲೆಯಲ್ಲಿ ಭಯೊತ್ಪಾದಕರ ಪಾತ್ರ ಇದೆ ಎಂಬ ಮಾಹಿತ ಬಂದ ತಕ್ಷಣ ರಾಜ್ಯ ಸರಕಾರ ಯಾರದ್ದೇ ಬೇಡಿಕೆಗೆ ಕಾಯದೆ ಸ್ವಯಂ ಆಗಿ ಎನ್ ಐ ಎ ತನಿಖೆಗೆ ಒಪ್ಪಿಸಿದೆ ಎನ್ನುವುದನ್ನು ಶೋಭಾ ಕರಂದ್ಲಾಜೆ ಅರಿತು ಕೊಳ್ಳಬೇಕು ಎಂದರು.


Spread the love