ಸಯ್ಯದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

Spread the love

ಸಯ್ಯದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

ಉಳ್ಳಾಲ: ಅನುದಾನಿತ ಸಯ್ಯದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಾಲೆಯ ಶಿಕ್ಷಕರಿಗೆ ಮತ್ತು ಸಯ್ಯದ್ ಮದನಿ ಸಂಸ್ಥೆಯ ಅಧೀನದಲ್ಲಿರುವ ಎಲ್ಲಾ ಮುಖ್ಯ ಶಿಕ್ಷಕರಿಗೆ ಅಭಿನಂದನಾ ಕಾರ್ಯಕ್ರಮವನ್ನು ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಹಾಜಿ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು ಅಕ್ಷರದೊಂದಿಗೆ ಇತರ ಪರಿಜ್ಞಾನವನ್ನು ಸಾಮಾಜಿಕವಾಗಿಯೂ ಮಕ್ಕಳ ಎಲ್ಲಾ ರೀತಿಯ ಅಭಿವೃದ್ಧಿಗೆ ಕೆಲಸ ಮಾಡುವ ಶಿಕ್ಷಕಿ ನಮ್ಮ ತಾಯಿಗೆ ಸಮವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಅಭಿಪ್ರಾಯ ಪಟ್ಟರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಮ್.ಪಿ.ಜ್ಞಾನೇಶ್ ಮಾತನಾಡಿ ಶಿಕ್ಷಣ ಎಂದರೆ ಮಕ್ಕಳ ಸರ್ವಾಂಗೀಣ ಬೆಳವಣಿಗೆ,ಯಾವ ಮಕ್ಕಳ ಮನಸ್ಸಿನಲ್ಲಿ ಶಿಕ್ಷಕರು ಸ್ಥಾನ ಪಡೆಯುತ್ತಾರೋ, ಆ ಶಿಕ್ಷಕರ ಮೌಲ್ಯ ಹೆಚ್ಚಾಗುತ್ತದೆ ಆದರೆ ಆ ಸ್ಥಾನ ಪಡೆಯಲು ಶಿಕ್ಷಕರು ಶ್ರಮ ಮತ್ತು ತ್ಯಾಗ ಮಾಡಬೇಕಾಗುತ್ತದೆ ಎಂದು ಹೇಳಿದರು.

ಉಳ್ಳಾಲ ಹಝ್ರತ್ ಸಯ್ಯದ್ ಮದನಿ ಆಂಗ್ಲ ಮಾದ್ಯಮ ಶಾಲೆಯ ಶಿಕ್ಷಕಿ ಶ್ರೀಮತಿ ಫಿಲೋಮಿನಾ ಲೋಬೋ,ಮುಖ್ಯ ಶಿಕ್ಷಕ ಇಂತಿಯಾಝ್, ರಸೂಲ್ ಖಾನ್,ಹಝ್ರತ್ ಹೆಣ್ಣು ಮಕ್ಕಳ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಡಾ/ ಸಂಗೀತಾ,ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಭಾರತಿ, ಸಯ್ಯದ್ ಮದನಿ ಐ.ಟಿ.ಐ.ಯ ಪ್ರಾಂಶುಪಾಲರಾದ ರತ್ನಾಕರ್,ಟಿಪ್ಪು ಸುಲ್ತಾನ್ ಕಾಲೇಜಿನ ಪ್ರಾಂಶುಪಾಲರಾದ ಡಿ.ಬಿ.ಮೊೈದಿನ್,ಕಲ್ಲಾಪು ಸಯ್ಯದ್ ಮದನಿ ಆಂಗ್ಲ ಮಾದ್ಯಮ ಶಾಲೆಯ ಮುಖ್ಯ ಶಿಕ್ಷಕಿ ನಸೀಮಾ, ಶ್ರೀಮತಿ ಪ್ರತಿಮಾ, ಅಳೇಕಲ ಹಝ್ರತ್ ಆಂಗ್ಲ ಮಾದ್ಯಮ ಶಾಲೆಯ ಮುಖ್ಯ ಶಿಕ್ಷಕಿ ರಮ್ಲತ್ ಬಾನು,ಉಳ್ಳಾಲ ಬನಾತ್ ಕಾಲೇಜಿನ ಪ್ರಾಂಶುಪಾಲರಾದ ಝಾಹಿದಾ, ಉಳ್ಳಾಲ ದರ್ಗಾ ಪ್ರಧಾನ ಕಾರ್ಯದರ್ಶಿ ಹಾಜಿ ಮೊಹಮ್ಮದ್ ತ್ವಾಹಾ,ಸದಸ್ಯರಾದ ಇಬ್ರಾಹಿಮ್ ಕಕ್ಕೆತೋಟ, ಶಾಲೆಯ ಸಂಚಾಲಕರಾದ ಇಸ್ಮಾಹಿಲ್ ಹಾಜಬ್ಬ,ಕೋಶಾಧಿಕಾರಿ ಕರೀಮ್,ಸದಸ್ಯರಾದ ರಝಾಕ್, ಹಳೆ ವಿದ್ಯಾರ್ಥಿ ಸಂಘದ ಗೌರವ ಅಧ್ಯಕ್ಷ ರಫೀಕ್,ಉಳ್ಳಾಲ ನಗರ ಸಭಾ ಸದಸ್ಯ ಫಾರೂಕ್.ಯು.ಎಚ್ ಉಪಸ್ಥಿತರಿದ್ದರು.

ಅನುದಾನಿತ ಸಯ್ಯದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 17 ವರ್ಷ ಸೇವೆಗೈದು ನಿವೃತಿ ಹೊಂದಿದ ಶ್ರೀಮತಿ ಶಶಿಕಲಾ ಟೀಚರ್ ಅವರನ್ನು ಸನ್ಮಾನಿಸಲಾಯಿತು.
ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಝುಲ್ಫಾ ಕಾರ್ಯಕ್ರಮ ನಿರೂಪಿಸಿದರು,ಶಾಲಾ

ಮುಖ್ಯ ಶಿಕ್ಷಕ ಕೆ.ಎಮ್.ಕೆ.ಮಂಜನಾಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು,ಶಾಲಾ ಶಿಕ್ಷಕಿ ಶ್ರೀಮತಿ ಅರುಣಾಕ್ಷಿ ಧನ್ಯವಾದಗೈದರು.


Spread the love