ಸರಕಾರದ ಪಡಿತರ ಅಕ್ಕಿ ಕಾಳ ಸಂತೆಯಲ್ಲಿ ಮಾರಾಟ; ಒರ್ವನ ಬಂಧನ

Spread the love

ಸರಕಾರದ ಪಡಿತರ ಅಕ್ಕಿ ಕಾಳ ಸಂತೆಯಲ್ಲಿ ಮಾರಾಟ; ಒರ್ವನ ಬಂಧನ

ಬಂಟ್ವಾಳ: ಸರಕಾರದಿಂದ ಪಡಿತರ ಕಾರ್ಡ್ ದಾರರಿಗೆ ವಿತರಣೆ ಆಗುವ ಅಕ್ಕಿಯನ್ನು ಕಾಳಸಂತೆಯಲ್ಲಿ ಹೆಚ್ಚಿನ ದರಕ್ಕೆ ಮಾರಾಟ ವನ್ನು ಪತ್ತೆ ಹಚ್ಚಿ ಪೊಲೀಸರು ಬಂಧಿಸಿದ್ದಾರೆ.

ದಿನಾಂಕ 25-09-2018 ರಂದು ಬಂಟ್ವಾಳ ಗ್ರಾಮಾಂತರ ಠಾಣಾ ಸಬ್ ಇನ್ಸ್ ಪೆಕ್ಟರ್ ಪ್ರಸನ್ನ ಎಂ,ಎಸ್  ಮತ್ತು ಸಿಬಂದಿಯವರು ರಾಮಲ್ ಕಟ್ಟೆ ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ತುಂಬೆ ಕಡೆಯಿಂದ ಬಂದ ಪಿಕ್ ಅಪ್ ನ್ನು  ನಿಲ್ಲಿಸಿ ತಪಾಸನೆ ನಡೆಸಲಾಗಿ ಅದರಲ್ಲಿ ಸುಮಾರು 50 ಕಿಲೋ ತೂಕದ 40 ಪ್ಯಾಕೆಟ್ ಅನ್ನ ಬಾಗ್ಯದ ಅಕ್ಕಿ, 50 ಖಾಲಿ ಪ್ಲಾಸ್ಟಿಕ್ ಗೋಣಿ ಚೀಲಗಳು, ಪ್ಲಾಸ್ಟಿಕ್ ಗೋಣಿಗೆ ಹೊಲಿಗೆ ಹಾಕುವರೇ ಸ್ಟಿಚ್ಚಿಂಗ್ ಮಿಷನ್ ನ್ನು ಪತ್ತೆ ಹಚ್ಚಿದ್ದು    ಸ್ವಾದೀನಪಡಿಸಿಕೊಂಡ ಎಲ್ಲಾ ಸೊತ್ತುಗಳ ಒಟ್ಟು ಮೌಲ್ಯ ರೂ 1,82,200/- ಆಗಬಹುದು ಪ್ರಕರಣದ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತನ್ನು ಬಂಟ್ವಾಳ ನಿವಾಸಿ ನಿಯಾಜ್ ಹಸನ್ (36) ಎಂದು ಗುರುತಿಸಲಾಗಿದ್ದು,  ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು  ನ್ಯಾಯಾಂಗ ಬಂದನ ವಿದಿಸಿರುತ್ತದೆ, ಅಂಗಡಿ ಮಾಲಕ ಹಕೀಂ  ತಲೆ ಮರೆಸಿಕೊಂಡಿತ್ತಾರೆ.

ಈ ಪ್ರಕರಣವನ್ನು  ಪತ್ತೆ ಹಚ್ಚುವರೇ  ಸಹಾಯಕ ಪೊಲೀಸು ಅಧೀಕ್ಷಕರಾದ  ಋಷಿಕೇಶ್ ಸೋನಾವಣೆ ರವರ  ಆದೇಶದಂತೆ  ಟಿ,ಡಿ ನಾಗರಾಜ್ ಪೊಲೀಸು ವೃತ್ತ ನಿರೀಕ್ಷಕರು ಬಂಟ್ವಾಳ ವೃತ್ತ ರವರ ನಿರ್ದೇಶನದಂತೆ ಬಂಟ್ವಾಳ ಗ್ರಾಮಂತರ ಪೊಲಿಸು ಠಾಣಾ ಪೊಲೀಸು ಉಪ  ನಿರೀಕ್ಷರಾದ ಪ್ರಸನ್ನ ಎಂ,ಎಸ್, ಠಾಣಾ ಎಸ್,ಬಿ ಹೆಡ್ ಕಾನ್ಸ್ ಸ್ಟೇಬಲ್ ಜನಾರ್ದನ, ಹೆಚ್,ಸಿ ಸುರೇಶ್ ಕುಮಾರ್, ರಾದಾಕೃಷ್ಣ ಪಿ,ಸಿ ಗಳಾದ ಶಿವ ಕುಮಾರ್,ಮನೋಜ್ ಕುಮಾರ್  ಮತ್ತು ಜೀಪು ಚಾಲಕ ಕಿರಣ್ ರವರು  ಈ ಪ್ರಕರಣವನ್ನು ಭೇದಿಸಲು ಯಶಸ್ವಿಯಾಗಿದ್ದಾರೆ


Spread the love