ಸರ್ವರ್ ಡೌನ್ ಸಮಸ್ಯೆ – ಸಮಸ್ಯೆ ಅನುಭವಿಸುತ್ತಿರುವ ಕಾರ್ಮಿಕರು

Spread the love

ಸರ್ವರ್ ಡೌನ್ ಸಮಸ್ಯೆ – ಸಮಸ್ಯೆ ಅನುಭವಿಸುತ್ತಿರುವ ಕಾರ್ಮಿಕರು

ಮಂಗಳೂರು: ಕಾರ್ಮಿಕರ, ಬಡವರ ಮತ್ತು ಜನಸಾಮಾನ್ಯರ ಒಳಿತಿಗಾಗಿ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಅನೇಕ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿರುತ್ತವೆ. ಅನೇಕ ಜನ ಕಾರ್ಮಿಕರು, ವಯೋವೃದ್ದರು, ವಿಧವೆಯರು, ಬಿಪಿಎಲ್ ಕಾರ್ಡು ಹೊಂದಿದವರು ಇದರ ಪ್ರಯೋಜನ ಪಡೆದುಕೊಂಡು ನೆಮ್ಮದಿಯ ಜೀವನ ಅಲ್ಲದಿದ್ದರೂ, ಜೀವದಲ್ಲಿದ್ದಾರೆ.

‘ದೇವರು ಕೊಟ್ಟರೂ ಪೂಜಾರಿ ಬಿಡ’ ಎನ್ನುವ ಗಾದೆಯಂತೆ, ಇವೆಲ್ಲಾ ಸವಲತ್ತುಗಳು ಇದ್ದರೂ ಸಮಾಜದ ಈ ಅತ್ಯಂತ ಕೆಳ ವರ್ಗ ಈ ಸವಲತ್ತುಗಳನ್ನು ಬಳಸಿಕೊಳ್ಳಲು ಅನೇಕ ಅಡಚಣೆಗಳು ಬರುತ್ತಲೇ ಇವೆ. ಇಂದು ಈ ಸವಲತ್ತುಗಳೆಲ್ಲಾ ಆನ್ಲೈನ್ ಆಗಿವೆ. ಓದು ಬರಹ ಇಲ್ಲದ ಸಮಾಜದ ಈ ಕೆಳವರ್ಗ ಈ ಹೊಸ ಸವಾಲನ್ನು ಎದುರಿಸಲು ಹರಸಾಹಸ ಮಾಡಬೇಕಾಯ್ತು. ಆದರೆ ಇಂದಿನ ಹೊಸ ಸವಾಲು ‘ಸರ್ವರ್ಡೌನ್’. ಈಗ ಕೆಲವು ದಿನಗಳಿಂದ ಜನಕಲ್ಯಾಣ, ಕಾರ್ಮಿಕ ಕಲ್ಯಾಣ ಯೋಜನೆಯ ಸರ್ವರ್ಗಳು ಡೌನ್ ಆಗಿ ಇವರೆಲ್ಲಾ ಪರದಾಡುವಂತಾಗಿದೆ. ಕೆಲವೊಮ್ಮೆ ಸರ್ವರ್ ಸರಿಯಿದ್ದರೂ, ಈ ಕಲ್ಯಾಣ ಯೋಜನೆಗಳಿಗೆ ಸದಸ್ಯತನ ಮಾಡಲಾಗುತ್ತಿಲ್ಲ, ನವೀಕರಣ ಮಾಡಲಾಗುತ್ತಿಲ್ಲ, ಸವಲತ್ತುಗಳಾದ ಮಕ್ಕಳ ಸ್ಕಾಲರ್ ಶಿಪ್, ಆರೋಗ್ಯ, ಮದುವೆ ಮುಂತಾದುವುಗಳಿಗೆ ಅರ್ಜಿ ಸಲ್ಲಿಸಲಾಗುತ್ತಿಲ್ಲ. ಕಟ್ಟಡ ಕಾರ್ಮಿಕರ ಕಲ್ಯಾಣನಿಧಿಯ ಸರ್ವರ್ ವಿವರಗಳನ್ನು ಸರಿಯಾಗಿ ತೆಗೆದುಕೊಳ್ಳುತ್ತಲೆ ಇಲ್ಲ.

ಕಾರ್ಮಿಕ ಕ್ಷೇಮನಿಧಿ ಕಛೇರಿ (ಇPಈಔ) ಸದಸ್ಯರಿಗೂ ಇಂತಹದೇ ತೊಂದರೆ. ಸರ್ವರ್ ಡೌನ್ನಿಂದಾಗಿ ಕಾರ್ಮಿಕ ಸವಲತ್ತುಗಳಾದ ಕ್ಷೇಮನಿಧಿ, ಪಿಂಚಣಿ ಮುಂತಾದವುಗಳಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಕೊರೋನಾ ಕಾರಣದಿಂದಾಗಿ ಆಫೀಸಿಗೆ ಒಳಬಿಡುತ್ತಿಲ್ಲ.

ಈ ಸರಕಾರಿ ವೆಬ್ಸೈಟ್ಗಳಿಗೆಲ್ಲಾ ಏನಾಗಿದೆ ಎಂಬ ಪ್ರಶ್ನೆಗೆ ಸರಿಯಾದ ಉತ್ತರ ಸಿಗುತ್ತಿಲ್ಲ. ಶೀಘ್ರ ಸಮಸ್ಯೆ ಬಗೆಹರಿಸುತ್ತೇವೆ ಒಂಬ ಬರವಸೆ ಮಾತ್ರ.

ಕಾರ್ಮಿಕ ಪ್ರತಿನಿಧಿಗಳಾದ ನಾವು ಈ ಸಮಸ್ಯೆಯನ್ನು ಈ ಮೂಲಕ ಸರಕಾರಗಳ, ಜನಪ್ರತಿನಿಧಿಗಳ, ಕಾರ್ಮಿಕ ಇಲಾಖೆಯ ಹಾಗೂ ಇತರ ಸಂಬಂಧಪಟ್ಟವರ ಗಮನಕ್ಕೆ ತರುತ್ತಿದ್ದೇವೆ. ಈ ಬಗ್ಗೆ ದಯವಿಟ್ಟು ಕೂಡಲೇ ಗಮನ ಹರಿಸಿ, ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸುತ್ತೇವೆ. ದಯವಿಟ್ಟು ಕಾರ್ಮಿಕರ ತಾಳ್ಮೆಯನ್ನು ಕೆದಕದಿರಿ ಎಂದ ಕಾರ್ಮಿಕ ಸಂಘಟೆಯ ಜಿಲ್ಲಾ ಕಾರ್ಯದರ್ಶಿ ಎಚ್ ವಿ ರಾವ್ ಅವರು ಎಚ್ಚರಿಕೆ ನೀಡಿದ್ದಾರೆ.


Spread the love