ಸಾಧಿಸಬೇಕಾಗಿರುವುದು ಇನ್ನು ಇದೆ, ಇನ್ನೊಂದು ಅವಕಾಶ ಕೊಡಿ: ವಿನಯ್ ಕುಮಾರ್ ಸೊರಕೆ

Spread the love

ಸಾಧಿಸಬೇಕಾಗಿರುವುದು ಇನ್ನು ಇದೆ, ಇನ್ನೊಂದು ಅವಕಾಶ ಕೊಡಿ: ವಿನಯ್ ಕುಮಾರ್ ಸೊರಕೆ

ಉಡುಪಿ: ಕ್ಷೇತ್ರದಲ್ಲಿ ಅಭಿವೃದ್ಧಿ ನಿಟ್ಟಿನಲ್ಲಿ ಸಾಧಿಸಿದ್ದು ಬಹಳ ಇದೆ. ಇನ್ನಷ್ಟು ಕೆಲಸಗಳು ಆಗಬೇಕಾದ ಅಗತ್ಯತೆ ಇದೆ. ಇನ್ನೊಂದು ಅವಕಾಶ ಕೊಟ್ಟರೆ ಮತ್ತೆ ಕಾಪು ಕ್ಷೇತ್ರ ವನ್ನು ರಾಷ್ಟ್ರ ಮಟ್ಡದಲ್ಲಿ ಗುರುತಿಸುವಂತಹ ಕೆಲಸ ಮಾಡುವುದಾಗಿ ಕಾಪು ಶಾಸಕ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.

ಹಿರಿಯಡ್ಕ ದೇವಾಡಿಗರ ಸಭಾಭವನದಲ್ಲಿ ನಡೆದ ಕಾಪು ಬ್ಲಾಕ್ ಉತ್ತರ ವಲಯ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಬಿಜೆಪಿ ಮುಖಂಡೆ ಶ್ಯಾಮಲಾ ಸುಧಾಕರ್, ರಮೇಶ್ ಪ್ರಭು ಮತ್ತು ಪ್ರವೀಣ್ ಈ ಸಂದರ್ಭ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಎಐಸಿಸಿ ಮುಖಂಡ ಅಮ್ರತ್ ಶೆಣೈ, ಕೆಪಿಸಿಸಿ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ, ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಸುಧೀರ್ ಹೆಗ್ಡೆ, ಶಾಂತಾರಾಮ ಸೂಡ, ವಿನೋದ್ ಕುಮಾರ್, ಮಹಾಬಲ ಕುಂದರ್, ಹರೀಶ್ ಕಿಣಿ, ಶ್ರೀಪಾದ್ ರೈ, ಉದ್ಯಾವರ ನಾಗೇಶ್ ಕುಮಾರ್, ಮೈರ್ಮಾಡಿ ಸುಧಾಕರ ಶೆಟ್ಟಿ, ರಮೇಶ್ ಶೆಟ್ಟಿ, ರಮೇಶ್ ಕುಮಾರ್, ಇಸ್ಮಾಯಿಲ್, ಲಕ್ಷ್ಮೀನಾರಾಯಣ ಪ್ರಭು, ಚರಣ್,ಸಂಧ್ಯಾ ಶೆಟ್ಟಿ, ಮಾಲತಿ ಆಚಾರ್ಯ, ಚಂದ್ರಿಕಾ ಕೇಳ್ಕರ್, ಅಶೋಕ್ ಶೆಟ್ಟಿ, ಸಂತೋಷ್ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.


Spread the love

1 Comment

Comments are closed.