ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ 7 ಮಂದಿಯ ಬಂಧನ

Spread the love

ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ 7 ಮಂದಿಯ ಬಂಧನ

ಮಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಮೂರು ಪ್ರತ್ಯೆಕ ಪ್ರಕರಣಗಳಲ್ಲಿ 7 ಜನ ಆರೋಪಿಗಳನ್ನು ಮಂಗಳೂರು ಕೇಂದ್ರ ಉಪವಿಭಾಗದ ರೌಡಿ ನಿಗ್ರಹ ದಳದ ಪೋಲಿಸರು ಹಾಗೂ ಉರ್ವ ಪೋಲಿಸರು ಕಾರ್ಯಾಚರಣೆಯನ್ನು ನಡೆಸಿ ಬಂಧಿಸಿದ್ದಾರೆ.

ಬಂಧಿತರನ್ನು ವೆಲೆನ್ಸಿಯಾ ನಿವಾಸಿ ಮಹಮ್ಮದ್ ರಮ್ಲಾನ್ (22), ಮಾರ್ನಮಿಕಟ್ಟೆ ನಿವಾಸಿ ಅಂಕಿತ್ ಶೆಟ್ಟಿ (25), ಕುಂಟಿಕಾನ ನಿವಾಸಿ ಶುಭಂ (23), ಶಾನ್ ರೊಡ್ರಿಗಸ್ (19), ಜೆಪ್ಪು ನಿವಾಸಿ ಗಣೇಶ್ ಪೂಜಾರಿ (24), ಕೋಡಿಕಲ್ ನಿವಾಸಿಗಳ ಪ್ರವೀಣ್ (25), ರಂಜಿತ್ ದೇವಾಡಿಗ (21) ಎಂದು ಗುರುತಿಸಲಾಗಿದೆ.

ಬಂಧಿತರು ಭಾನುವಾರ ಮಂಗಳೂರು ನಗರದ ಉರ್ವ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಕೊಟ್ಟಾರ ಚೌಕಿ, ಕುಂಟಿಕಾನ ಹಾಗೂ ಕೋಡಿಕಲ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಕುರಿತು ಖಚಿತ ಮಾಹಿತಿ ಮೇರೆಗೆ ಕೊಡಿಕ್ಕಲ್ ಮೈದಾನದ ಬಳಿ ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದು, ಮೂರು ಪ್ರತೈಕ ಪ್ರಕರಣಗಳು ದಾಖಲಾಗಿದೆ.

ಪೋಲಿಸ್ ಆಯುಕ್ತರಾದ ಟಿ. ಆರ್. ಸುರೇಶ್, ಐಪಿಎಸ್, ಪೋಲಿಸ್ ಉಪ ಆಯುಕ್ತರಾದ (ಕಾ&ಸು) ಹನುಮಂತರಾಯ, ಉಮಾಪ್ರಶಾಂತ್, ಹಾಗೂ ಕೇಂದ್ರ ಉಪವಿಭಾಗದ ಎಸಿಪಿರವರಾದ ಉದಯ ನಾಯಕ್ ಅವರ ಮಾರ್ಗದರ್ಶನದಲ್ಲಿ ರೌಡಿ ನಿಗ್ರಹದಳದ ಪೋಲಿಸ್ ನಿರೀಕ್ಷಕರು ರವೀಶ್ ಎಸ್ ನಾಯ್, ಕೃಷ್ಣ ಬಿ, ಪಿಎಸ್ ಐ, ಬಾಲಕೃಷ್ಣ ಎಎಸ್ಐ, ದಾಮೋದರ್ ಎಎಸ್ ಐ, ಹೆಚ್ ಸಿ ಗಳಾದ ಸಂತೋಷ್ ಕುಮಾರ್, ಸಿದ್ದಾರ್ಥ್, ಸಂತೋಷ್ ಕುಮಾರ್, ಕರುಣೇಶ್ ಕುಮಾರ್, ಲೋಕೇಶ್ ಪಿಸಿಗಳಾದ ಪ್ರಮೋದ್, ವಿನೋದ್ ಯೋಗೀಶ್ ಕಾಂತರಾಜು, ಹೇಮಂತ್ ಕುಮಾರ್, ಶಂಕರಪ್ಪ ಲಮಾಣಿ ಕಾರ್ಯಾಚರಣೆಯಲ್ಲಿ ಭಾಗವಹಿಸಿರುತ್ತಾರೆ.


Spread the love