ಸಾಲಿಗ್ರಾಮ :ಮೊಗವೀರ ಯುವ ಸಂಘಟನೆಯಿಂದ ರಕ್ತದಾನ

Spread the love

ಸಾಲಿಗ್ರಾಮ : ಸಂಘಟನಾ ಶಕ್ತಿ ಬೆಳೆಸಿಕೊಂಡು ಸಮಾಜಮುಖಿ ಕಾರ್ಯ ಮಾಡಿದಲ್ಲಿ ಉತ್ತಮ ಸಮಾಜದ ನಿರ್ಮಾಣ ಸಾಧ್ಯ. ರಕ್ತದಾನದಂತಹ ಆರೋಗ್ಯ ಶಿಬಿರಗಳನ್ನು ಗ್ರಾಮೀಣ ಪ್ರದೇಶದಲ್ಲಿ ಆಯೋಜಿಸುವಂತೆ  ಕೋಟದ ಉದ್ಯಮಿ ಆನಂದ್ ಸಿ ಕುಂದರ್ ಸಲಹೆ ನೀಡಿದರು.

blood blood1

ಸಾಲಿಗ್ರಾಮ ಕರಾವಳಿ ಮೊಗವೀರ ಸಭಾಭವನದಲ್ಲಿ ಭಾನುವಾರ ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ ಸಾಲಿಗ್ರಾಮ ಘಟಕ ಹಾಗೂ ಮಹಿಳಾ ಸಂಘಟನೆ, ಉಡುಪಿ ಅಂಬಲಪಾಡಿಯ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್, ಕರಾವಳಿ ಮೊಗವೀರ ಮಹಾಜನ ಸಂಘದ ನೇತೃತ್ವದಲ್ಲಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆ, ಜಿಲ್ಲಾಡಳಿತ, ಇವರ ಸಹಯೋಗದೊಂದಿಗೆ ವಿವಿಧ ಸಂಘ ಸಂಸ್ಥೆಗಳ ನೆರವಿನೊಂದಿಗೆ 10ನೇ ವರ್ಷದ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೊಗವೀರ ಯುವ ಸಂಘಟನೆಯ ಸಾಲಿಗ್ರಾಮ ಘಟಕದ ಅಧ್ಯಕ್ಷ ಕೃಷ್ಣಮೂರ್ತಿ ಮರಕಾಲ ಅಧ್ಯಕ್ಷತೆ ವಹಿಸಿದ್ದರು.

ಉಡುಪಿ ಅಂಬಲಪಾಡಿಯ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‍ನ ಪ್ರವರ್ತಕ ಡಾ.ಜಿ.ಶಂಕರ್, ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆಯ ಮಾಜಿ ಅಧ್ಯಕ್ಷ ಜಯ ಸಿ ಕೋಟ್ಯಾನ್, ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಮೆಡಿಕಲ್ ಆಫೀಸರ್ ಡಾ.ಶಮಿ ಶಾಸ್ತ್ರಿ, ಡಾ.ಮನಾಲಿ, ಡಾ.ಮಾನಸ, ಡಾ.ಸುಧೀರ್, ಡಾ.ಅಮಿತೇಶ್,  ಮಹಿಳಾ ಸಂಘಟನೆಯ ಅಧ್ಯಕ್ಷ ರೇವತಿ, ಮೊಗವೀರ ಯುವ ಸಂಘಟನೆಯ ಸದಾನಂದ ಬಳ್ಕೂರ್, ಕಟೀಲು ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ.ಕೃಷ್ಣ ಕಾಂಚನ್, ಯತೀಶ್ ಮತ್ತಿತರರು ಉಪಸ್ಥಿತರಿದ್ದರು.

ಸಂಘಟನೆಯ ಗೌರವಾಧ್ಯಕ್ಷ ಶೇಖರ್ ಮರಕಾಲ  ಪ್ರಾಸ್ತಾವಿಕವಾಗಿ ಮಾತನಾಡಿದರು. ಮೊಗವೀರ ಯುವ ಸಂಘಟನೆ ಸಾಲಿಗ್ರಾಮ ಘಟಕದ ಕಾರ್ಯದರ್ಶಿ ಸತೀಶ್ ಮರಕಾಲ ಸ್ವಾಗತಿಸಿದರು. ಚಂದ್ರ ಮರಕಾಲ ಗುಂಡ್ಮಿ ವಂದಿಸಿದರು. ರಾಜು ಕರಾವಳಿ ಕಾರ್ಯಕ್ರಮ ನಿರೂಪಿಸಿದರು.


Spread the love