ಸಾಸ್ತಾನ ಮಿತ್ರರಿಂದ ಕಾಡು ಬೆಳೆಸಲು ಸೀಡ್ ಬಾಲ್ ಅಭಿಯಾನ

Spread the love

ಸಾಸ್ತಾನ ಮಿತ್ರರಿಂದ ಕಾಡು ಬೆಳೆಸಲು ಸೀಡ್ ಬಾಲ್ ಅಭಿಯಾನ

ಉಡುಪಿ: ಒಂದೆಡೆ ಕಾಡಿನ ಜಾಗವನ್ನೆಲ್ಲಾ ನಾಡು ಆವರಿಸಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಕಾಡು ಉಳಿಸಲು ಅಲ್ಲಲ್ಲಿ ಪರಿಸರ ಪ್ರೇಮಿಗಳು ಹೊಸ ಪ್ರಯೋಗಗಳನ್ನು ಮಾಡಬೇಕಾಗಿದೆ ಅಂಥ ಪ್ರಯೋಗಗಳಲ್ಲಿ ಸೀಡ್ ಬಾಲ್ ಮಾಡುವ ವಿಧಾನಕ್ಕೆ ಸಾಸ್ತಾನದ ಸಮಾನ ಮನಸ್ಕ ಯುವಕರ ತಂಡವಾದ ಸಾಸ್ತಾನ ಮಿತ್ರರು ಭಾನುವಾರ ಚಾಲನೆ ನೀಡಿದರು.

ಕೆಂಪು ಮಣ್ಣು, ಕೆರೆಮಣ್ಣು ಅಥವಾ ಆಯಾ ಪ್ರದೇಶಕ್ಕೆ ಅನುಗುಣವಾದ ಮಣ್ಣು, ಸಾವಯವ ಗೊಬ್ಬರ, ಸೆಗಣಿ, ಎರೆಗೊಬ್ಬರ, ಹಸುವಿನ ಮೂತ್ರ ಸೇರಿಸಿ ಹದವಾಗಿ ಮಿಶ್ರಣ ಮಾಡಿ  ಅದರ ಒಳಗಡೆ ಬೀಜವನ್ನು ಹಾಕಿ (ಹೊಂಗೆ, ಹಲಸು, ಗೇರು,ಸುಬಾಬು, ಮಾವು,) ಚಂಡಿನ ಆಕಾರ ಮಾಡಿ ಒಣಗಿಸಿ ಮಳೆ ಆರಂಭದಲ್ಲಿ ಈ ಸೀಡ್ ಬಾಲ್ ನ್ನು ಕಾಡು, ಖಾಲಿ ಜಾಗದಲ್ಲಿ  4ಇಂಚು  ಹೊಂಡ ಮಾಡಿ ಬಿತ್ತುವ ಯೋಚನೆ ಸಾಸ್ತಾನ ಮಿತ್ರರು ತಂಡ ಹೊಂದಿದೆ.

ಅಲ್ಲದೆ ಮಳೆಗಾಲದಲ್ಲಿ ಬೇರೆ ಬೇರೆ ಜಾತಿಯ ಬೀಜಗಳನ್ನು ಮಣ್ಣು ಮತ್ತು ಗೊಬ್ಬರದ ಮಿಶ್ರಣಕ್ಕೆ ಸೇರಿಸಿ ಅದನ್ನು ಚೆಂಡಿನ ಆಕಾರ ಮಾಡಿ ಒಣಗಿಸಿ ನಂತರ ಕಾಡಿನಲ್ಲಿ ಬಿತ್ತುವ  ಕಾರ್ಯಕ್ರಮವನ್ನು ತಂಡ ಹಮ್ಮಿಕೊಂಡಿದ್ದು ಈ ಮೂಲಕ ಪರಿಸರವನ್ನು ಹಸಿರಾಗಿಸುವ ಕೆಲಸದಲ್ಲಿ ತಂಡ ತನ್ನನ್ನೇ ತಾನು ತೊಡಗಿಸಿಕೊಳ್ಳಲು ನಿರ್ಧರಿಸಿದೆ.

 ಭಾನುವಾರ ನಡೆದ ಸೀಡ್ ಬಾಲ್ ತಯಾರಿಕಾ ಕಾರ್ಯಕ್ರಮದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಈ ವರ್ಷ ಸಾಸ್ತಾನ ಮಿತ್ರರು ಮೊದಲ ಭಾರಿಗೆ ಎರಡೇ ಗಂಟೆಯಲ್ಲಿ 2200 ಸೀಡ್‌ಬಾಲ್‌ಗಳನ್ನು ತಯಾರಿಸಿದ್ದು ವಿಶೇಷವಾಗಿತ್ತು. ಸೀಡ್ ಬಾಲ್ ಮೂಲಕ ಜನರಲ್ಲಿ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಒಂದು ಪ್ರಯತ್ನ ಇದಾಗಿದ್ದು, ಕಾರ್ಯಕ್ರಮದಲ್ಲಿ ಮಕ್ಕಳು, ಮಹಿಳೆಯರು, ಯುವಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ  ಭಾಗವಹಿಸಿದ್ದು ವಿಶೇಷವಾಗಿತ್ತು.

ಭಾನುವಾರ ವಿನಾಯಕ ದಾಮೋದರ ಸಾವರ್ಕರ್ ಅವರು ಹುಟ್ಟಿದ ದಿನ ಆಗಿದ್ದು, ಹಾಗಾಗಿ ಯಾರು ಹೆಚ್ಚು ಸೀಡ್ ಬಾಲ್ ಮಾಡತಾರೆ ಅವರಿಗೆ ವಿನಾಯಕ ದಾಮೋದರ ಸಾವರ್ಕರ್ ಪುಸ್ತಕ ನೀಡುದಾಗಿ ಹೇಳಿದಾಗ ಆಕಾಶ ಎಂಬವರು 210  ಬಾಲ್ ಮಾಡಿ ಎಲ್ಲರ ಗಮನ ಸೆಳೆದರು.

ಕಾರ್ಯಕ್ರಮವನ್ನು ಸಾಂಕೇತಿಕವಾಗಿ ವಿದ್ವಾನ್ ಡಾ.ವಿಜಯ ಮಂಜರ್, ಆರ್.ಜೆ.ನಯನ, ಆರ್.ಜೆ. ರಶ್ಮಿ , ಹಾಗೂ ಡಾ| ಉಷಾ ಹೇಮಂತ್ ಕುಮಾರ ಸೀಡ್ ಬಾಲ್ ಅಭಿಯಾನ ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಿ, ಸೀಡ್ ಬಾಲ್ ಮಾಡುವ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಸಾಸ್ತಾನ ಮಿತ್ರರು ತಂಡ ವಿನಯಚಂದ್ರ, ರಾಜೇಶ್, ದಿನೇಶ್ ಹಾಗೂ ಇತರರು ಉಪಸ್ಥಿತರಿದ್ದರು.

 


Spread the love