ಸುಬ್ರಹ್ಮಣ್ಯ: ನಾಪತ್ತೆಯಾಗಿದ್ದ ಆಂಬ್ಯುಲೆನ್ಸ್ ಡ್ರೈವರ್ ಮೃತದೇಹ ಪತ್ತೆ

Spread the love

ಸುಬ್ರಹ್ಮಣ್ಯ: ನಾಪತ್ತೆಯಾಗಿದ್ದ ಆಂಬ್ಯುಲೆನ್ಸ್ ಡ್ರೈವರ್ ಮೃತದೇಹ ಪತ್ತೆ

ಮಂಗಳೂರು: ಕಳೆದ ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯಕೇಂದ್ರದ ಆಂಬ್ಯುಲೆನ್ಸ್ ಡ್ರೈವರ್ ಮೃತದೇಹ ಕುಮಾರಧಾರ ನದಿಯಲ್ಲಿ ಇಂದು ಪತ್ತೆಯಾಗಿದೆ.

ಮೃತರನ್ನು ಸುಬ್ರಹ್ಮಣ್ಯ ದೇವರಗದ್ದೆ ನಿವಾಸಿ ಹೊನ್ನಪ್ಪ (52) ಎಂದು ಗುರುತಿಸಲಾಗಿದೆ.

ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯಕೇಂದ್ರದ ಆಂಬ್ಯುಲೆನ್ಸ್ ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಹೊನ್ನಪ್ಪ ಅವರು ಮಂಗಳವಾರದಿಂದ ನಾಪತ್ತೆಯಾಗಿದ್ದರು. ಅವರು ಕುಮಾರಧಾರ ನದಿ ಕಡೆಗೆ ಓಡುತ್ತಿರುವ ದೃಶ್ಯ ಸಿಸಿ ಕೆಮರಾದಲ್ಲಿ ಸೆರೆಯಾಗಿತ್ತು. ಈ ಹಿನ್ನಲೆ ನದಿಗೆ ಹಾರಿರಬಹುದು ಎಂಬ ಶಂಕೆ ಮೇರೆಗೆ ಕುಮಾರಧಾರ ನದಿಯಲ್ಲಿ ಅಂದು ರಾತ್ರಿಯಿಂದಲೇ ಹುಡುಕಾಟ ಆರಂಭಿಸಲಾಗಿತ್ತು.

ಬುಧವಾರದಿಂದ ಎಸ್.ಡಿ.ಆರ್.ಎಫ್. ತಂಡ, ಈಶ್ವರ್ ಮಲ್ಪೆ ತಂಡ, ಆಂಬ್ಯುಲೆನ್ಸ್ ಚಾಲಕರ ತಂಡ, ರವಿ ಕಕ್ಕೆಪದವು ತಂಡ, ಅಗ್ನಿಶಾಮಕದಳ ಸುಳ್ಯ, ಸ್ಥಳೀಯರು ಶೋಧ ಕಾರ್ಯಾಚರಣೆ ನಡೆಸಿದ್ದರು. ನಿರಂತರ ಕಾರ್ಯಾಚರಣೆ ನಡೆದಿದ್ದು, 4ನೇ ದಿನವಾದ ಶುಕ್ರವಾರ ಕುಮಾರಧಾರ ಸ್ನಾನಘಟ್ಟದಿಂದ ಸುಮಾರು ಕಿ.ಮೀ. ಕೆಳಭಾಗದಲ್ಲಿ ಹೊನ್ನಪ್ಪ ಅವರ ಮೃತದೇಹ ಪತ್ತೆಯಾಗಿದೆ. ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love
Subscribe
Notify of

0 Comments
Inline Feedbacks
View all comments