ಸೆನ್ ಕ್ರೈಂ ಪೊಲೀಸ್ ಠಾಣಾ ಪೊಲೀಸರ ಕಾರ್ಯಾಚರಣೆ: ಸೈಬರ್ ವಂಚನೆ ಆರೋಪಿ ಬಂಧನ

Spread the love

ಸೆನ್ ಕ್ರೈಂ ಪೊಲೀಸ್ ಠಾಣಾ ಪೊಲೀಸರ ಕಾರ್ಯಾಚರಣೆ: ಸೈಬರ್ ವಂಚನೆ ಆರೋಪಿ ಬಂಧನ

ಮಂಗಳೂರು: ನಗರ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾದ 131/2023 ಕಲಂ 66(ಸಿ) 66(ಡಿ) ಐಟಿ ಆಕ್ಟ್ 420 ಐಪಿಸಿ ಪ್ರಕರಣದಲ್ಲಿ ಯಾರೋ ಅಪಚಿರಿತ ವ್ಯಕ್ತಿ ವಾಟ್ಸ್ ಆಫ್ ನಲ್ಲಿ ಪಾರ್ಟ್ ಟೈಮ್ ಜಾಬ್ ಇರುವುದಾಗಿ ಪಿರ್ಯಾದಿದಾರಿಗೆ ಸಂದೇಶ ಕಳುಹಿಸಿ ಪಾರ್ಟ ಟೈಂ ಜಾಬ್ ಹೆಸರಿನಲ್ಲಿ ಲಿಂಕ್ ಕಳುಹಿಸಿ ಈ ಲಿಂಕ್ ಮುಖಾಂತರ ಹಣ ತೊಡಗಿಸಿ, ಟಾಸ್ಕ್ ಕಂಪ್ಲೀಟ್ ಮಾಡುವ ಮುಖಾಂತರ ಹಣ ಮಾಡಬಹುದು ಎಂಬುದಾಗಿ ಪಿರ್ಯಾದಿದಾರರನ್ನು ನಂಬಿಸಿ ಪಿರ್ಯಾದಿದಾರರಿಂದ ಒಟ್ಟು 1,15,000 ಹಣ ಪಡೆದು ವಂಚನೆ ಮಾಡಿರುವುದಾಗಿದೆ ಈ ಪ್ರಕರಣದ ತನಿಖೆ ಕೈಗೊಂಡು ರಾಜಸ್ಥಾನದ ಬಾವುರಿನಿವಾಸಿ ಸದ್ದಾಂ ಗೌರಿ @ ಬಾವುರಿ (30) ಎಂಬಾತನನ್ನು ರಾಜಸ್ಥಾನ ರಾಜ್ಯದ ಜೋಧ್ ಪುರ್ ಜಿಲ್ಲೆಯ ಬಾವುರಿಯಿಂದ ಆರೋಪಿಯನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಆರೋಪಿತನಿಂದ ಕೃತ್ಯಕ್ಕೆ ಬಳಸಿದ ವಿವೋ ಕಂಪನಿಯ ಮೊಬೈಲ್ ಫೋನ್ -02 ಡೆಬಿಟ್ ಕಾರ್ಡ್ ಗಳು-08, ಬ್ಯಾಂಕ್ ಚೆಕ್ ಬುಕ್ ಗಳು-04, ಆಧಾರ್ ಕಾರ್ಡ್, ಪಾನ್ ಕಾರ್ಡ್ ಇತ್ಯಾದಿ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಪ್ರಕರಣದಲ್ಲಿನ ಆರೋಪಿ ಪತ್ತೆ ಕಾರ್ಯದಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತರು ಅನುಪಮ ಅಗರವಾಲ್ ರವರು ಹಾಗೂ ಡಿ.ಸಿ.ಪಿ ಸಿದ್ದಾರ್ಥ ಗೊಯಲ್ ಐಪಿಎಸ್ ರವರ ಮಾರ್ಗದರ್ಶನದಂತೆ, ಸಿಸಿಆರ್ ಬಿ ಘಟಕದ ಎಸಿಪಿಯವರಾದ ರವೀಶ್ ನಾಯಕ್ ರವರ ನೇತೃತ್ವದಲ್ಲಿ ಮಂಗಳೂರು ನಗರ ಸೆನ್ ಕ್ರೈಂ ಪೊಲೀಸ್ ಠಾಣೆಯ ಠಾಣಾಧಿಕಾರಿ ಶ್ಯಾಮಸುಂದರ್ ಮತ್ತು ಅಧಿಕಾರಿ/ಸಿಬ್ಬಂದಿಯವರು ಪಾಲ್ಗೊಂಡಿದ್ದರು.


Spread the love