ಸೋಲು ಅಭಿವೃದ್ಧಿ ಸಾಧನೆಯ ಮೌಲ್ಯಮಾಪನವಲ್ಲ: ಕಾರ್ಕಳ ಅವಲೋಕನಾ ಸಭೆಯಲ್ಲಿ ಸೊರಕೆ

Spread the love

ಸೋಲು ಅಭಿವೃದ್ಧಿ ಸಾಧನೆಯ ಮೌಲ್ಯಮಾಪನವಲ್ಲ: ಕಾರ್ಕಳ ಅವಲೋಕನಾ ಸಭೆಯಲ್ಲಿ ಸೊರಕೆ

ಕಾರ್ಕಳ: ಸೋಲು ಅಭಿವೃದ್ಧಿ ಸಾಧನೆಯ ಮೌಲ್ಯಮಾಪನವಲ್ಲ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.

ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್‌ ಸೋಲಿನ ಕುರಿತು ನಗರದ ರಾಜೀವಗಾಂಧಿ ಸಭಾಭವನದಲ್ಲಿ ಆಯೋಜಿಸಿದ ಅವಲೋಕನಾ ಸಭೆಯಲ್ಲಿ ಮಾತನಾಡಿದ ಅವರು, ‘ಪ್ರಜಾಭ್ಯುದಯದ ಅಭಿವೃದ್ಧಿ ಸಾಧನೆ ಮತ್ತು ಪ್ರಜಾಪ್ರಚೋದನೆಯ ಅಪಪ್ರಚಾರಗಳ ನಡುವೆ ಮತದಾರರು ಅಪಪ್ರಚಾರದತ್ತ ಮನ ಬದಲಿಸಿ ತಮ್ಮ ಮುಗ್ಧತೆಗೆ ತಾವೇ ಬಲಿಯಾಗುವುದು ಬೇಸರದ ಸಂಗತಿ’ ಎಂದರು.

ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ ಮಾತನಾಡಿ, ‘ಪ್ರಜಾಪ್ರಭುತ್ವ ಜನಸಂಕಲ್ಪವನ್ನು ಅವಲಂಬಿಸಿದ್ದು ಪಕ್ಷದ ಸೋಲಿನ ಹೊರತಾಗಿಯೂ ಇತ್ತೀಚೆಗೆ ನಡೆದ ಸಾಣೂರು ಗ್ರಾಮ ಪಂಚಾಯಿತಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜಯ ಸಾಧಿಸಿರುವುದು ಪಕ್ಷ ಸಂಘಟಿತವಾಗಿದೆ ಎನ್ನುವುದಕ್ಕೆ ಸಾಕ್ಷಿ ಎಂದರು.

ಬೈಂದೂರು ಕ್ಷೇತ್ರದ ಮಾಜಿಶಾಸಕ ಗೋಪಾಲ ಪೂಜಾರಿ, ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ ಮಾತನಾಡಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ ಅಧ್ಯಕ್ಷತೆ ವಹಿಸಿದ್ದರು.

ರಾಜ್ಯ ಇಂಟಕ್ ಅಧ್ಯಕ್ಷ ರಾಕೇಶ ಮಲ್ಲಿ, ಎಐಸಿಸಿ ಸದಸ್ಯ ಅಮೃತ ಶೆಣೈ, ಸೇವಾದಳದ ಜಿಲ್ಲಾಧ್ಯಕ್ಷ ಅಶೋಕ ಕುಮಾರ್ ಕೊಡವೂರು, ಡಿಸಿಸಿ ಸದಸ್ಯ ಮಹಾಬಲ ಕುಂದರ್, ಕೆಪಿಸಿಸಿ ಸದಸ್ಯ ದೇವಿಪ್ರಸಾದ್ ಶೆಟ್ಟಿ, ಕಿಶನ್ ಹೆಗ್ಡೆ, ಮುರಳಿಧರ ಶೆಟ್ಟಿ, ಡಿಸಿಸಿ ಪ್ರಧಾನ ಕಾರ್ಯದರ್ಶಿ ಶೇಖರ ಮಡಿವಾಳ, ಜಿಲ್ಲಾ ಐಟಿ ಸೆಲ್ ಅಧ್ಯಕ್ಷ ಸತೀಶ ಪೂಜಾರಿ, ಉಪಾಧ್ಯಕ್ಷ ಉದಯಕುಮಾರ್ ಶೆಟ್ಟಿ, ರಾಜ್ಯ ಯುವಕಾಂಗ್ರೆಸ್ ಕಾರ್ಯದರ್ಶಿ ರವಿಶಂಕರ್ ಸೇರ್ವೆಗಾರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಳನಿ ಆಚಾರ್ಯ, ಹಿಂದುಳಿದ ವರ್ಗದ ಅಧ್ಯಕ್ಷ ನವೀನ ದೇವಾಡಿಗ, ಎಸ್.ಸಿ.ಎಸ್.ಟಿ. ಘಟಕದ ಅಧ್ಯಕ್ಷ ಅಣ್ಣಪ್ಪ ನಕ್ರೆ, ಅಲ್ಪಸಂಖ್ಯಾತ ಘಟಕದ ಅಧ್ಯಕ ಮಹಮ್ಮದ್ ಅಸ್ಲಾಂ, ತಾಲ್ಲೂಕು ಪಂಚಾಯಿತಿ ಸದಸ್ಯ ಸುಧಾಕರ ಶೆಟ್ಟಿ, ಕೃಷಿ ಘಟಕದ ಅಧ್ಯಕ್ಷ ಉದಯ ವಿ. ಶೆಟ್ಟಿ, ಶ್ಯಾಮ ಶೆಟ್ಟಿ, ಸುಬಿತ್ ಕುಮಾರ್, ಆರಿಫ್ ಕಲ್ಲೊಟ್ಟೆ ಇದ್ದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧಾಕರ ಎನ್. ಕೋಟ್ಯಾನ್ ಸ್ವಾಗತಿಸಿದರು. ಸುಶಾಂತ ಸುಧಾಕರ್ ವಂದಿಸಿದರು. ವಕ್ತಾರ ನಕ್ರೆ ಬಿಪಿನಚಂದ್ರ ಪಾಲ್ ನಿರೂಪಿಸಿದರು.


Spread the love