ಸ್ವಚ್ಚತೆ ನಮ್ಮ ದೈನಂದಿನ ಜೀವನದ ಕರ್ತವ್ಯವಾಗಬೇಕು-ಡಾ.ಜಿ.ಕೆ ಪ್ರಭು

Spread the love

ಸ್ವಚ್ಚತೆ ನಮ್ಮ ದೈನಂದಿನ ಜೀವನದ ಕರ್ತವ್ಯವಾಗಬೇಕು-ಡಾ.ಜಿ.ಕೆ ಪ್ರಭು

ಉಡುಪಿ:- ಸ್ವಚ್ಛ ಜಿಲ್ಲೆಗಾಗಿ ಸಾಕಷ್ಟು ಪುರಸ್ಕಾರಗಳನ್ನು ನಮ್ಮ ಜಿಲ್ಲೆ ಪಡೆದಿದ್ದರೂ ಇಂದು ‘ಕ್ಲೀನ್ ಮಣಿಪಾಲ್’ ಕಾರ್ಯಕ್ರಮದಲ್ಲಿ ಮಣಿಪಾಲ ತಾಂತ್ರಿಕ ವಿದ್ಯಾಲಯದ 2000 ವಿದ್ಯಾರ್ಥಿಗಳು 12 ಟನ್ ಕಸವನ್ನು ಮಣಿಪಾಲ ಸುತ್ತಮುತ್ತಲಿನ ಪ್ರದೇಶಗಳಿಂದ ಸಂಗ್ರಹಿಸಿ ಅರ್ಥಪೂರ್ಣ ಗಾಂಧಿಜಯಂತಿಯನ್ನು ಆಚರಿಸಿದರು.

ಭಾರತ ಸರ್ಕಾರದ ಪ್ರಧಾನಮಂತ್ರಿ ಶ್ರೀ ನರೇಂದ್ರಮೋದಿಯವರ ಕರೆಯ ಮೇರೆಗೆ ‘ಸ್ವಚ್ಛ ಹೀ ಸೇವಾ’ ಕಾರ್ಯಕ್ರಮದಡಿಯಲ್ಲಿ ವಿದ್ಯಾರ್ಥಿಗಳಿಗೆ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸುವ ರೂಪದಲ್ಲಿ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಸಂಸ್ಥೆಯ ನಿರ್ದೇಶಕರಾದ ಡಾ.ಜಿ.ಕೆ ಪ್ರಭು ಅವರು ಮಾತನಾಡಿ ಸಂಸ್ಥೆಯ ಸಾಮಾಜಿಕ ಹೊಣೆಯ ಬಗ್ಗೆ, ವಿದ್ಯಾರ್ಥಿಗಳಿಗೆ ಇರಬೇಕಾದ ಸ್ವಚ್ಛತಾ ಕಳಕಳಿಯ ಬಗ್ಗೆ ಸಂದೇಶ ನೀಡಿದರು. ಮಣಿಪಾಲದ ಸುತ್ತಮುತ್ತಲಿನ ಪ್ರದೇಶಗಳಾದ ಅನಂತನಗರ, ಹುಡ್ಕೋ ಕಾಲನಿ, ದಶರಥ್ ನಗರ, ಭವಾನಿ ನಗರ, ಪೊಲೀಸ್ ಹಾಗೂ ಟೆಲಿಫೋನ್ ಕ್ವಾರ್ಟರ್ಸ್ ಆವರಣ, ಕೆ.ಎಂ.ಸಿ ಆವರಣ, ಸರಳಬೆಟ್ಟು ಸುತ್ತಮುತ್ತಲೂ ಅಲ್ಲಿಯ ಜನರೊಂದಿಗೆ ಬೆರೆತು ಪ್ಲಾಸ್ಟಿಕ್ ಹಾಗೂ ಇನ್ನಿತರ ಪ್ಲಾಸ್ಟಿಕ್ ಸಾಮಗ್ರಿಗಳನ್ನು ಉಪಯೋಗಿಸದಂತೆ ಜಾಗೃತಿಯನ್ನು ಮೂಡಿಸಲಾಯಿತು.

ಸುಮಾರು 2000 ವಿದ್ಯಾರ್ಥಿಗಳಿಂದ ಸಾಮಾಜಿಕ ಕಳಕಳಿಯ ಬಗ್ಗೆ ‘ವಾಕಥಾನ್ 2017’ ಎಂಬ 5 ಕಿಮೀ ನಡಿಗೆಯ ಕಾರ್ಯಕ್ರಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ್ ಚಾಲನೆ ನೀಡಿದರು.

ಕಾರ್ಯಕ್ರಮದ ನೇತೃತ್ವವನ್ನು ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ಸಹನಿರ್ದೇಶಕರು ಬಾಲಕೃಷ್ಣ ಮದ್ದೋಡಿ, ಡಾ.ಚಂದ್ರಕಾಂತ ಕಿಣಿ, ಡಾ.ನಿತೇಶ್ ನಾಯಕ್, ವಿದ್ಯಾರ್ಥಿ ನಾಯಕರಾದ ದರ್ಶನ್, ರಾಹುಲ್ ವಹಿಸಿದ್ದರು.


Spread the love