“ಸ್ವಚ್ಛ್ ಸೋಚ್” ಎಂಬ   ಸ್ವಚ್ಛತೆಯೆಡೆಗಿನ ಜಾಗೃತಿ ಕಾರ್ಯಕ್ರಮ

Spread the love

“ಸ್ವಚ್ಛ್ ಸೋಚ್” ಎಂಬ   ಸ್ವಚ್ಛತೆಯೆಡೆಗಿನ ಜಾಗೃತಿ ಕಾರ್ಯಕ್ರಮ

ಮಿಜಾರು: ಮಂಗಳೂರಿನ ರಾಮಕೃಷ್ಣ ಆಶ್ರಮ ಹಾಗೂ ಆಳ್ವಾಸ್ ಕಾಲೇಜಿನ “ರೋಸ್ಟ್ರಮ್” ವೇದಿಕೆಯ ಸಂಯುಕ್ತಾಶ್ರಯದಲ್ಲಿ ಶೋಭಾವನ ಆವರಣದಲ್ಲಿ “ಸ್ವಚ್ಛ್ ಸೋಚ್” ಎಂಬ   ಸ್ವಚ್ಛತೆಯೆಡೆಗಿನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಸಂಯೋಜಕ ರಂಜನ್ ಬಲಂಪಾಡಿ ಮಾತನಾಡಿ, ಪ್ರತಿಯೊಬ್ಬರಲ್ಲೂ ಬಾಲ್ಯದಿಂದಲೇ ಪ್ರಕೃತಿಯೆಡೆಗೆ ಕಾಳಜಿ ಮೂಡಿ, ಸ್ಚಚ್ಛತೆ ನಮ್ಮ ದಿನನಿತ್ಯದ ಅಗತ್ಯತೆಯಾದಲ್ಲಿ ಸ್ವಚ್ಛ ಭಾರತ ಎನ್ನುವ ಯೋಜನೆ ಸಂಪೂರ್ಣವಗಿ ಯಶಸ್ವಿಗೊಳ್ಳುತ್ತದೆ.

ನಾವು ತಂದೊಡ್ಡುವ ತೊಂದರೆಗಳ ಜವಬ್ದಾರಿಯನ್ನು ನಾವೇ ಹೊರಬೇಕು. ನಮ್ಮ ಸುತ್ತಮುತ್ತಲಿನ ಸ್ವಚ್ಛತೆಗೆ ನಾವೇ ಹೊಣೆ. ಆದ್ದರಿಂದ ನಮ್ಮೊಳಗಿನ ಬದಲಾವಣೆ ಸಮಾಜದ ಬದಲಾವಣೆಗೆ ಪೂರಕವಾಗಿದೆ. ಕೈ ಕೆಸರಾದರೆ, ಬಾಯಿ ಮೊಸರು ಎಂಬ ತತ್ತ್ವವನ್ನು ಅರಿತು ಜೀವನದಲ್ಲಿ ಮುನ್ನಡೆಯುವುದು ಅತ್ಯಗತ್ಯ. ಸ್ವಚ್ಛ ಭಾರತ ನಮ್ಮ ಕೈಯಲ್ಲಿದೆ ಅದರ ನಿರ್ವಹಣೆ ನಮ್ಮಿಂದಲೇ ಆರಂಭವಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಳ್ವಾಸ್ ಕಾಲೇಜಿನ ಎಮ್.ಬಿ.ಎ ವಿಭಾಗದ ಡೀನ್ ಪ್ರೋ. ರಾಮಕೃಷ್ಣ ಚಡಗ ಮಾತನಾಡಿ, ಇಂತಹ ಕಾರ್ಯಕ್ರಮಗಳು ಪ್ರಸ್ತುತದಲ್ಲಿ ಅತ್ಯವಶ್ಯಕವಾದುದು. ಅನುಭವಗಳಿಂದ ನಮ್ಮ ಜೀವನ ರೂಪಿತವಾಗುತ್ತದೆ. ನಕಾರಾತ್ಮಕ ಚಿಂತನೆಗಳು ನಮ್ಮೆಲರ ಮನಸ್ಸನ್ನು ಕಲುಷಿತಗೊಳಿಸುತ್ತಿವೆ. ಆದ್ದರಿಂದ ನಮ್ಮ ಮನಸ್ಸಿನ ಸ್ಥಿರತೆಯನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ.

ಸಮಾಜ ಪರಿಸರದ ಪ್ರಗತಿಯ ಅವಿಭಾಜ್ಯ ಅಂಗ. ಸಮಾಜದಿಂದ ಉಪಕೃತರಾದ ನಾವು ಸಮಾಜಕ್ಕೆ ಸೇವೆ ಸಲ್ಲಿಸುವುದು ಅತ್ಯಗತ್ಯ. ಪ್ರಸಕ್ತ ಯುವಜನತೆಯಲ್ಲಿ ಇದರ ಕೊರತೆ ಕಂಡುಬರುತ್ತಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಸ್ವಚ್ಛತೆಯ ಬಗೆಗಿನ ಕಾಳಜಿ ವಹಿಸಿ ಮೌಲ್ಯಯುತ ಜೀವನವನ್ನು ರೂಪಿಸಿಕೊಳ್ಳುವುದು ಉತ್ತಮ ಎಂದು ನಿವೃತ್ತ ಸೇನಾ ಅಧಿಕಾರಿ ಗೋಪಿನಾಥ್ ರಾವ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಕಾರ್ಯಕ್ರಮದಲ್ಲಿ ದೈನಂದಿನ ಜೀವನದಲ್ಲಿ ಕಸದ ನಿರ್ವಹಣೆಯನ್ನು ಹೇಗೆ ಮಾಡಬಹುದು ಎಂಬುದನ್ನು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಲಾಯಿತು

ಕಾರ್ಯಕ್ರಮದಲ್ಲಿ  ಸಂಪನ್ಮೂಲ ವ್ಯಕ್ತಿಯಾದ ಪ್ರೆಸ್ಟೀಜ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಸರಿತಾ ಶೆಟ್ಟಿ ಹಾಗೂ ರೋಸ್ಟ್ರಮ್ ವೇದಿಕೆಯ ಸಂಯೋಜಕ ದೀಪಕ್ ರಾಜ್ ಉಪಸ್ಥಿತರಿದ್ದರು.


Spread the love