ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಶೇಣವರನ್ನು ಬಂಧಿಸಲು ಪಾಪ್ಯುಲರ್ ಫ್ರೆಂಟ್ ಆಗ್ರಹ

Spread the love

ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಶೇಣವರನ್ನು ಬಂಧಿಸಲು ಪಾಪ್ಯುಲರ್ ಫ್ರೆಂಟ್ ಆಗ್ರಹ

ಮಂಗಳೂರು: ದೀಪಕ್ ಕೊಲೆಗೆ ಪ್ರತೀಕಾರವಾಗಿ ನಡೆದ ಅಮಾಯಕ ಬಷೀರ್ ಹತ್ಯೆಯನ್ನು ಬಹಿರಂಗವಾಗಿ ಸಮರ್ಥನೆ ಮಾಡಿ ಅಮಾನವೀಯತೆ ಮೆರೆದಿರುವ ಜಿಲ್ಲಾ ವಿಶ್ವ ಹಿಂಧೂ ಪರಿಷತ್ ಮುಖಂಡ ಜಗದೀಶ್ ಶೇಣವ ದ್ವೇಷದ ಹೇಳಿಕೆ ಕರಾವಳಿಯಲ್ಲಿ ಮತ್ತೊಮ್ಮೆ ಕೋಮು ಗಲಭೆಗೆ ಪ್ರಚೋದಿಸಿ ಶಾಂತಿ ಕದಡುವ ಮೂಲಕ ಇನ್ನಷ್ಟು ಅಮಾಯಕರನ್ನು ಬಲಿಕೊಟ್ಟು ರಾಜಕೀಯ ಕಾರ್ಯ ಸಾದಿಸುವ ಸಂಘಪರಿವಾರದ ಹಿಡನ್ ಅಜೆಂಡಾ ಆಗಿದ್ದು, ಸರಕಾರ ತಕ್ಷಣವೇ ಶೇಣವನನ್ನು ಕೋಮುಗಲಭೆಗೆ ಪ್ರಚೋದನೆ ,ಶಾಂತಿಕದಡುವ ಯತ್ನ ಹಾಗೂ ಕೊಲೆಗೆ ಪ್ರಚೋದನೆ ಮುಂತಾದ ಪ್ರಕರಣಗಳನ್ನು ಸ್ವಯಂಪ್ರೇರಿತವಾಗಿ  ಧಾಖಲು ಮಾಡಿ  ಬಂಧಿಸಿ ಕ್ರಮ ಕೈಗಳ್ಳಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ನವಾಜ್ ಉಳ್ಳಾಲ್ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ

ಈ ಮೊದಲು ಮುಸಲ್ಮಾನರ ಕೈ ಕಡಿಯುತ್ತೇವೆ ಎಂಬ ಹೇಳಿಕೆಯನ್ನು ನೀಡಿದ್ದಾಗಲೇ ಸರ್ಕಾರ ಮತ್ತು ಪೋಲೀಸ್ ಇಲಾಖೆ ಕಾನೂನಿನ ಬಿಸಿ ಮುಟ್ಟಿಸಿದ್ದರೆ ಈ ರೀತಿಯ ಹೇಳಿಕೆಗಳು ಬರುತ್ತಾ ಇರಲಿಲ್ಲ.ಜಗದೀಶ ಶೇಣವನ ಈ ಹೇಳಿಕೆಯನ್ನು ಗಮನಿಸಿದರೆ ಪ್ರತೀಕಾರಕ್ಕಾಗಿ ಬಶೀರ್ ರವರ ಹತ್ಯೆಯನ್ನು ಖುದ್ದಾಗಿ ಮಾಡಿಸಿರುವುದಾಗಿ ಮೇಲ್ನೋಟಕ್ಕೆ ಸಾಬೀತು ಗೊಳ್ಳುವುದರಿಂದ ಬಶೀರ್ ಕೊಲೆ ಪ್ರಕರಣದಲ್ಲಿ ಜಗದೀಶ್ ಶೇಣವನನ್ನು ಪ್ರಮುಖ ಆರೋಪಿಯಾಗಿ ಪರಿಗಣಿಸಿ  ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಈ ಮೊದಲು ಬೇರೆ ಕಾರಣಗಳಿಂದ ಜಗದೀಶ್ ಶೇಣವನಿಗೆ ನೀಡಿರುವ ಪೋಲಿಸ್ ಭದ್ರತೆಯನ್ನು ತೆರವುಗೊಳಿಸಬೇಕೆಂದು ಅವರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ  ವಿವಿಧ ಠಾಣೆಗಳಲ್ಲಿ ಸಂಘಪರಿವಾರದ ನಾಯಕರ ವಿರುದ್ಧ  ಹನ್ನೊಂದಕ್ಕಿಂತಲೂ ಹೆಚ್ಚು ಕೋಮು ಪ್ರಚೋಧನಕಾರಿ ಭಾಷಣ ಮಾಡಿರುವುದರ ವಿರುದ್ಧ ಪ್ರಕರಣ ದಾಖಲಾಗಿತ್ತು. ಆದರೆ ಇಷ್ಟರವರೆಗೂ ಒಬ್ಬನನ್ನು ಕೂಡಾ ಬಂಧಿಸಲು ಸಾಧ್ಯವಾಗದಿರುವುದು ಇಂತಹ ಹೇಳಿಕೆಗಳು ಮರುಕಳಿಸಲು ಕಾರಣವಾಗಿದೆ.

 ಜಿಲ್ಲೆಯಲ್ಲಿ ಶಾಂತಿ‌ ಕದಡುವ ಯೋಜನೆಯ ಬಗ್ಗೆ ಈಗಾಗಲೇ ರಾಷ್ಟ್ರೀಯ ಮಾದ್ಯಮಗಳು ಸುದ್ದಿ‌ಮಾಡಿದ್ದು,ಸಂಘಪರಿವಾರದ ವ್ಯವಸ್ಥಿತ ಷಡ್ಯಂತ್ರವನ್ನು ಸಾಕ್ಷಿ ಸಮೇತ ವರದಿ‌ ಮಾಡಿತ್ತು ಅದಕ್ಕೆ ಪೂರಕವೆಂಬಂತೆ ಸಮಾಜದಲ್ಲಿ ಅಶಾಂತಿಗೆ ಪ್ರೇರಣೆ ಎಂಬಂತೆ ಸಂಘಪರಿವಾರದ ನಾಯಕರು ಉದ್ರೇಕಕಾರಿ ಹೇಳಿಕೆ ನೀಡಿ‌ ಮುಗ್ದ ಮನಸ್ಸುಗಳನ್ನು‌ ಕೆಡಿಸುತ್ತಿದ್ದಾರೆ.

ಜಿಲ್ಲೆಯ ಉಸ್ತುವಾರಿ ಸಚಿವರು ಶಾಂತಿ ಕದಡುವವರ ವಿರುದ್ದ ಕಠಿಣ ಕ್ರಮ‌, ಸೂಕ್ರ ಕ್ರಮ‌ ಎಂದು‌ ಹೇಳಿಕೆ ನೀಡುತ್ತಿದ್ದಾರೆಯೇ ಹೊರತು ಸರಿಯಾದ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ವಿಫಲವಾಗುತ್ತಿದೆ ಎಂದು‌ ಅವರು ಈ ಸಂಧರ್ಭದಲ್ಲಿ ವಿಷಾದ ವ್ಯಕ್ತಪಡಿಸಿದರು, ಕರಾವಳಿಯಲ್ಲಿ ಶಾಂತಿ ಸ್ಥಾಪನೆಗೆ ಸಂಘಪರಿವಾರ ಪದೇ ಪದೇ ಭಂಗ ತರುತ್ತಿದ್ದು ಸರಕಾರ ಎಚ್ಚೆತ್ತು ಕೊಳ್ಳದೇ ಇದ್ದಲ್ಲಿ ಜಿಲ್ಲಾಡಳಿತ ಹಾಗೂ ಪ್ಯಾಷಿಸ್ಟ್ ಪರಿವಾರದ ವಿರುದ್ದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಮಾದ್ಯಮ‌ ಪ್ರಕಟನೆಯಲ್ಲಿ ಎಚ್ಚರಿಸಿದ್ದಾರೆ.


Spread the love