ಸ್ವರ್ಣಾ ನದಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ತನಿಖೆಗೆ ಆಗ್ರಹಿಸಿ ಎಸಿಬಿ ಗೆ ನಗರಸಭಾ ಸದಸ್ಯ ರಮೇಶ್ ಕಾಂಚನ್ ದೂರು

Spread the love

ಸ್ವರ್ಣಾ ನದಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ತನಿಖೆಗೆ ಆಗ್ರಹಿಸಿ ಎಸಿಬಿ ಗೆ ನಗರಸಭಾ ಸದಸ್ಯ ರಮೇಶ್ ಕಾಂಚನ್ ದೂರು

ಉಡುಪಿ: ಉಡುಪಿಯ ಹಿರಿಯಡ್ಕ ಸಮೀಪದ ಸ್ವರ್ಣಾ ನದಿಯಿಂದ ಬಜೆ ಅಣೆಕಟ್ಟಿನ ಪ್ರದೇಶದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮರಳುಗಾರಿಕೆ ವಿರುದ್ದ ಸೂಕ್ತ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ, ಎಸಿಬಿ ಹಾಗೂ ಲೋಕಾಯುಕ್ತಕ್ಕೆ ಉಡುಪಿ ನಗರಸಭಾ ಸದಸ್ಯ ರಮೇಶ್ ಕಾಂಚನ್ ದೂರು ನೀಡಿದ್ದಾರೆ.

ಉಡುಪಿ ನಗರಕ್ಕೆ ಅನ್ವಯವಾಗುವಂತೆ ಕುಡಿಯುವ ನೀರನ್ನು ಉಡುಪಿಯ ಹಿರಿಯಡ್ಕ ಸಮೀಪದ ಸ್ವರ್ಣಾ ನದಿಯಿಂದ ಬಜೆ ಅಣೆಕಟ್ಟಿನ ಮೂಲಕ ಪೂರೈಕೆ ಪ್ರದೇಶದಲ್ಲಿ ಹೂಳು ತುಂಬಿದ್ದು, ನೀರಿನ ಹರಿಯುವಿಕೆಗೆ ತೊಂದರೆಯಾಗುತ್ತದೆಂಬ ನೆಪದಲ್ಲಿ ಉಡುಪಿ ನಗರಸಭೆಯು ಹೂಳೆತ್ತುವ ಬಗ್ಗೆ ಪತ್ರಿಕೆಯಲ್ಲಿ ಟೆಂಡರ್ ಪ್ರಕಟಣೆ ನೀಡಿರುತ್ತದೆ. ಗುತ್ತಿಗೆ ನೀಡಿರುವ ಪ್ರಕ್ರಿಯೆಯು ಕಾನೂನುಬಾಹಿರವಾಗಿದ್ದು, ಗೋಕುಲ್ದಾಸ್ ಶೆಟ್ಟಿ ಎಂಬವರ ಕ್ರಮಬದ್ಧ ಹಾಗೂ ಅರ್ಹ ಗುತ್ತಿಗೆ ನೀಡಲಾಗಿರುತ್ತದೆ. ಸದ್ರಿ ಟೆಂಡರ್ ಪ್ರಕ್ರಿಯೆಯು ಕಾನೂನು ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಮಂಗಳೂರಿನ ಸಂಸ್ಥೆಗೆ ಹೂಳೆತ್ತುವಿಕೆಗೆ ಆದೇಶ ನೀಡಲಾಗಿರುತ್ತದೆ.

ನಿಯಮಾವಳಿಗಳಂತೆ ಕಾಮಗಾರಿ ನಡೆಯುವ ಸ್ಥಳದಲ್ಲಿ ನಿಗಾವಹಿಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸ್ವಂತ ಅನುದಾನದಿಂದ ನಿರ್ಮಿತಿ ಕೇಂದ್ರದ ಮುಖಾಂತರ ಚೆಕ್ಪೆÇೀಸ್ಟ್ಗಳನ್ನು ನಿರ್ಮಿಸಿ, ಅಗತ್ಯವಿರುವ ಸಿ.ಸಿ. ಟಿ.ವಿ. ಮತ್ತು ಭದ್ರತಾ ಸಿಬ್ಬಂದಿಗಳನ್ನು ಹಾಗೂ ಕಾಮಗಾರಿ ನಡೆಯುವ ಸ್ಥಳದಲ್ಲಿ ಪರಿವೀಕ್ಷಿಸಲು ಮುಂತಾದ ಪರಿಕರಗಳನ್ನು ಕಲ್ಪಿಸಲು ಹಾಗೂ ಅಹಿತಕರ ಘಟನೆಗಳು ಸಂಭವಿಸದಂತೆ ಎಲ್ಲಾ ಇಲಾಖೆಯ ಸಿಬ್ಬಂದಿಗಳನ್ನು ಮೇಲ್ವಿಚಾರಣೆಗೆ ನಿಯೋಜಿಸುವಂತೆ ಹಾಗೂ ಸದರಿ ವ್ಯಾಪ್ತಿಯ ಪೆÇಲೀಸರ ಸಹಾಯವನ್ನು ಪಡೆದುಕೊಳ್ಳಲು ಜಿಲ್ಲಾಧಿಕಾರಿಗಳು, ಉಡುಪಿ ಇವರು ತಮ್ಮ ಪತ್ರ ದಿನಾಂಕ 28-08-2019ರಲ್ಲಿ ನಿರ್ದೇಶನ ನೀಡಿರುತ್ತಾರೆ.

ಆದರೆ ಸಮಿತಿಯ ಅಧ್ಯಕ್ಷರು, ಸದಸ್ಯರು ಮತ್ತು ಇತರ ಅಧಿಕಾರಿಗಳು, ಕೆಲ ಜನಪ್ರತಿನಿಧಿಗಳು ಹಾಗೂ ಪ್ರಭಾವೀ ವ್ಯಕ್ತಿಗೊಳೊಂದಿಗೆ ಶಾಮಿಲಾಗಿ ಟೆಂಡರ್ ಶರತ್ತು ಮತ್ತು ನಿರ್ದೇಶನಗಳನ್ನು ಉಲ್ಲಂಘಿಸಿ, ದಿನಾಂಕ 28-08-2019ರ ಪತ್ರದಲ್ಲಿ ಜಿಲ್ಲಾಧಿಕಾರಿಗಳು ಸೂಚಿಸಿರುವ ಯಾವುದೇ ಪರಿಕರಗಳನ್ನು ಅಳವಡಿಸದೆ, ಬಜೆ ಅಣೆಕಟ್ಟಿನಿಂದ ಮಾಣೆಯವರೆಗೆ ಹಾಗೂ ಮಾಣೆಯಿಚಿದ ಶೀರೂರಿನ ವರೆಗೆ ಹೂಳೆತ್ತುವ ನೆಪದಲ್ಲಿ ಮರಳನ್ನು ಕಳ್ಳತನ ಮಾಡಿ ಅಕ್ರಮ ಮರಳುಗಾರಿಕೆ ನಡೆಸಿರುತ್ತಾರೆ. ಟೆಂಡರ್ ಶರತ್ತಿಗೊಳಪಟ್ಟು ಹೂಳು ತೆಗೆಯುವ ಬದಲಿಗೆ ಮರಳನ್ನು ಅಕ್ರಮವಾಗಿ ತೆಗೆದು ಉಡುಪಿ ಹಾಗೂ ಇತರ ಪ್ರದೇಶಗಳಲ್ಲಿ ಹಾಗೂ ಕಾಡಿನ ಮಧ್ಯಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿರುವುದಲ್ಲದೆ, ಈಗಾಗಲೇ ಕೋಟ್ಯಾಂತರ ರೂಪಾಯಿ ಮೌಲ್ಯದ ಸಾವಿರಾರು ಲೋಡ್ಗಳಷ್ಟು ಮರಳನ್ನು ಕಳ್ಳತನ ಮಾಡಿ ಅಕ್ರಮ ಸಾಗಾಟ ಮಾಡಿರುತ್ತಾರಲ್ಲದೆ, ಸರಕಾರದ ಬೊಕ್ಕಸಕ್ಕೆ ಸೇರಬೇಕಾದ ರಾಜಧನವನ್ನು ವಂಚನೆ ಮಾಡಿರುತ್ತಾರೆ.

ಉಡುಪಿ ಸಹಿತ ರಾಜ್ಯಾದ್ಯಂತ ಜಾರಿಯಾಗಿರುವ ಕೊರೊನಾ ವೈರಸ್ ಲಾಕ್ಡೌನ್ನ ದುರ್ಲಾಭ ಪಡೆದು, ಮೇಲೆ ಹೇಳಿದ ಸಮಿತಿ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಕೆಲವೊಂದು ಪ್ರಭಾವೀ ವ್ಯಕ್ತಿಗಳ ಪೆÇ್ರೀತ್ಸಾಹ, ಬೆಂಬಲದೊಂದಿಗೆ ಅಕ್ರಮ ಮರಳುಗಾರಿಕೆ ರಾಜಾರೋಷವಾಗಿ ನಡೆಯುತ್ತಿದೆ. ಅಲ್ಲದೆ, ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಿರುವ ಸಮಿತಿಯ ಸದಸ್ಯರುಗಳಿಗೆ ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲರಾಗಿ ಅಕ್ರಮ ಮರಳುಗಾರಿಕೆ ವ್ಯಾಪಕವಾಗಿ ನಡೆಯುತ್ತಿದ್ದು, ಅವರುಗಳೇ ಭ್ರಷ್ಟಾಚಾರದಲ್ಲಿ ತೊಡಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಈ ಕೋಟ್ಯಾಂತರ ಮೌಲ್ಯದ ಅಕ್ರಮ ಮರಳುಗಾರಿಕೆ ಹಗರಣ ನಡೆದಿರುವ ವಿಷಯ ಮಾಧ್ಯಮಗಳಲ್ಲಿ ಪ್ರಕಟಗೊಂಡಿದ್ದರೂ ಜಿಲ್ಲಾಧಿಕಾರಿಗಳಾಗಲೀ ಅಥವಾ ಇತರ ಯಾವುದೇ ಅಧಿಕಾರಿಗಳಾಗಲೀ ಈ ಬಗ್ಗೆ ಯಾವುದೇ ಕಾನೂನು ಕ್ರಮ ಕೈಗೊಂಡಿರುವುದು

ಈ ಹಗರಣದಲ್ಲಿ ಒಳಗೊಂಡಿರುವ ಅಧಿಕಾರಿಗಳು, ಗುತ್ತಿಗೆದಾರರು, ಜನಪ್ರತಿನಿಧಿಗಳು ಹಾಗೂ ಪ್ರಭಾವೀ ವ್ಯಕ್ತಿಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವುದು ಅವಶ್ಯವಾಗಿರುತ್ತದೆ. ಈಗಾಗಲೇ ಅಕ್ರಮವಾಗಿ ಶೇಖರಿಸಿಟ್ಟ ಬೃಹತ್ ಪ್ರಮಾಣದ ಮರಳನ್ನು ಗುತ್ತಿಗೆದಾರರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬೆಂಬಲದೊಂದಿಗೆ ಅಕ್ರಮವಾಗಿ ಸಾಗಿಸಿ ಮತ್ತೆ ಕೋಟ್ಯಾಂತರ ಹಣವನ್ನು ಕೊಳ್ಳೆ ಹೊಡೆಯುವ ಸಾಧ್ಯತೆ ಇರುವುದರಿಂದ ಸಂಗ್ರಹಿಸಿದ ಮರಳನ್ನು ಮುಟ್ಟುಗೋಲು ಹಾಕುವುದು ಹಾಗೂ ಸರಕಾರಕ್ಕೆ ಬರಬೇಕಾದ ರಾಜಧನ ಹಣವನ್ನು ರಕ್ಷಿಸುವುದು ತೀರಾ ಅವಶ್ಯವಾದಿರುತ್ತದೆ.

ಆದುದರಿಂದ, ಉಡುಪಿಯ ಬಜೆ ಅಣೆಕಟ್ಟು ಪ್ರದೇಶದಲ್ಲಿ ನಡೆದಿರುವ ಅಕ್ರಮ ಮರಳುಗಾರಿಕೆಯ ಬಗ್ಗೆ ಸೂಕ್ತ ತನಿಖೆಯನ್ನು ನಡೆಸಿ, ಕೋಟ್ಯಾಂತರ ಮೌಲ್ಯದ ಮರಳನ್ನು ಕಳ್ಳತನ ಮಾಡಿ, ಅಕ್ರಮವಾಗಿ ಸಾಗಿಸಿ ಭ್ರಷ್ಟಾಚಾರದಲ್ಲಿ ತೊಡಗಿರುವ ಸಂಬಂಧಪಟ್ಟ ಗುತ್ತಿಗೆದಾರರು ಮತ್ತು ಅವರೊಂದಿಗೆ ಶಾಮೀಲಾಗಿರುವ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಇತರ ಪ್ರಭಾವೀ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮತ್ತು ಅಕ್ರಮವಾಗಿ ಸಂಗ್ರಹಿಸಿಟ್ಟ ಮರಳನ್ನು ಸರಕಾರಕ್ಕೆ ಮುಟ್ಟುಗೋಲು ಹಾಕಲು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಆಗ್ರಹಿಸಿದ್ದಾರೆ.

ಜಿಲ್ಲಾಧಿಕಾರಿಗೆ ದೂರು ಸಲ್ಲಿಸುವ ವೇಳೆ ಈ ವೇಳೆ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ನಗರಸಭಾ ಸದಸ್ಯರಾದ ರಮೇಶ್ ಕಾಂಚನ್, ಕಾಂಗ್ರೆಸ್ ನಾಯಕರಾದ ಮುರಳಿ ಶೆಟ್ಟಿ , ಹರೀಶ್ ಕಿಣಿ, ಸತೀಶ್ ಅಮೀನ್, ವಿಶ್ವಾಸ್ ಅಮೀನ್, ಪ್ರಶಾಂತ್ ಪೂಜಾರಿ, ಆರ್. ಕೆ. ರಮೇಶ್, ಯತೀಶ್ ಕರ್ಕೇರಾ, ಚರಣ್ , ಸಂಜಯ್ ಆಚಾರ್ಯ ಉಪಸ್ಥಿತರಿದ್ದರು


Spread the love