ಹಂಪಿ ಎಕ್ಸ್ ಪ್ರೆಸ್ ತಡವಾಗಿ ಬಂದು ವಿದ್ಯಾರ್ಥಿಗಳಿಗೆ ಪರೀಕ್ಷೆ ತಪ್ಪಿದ್ದಕ್ಕೆ ಹೊಣೆ ಯಾರು ? – ಎಸ್.ಐ.ಓ ಕರ್ನಾಟಕ ಆಕ್ರೋಶ

Spread the love

ಹಂಪಿ ಎಕ್ಸ್ ಪ್ರೆಸ್ ತಡವಾಗಿ ಬಂದು ವಿದ್ಯಾರ್ಥಿಗಳಿಗೆ ಪರೀಕ್ಷೆ ತಪ್ಪಿದ್ದಕ್ಕೆ ಹೊಣೆ ಯಾರು ? – ಎಸ್.ಐ.ಓ ಕರ್ನಾಟಕ ಆಕ್ರೋಶ

ಬೆಂಗಳೂರು: ರೈಲು ಹಳಿ ನಿರ್ವಹಣೆಯ ಸಬೂಬು ನೀಡಿ ಸುಮಾರು ಆರು ಗಂಟೆ ತಡವಾಗಿ ಚಲಿಸಿದ ಹಂಪಿ ಎಕ್ಸ್ಪ್ರೆಸ್ ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ನೀಟ್ ಪರೀಕ್ಷೆಯಿಂದ ವಂಚಿತಗೊಳಿಸಿದೆ. ತಡವಾಗಿ ಚಲಿಸಿದ ಹಂಪಿ ಎಕ್ಸ್ ಪ್ರೆಸ್ ರೈಲು, ವೈದ್ಯಕೀಯ ಶಿಕ್ಷಣದ ಕನಸು ಹೊತ್ತು ಹೊರಟ ವಿದ್ಯಾರ್ಥಿಗಳಿಗೆ ಘನಘೋರಾ ಅನ್ಯಾಯವೆಸಗಿದೆ. ರೈಲು ತಡವಾಗಿ ಸಂಚರಿಸಿದ ಕಾರಣ ಹುಬ್ಬಳ್ಳಿ, ಬಳ್ಳಾರಿ ಕಡೆಯ 500 ವಿದ್ಯಾರ್ಥಿಗಳು ಪರೀಕ್ಷೆ ವಂಚಿತರಾಗಿದ್ದಾರೆ.

ಈ ಕೂಡಲೇ ವಿದ್ಯಾರ್ಥಿಗಳಿಗಾದ ಅನ್ಯಾಯಕ್ಕೆ ಕೇಂದ್ರ ಸರಕಾರ ಮತ್ತು ರೈಲ್ವೆ ಇಲಾಖೆ ಹೊಣೆ ಹೊತ್ತು ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಎಸ್.ಐ.ಓ ಕರ್ನಾಟಕ ಆಗ್ರಹಿಸಿದೆ.

ವಿದ್ಯಾರ್ಥಿಗಳಿಗೆ ಅಪರಾಹ್ನ 1:30 ಕ್ಕೆ ಪರೀಕ್ಷಾ ಕೊಠಡಿ ಪ್ರವೇಶಿಸಲು ಕೊಟ್ಟಿರು ಸಮಯವಾಗಿತ್ತು. ಆದರೆ ರೈಲು ಬೆಂಗಳೂರು ಪ್ರವೇಶಿಸಿದ್ದು 2:30 ಕ್ಕೆ ಆಗಿದ್ದು, ಪರೀಕ್ಷಾ ವಂಚಿತ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಅವಕಾಶ ಕಲ್ಪಿಸಬೇಕೆಂದು ಎಸ್.ಐ.ಓ ಕರ್ನಾಟಕ ಆಗ್ರಹಿಸುತ್ತದೆ ಅದರೊಂದಿಗೆ ವಿದ್ಯಾರ್ಥಿಗಳ ಪ್ರಯಾಣದ ವೆಚ್ಚವನ್ನು ಕೇಂದ್ರ ಸರಕಾರ ಭರಿಸಬೇಕೆಂದು ಈ ಮೂಲಕ ಆಗ್ರಹಿಸುತ್ತೇವೆ.


Spread the love