ಹಣಕಾಸಿನ ವ್ಯವಹಾರ ಮತ್ತು ವೈಯುಕ್ತಿಕ ದ್ವೇಷ ರೌಡಿ ಶೀಟರ್ ಕಿಶನ್ ಹೆಗ್ಡೆ ಕೊಲೆಗೆ ಕಾರಣ – ಎಸ್ಪಿ ವಿಷ್ಣುವರ್ಧನ್

Spread the love

ಹಣಕಾಸಿನ ವ್ಯವಹಾರ ಮತ್ತು ವೈಯುಕ್ತಿಕ ದ್ವೇಷ ರೌಡಿ ಶೀಟರ್ ಕಿಶನ್ ಹೆಗ್ಡೆ ಕೊಲೆಗೆ ಕಾರಣ – ಎಸ್ಪಿ ವಿಷ್ಣುವರ್ಧನ್

ಉಡುಪಿ: ಹಣಕಾಸಿನ ವ್ಯವಹಾರ ಮತ್ತು ವೈಯುಕ್ತಿಕ ವೈಷ್ಯಮ್ಯದಿಂದ ರೌಡಿ ಶೀಟರ್ ಕಿಶನ್ ಹೆಗ್ಡೆಯನ್ನು ಕೊಲೆಗೈಯ್ಯಲಾಗಿದೆ ಎಂದು ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್ ಹೇಳಿದರು.

ಅವರು ಶನಿವಾರ ಸಂಜೆ ಜಿಲ್ಲಾ ಎಸ್ಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಸೆಪ್ಟೆಂಬರ್ 24ರಂದು ಹಿರಿಯಡ್ಕ ಪೇಟೆಯಲ್ಲಿ ಹಾಡು ಶ್ರೀ ಕುಮಾರ ಚಂದ್ರ ಅವರ ಮಾರ್ಗದರ್ಶನದಂತೆ ಜೈ ಶಂಕರ್ ಪೊಲೀಸ್ ಡಿವೈಎಸ್ಪಿ , ಉಡುಪಿ ಉಪ ವಿಭಾಗದವರ ನಿರ್ದೇಶನದಂತೆ 4 ವಿಶೇಷ ತಂಡಗಳನ್ನು ರಚಿಸಲಾಗಿದ್ದು ಕೊಲೆ ಪ್ರಕರಣದಲ್ಲಿ ಕೃತ್ಯ ನಡೆಸಿ ಪರಾರಿಯಾದ ಆರೋಪಿಗಳನ್ನು ಸೆಪ್ಟೆಂಬರ್ 26 ರಂದು ಪತ್ತೆ ಹಚ್ಚಿ ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕರಾದ ಶ್ರೀ ಅನಂತ ಪದ್ಮನಾಭ ಮತ್ತು ಬ್ರಹ್ಮಾವರ ಪಿಎಸ್ಐ ರಾಘವೇಂದ್ರರವರ ವಿಶೇಷ ತಂಡ ಬಂಧಿಸಿದ್ದಾರೆ

ಬಂಧಿತ ಆರೋಪಿಗಳನ್ನು ಮಂಗಳೂರು ಶೇಡಿಗುರಿ ನಿವಾಸಿ ಮನೋಜ್ ಕುಲಾಲ್ (37), ಕೃಷ್ಣಾಪುರ ಕಾಟಿಪಳ್ಳ ನಿವಾಸಿ ಚಿತ್ತರಂಜನ್ ಪೂಜಾರಿ (27), ಬಂಟ್ವಾಳ ಪೊಳಲಿ ನಿವಾಸಿ ಚೇತನ್ @ಚೇತು ಪಡೀಲ್ (32) ಬಂಟ್ವಾಳ ಸಂಗಬೆಟ್ಟು ನಿವಾಸಿ ರಮೇಶ್ ಪೂಜಾರಿ (38) ಮತ್ತು ಸುರತ್ಕಲ್ ನಿವಾಸಿ ದೀಕ್ಷಿತ್ ಶೆಟ್ಟಿ @ ದೇವಿ ಪ್ರಸಾದ್ ಎಂದು ಗುರುತಿಸಲಾಗಿದೆ.

ಈ ಎಲ್ಲಾ ಆರೋಪಿಗಳ ವಿರುದ್ದ ಬೇರೆ ಬೇರೆ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದು ರೌಡಿ ಶಿಟರ್ ಆಗಿರುತ್ತಾರೆ ಎಂದು ಅವರು ತಿಳಿಸಿದರು.

ಆರೋಪಿ ಮನೋಜ್ನ ವಿರುದ್ದ ಮಂಗಳೂರು, ಸುರತ್ಕಲ್, ಪಣಂಬೂರು, ಕಾವೂರು, ಬರ್ಕೆ, ಮುಲ್ಕಿ, ಬಜಪೆ ಠಾಣೆಗಳಲ್ಲಿ ಕೊಲೆ. ಹಲ್ಲೆ: ಜೀವಬೆದರಿಕೆ ಸಹಿತ ಒಟ್ಟು 17 ಪ್ರಕರಣಗಳು ದಾಖಲಾಗಿರುತ್ತದೆ, ಆರೋಪಿಯ ಚಿತ್ತರಂಜನ್ ಪೂಜಾರಿ ವಿರುದ್ಧ ಸುರತ್ಕಲ್, ಮುಲ್ಕಿ ಕಾರ್ಕಳ ನಗರ ಠಾಣೆಗಳಲ್ಲಿ ಹಲ್ಲೆ, ಜೀವಬೆದರಿಕೆ, ಶಸ್ತ್ರಾಸ್ತ್ರ ಹಾಯ್ದೆ ಸಹಿತ ಒಟ್ಟು 05 ಪ್ರಕರಣಗಳು ದಾಖಲಾಗಿರುತ್ತದೆ,

ಆರೋಪಿ ಚೇತನ್ 9 ಚೇತು ಪಡೀಲ್ ವಿರುದ್ಧ ಕದ್ರಿ, ಬಜಪೆ, ಕಾವೂರ್ ಠಾಣೆಗಳಲ್ಲಿ ಕೊಲೆ, ಕಾರು ಸಹಿತ ಒಟ್ಟು 05 ಪ್ರಕರಣಗಳು ದಾಖಲಾಗಿರುತ್ತದೆ.

ಆರೋಪಿ ರಮೇಶ್ ಪೂಜಾರಿ ವಿರುದ್ದ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ 01 ಹಲ್ಲೆ ಪ್ರಕರಣ ಹಾಗೂ ದೀಕ್ಷಿತ್ ಶೆಟ್ಟಿ ವಿರುದ್ದ ಸುರತ್ಕಲ್ ಠಾಣೆಯಲ್ಲಿ 01 ಹಲ್ಲೆ ಪ್ರಕರಣ ದಾಖಲಾಗಿರುತ್ತದೆ.

ಬಂಧಿತ ಆರೋಪಿತರಿಂದ ಈಗಾಗಲೇ ಕೃತ್ಯಕ್ಕೆ ಮತ್ತು ಪರಾರಿಯಾಗಿ ಉಪಯೋಗಿಸಿದ ಮೂರು ಕಾರುಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಹಣಕಾಸಿನ ವ್ಯವಹಾರ ಮತ್ತು ವೈಯಕ್ತಿಕ ವೈಷಮ್ಯದಿಂದ ಈ ಕೊಲೆಯನ್ನು ಬೆಂಗಳೂರಿನಿಂದ ಬೆನ್ನಟ್ಟಿ ಬಂದು ಮಾಡುವುದು ಪ್ರಾರಂಭಿಕ ತನಿಖೆಯಿಂದ ತಿಳಿದು ಬಂದಿರುತ್ತದೆ,

ಬ್ರಹ್ಮಾವರ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರಾದ ಅನಂತಪದ್ಮನಾಭ, ವೃತ್ತ ಕಛೇರಿಯ ಸಿಬ್ಬಂದಿಗಳಾದ ಎಎಸ್ಐ ಕೃಷ್ಣಪ್ಪ, ಹೆಚ್.ಸಿ ವಾಸು ಪೂಜಾರಿ, ಗಣೇಶ್ ,ಪ್ರದೀಪ್, ಪಿಸಿ ರವಿ, ಚಾಲಕ ಶೇಖರ, ಉಡುಪಿ ಪೊಲೀಸ್ ವೃತ್ತ ನಿರೀಕ್ಷಕರಾದ ಮಂಜುನಾಥ, ಮಣಿಪಾಲ ಠಾಣೆಯ ಪೊಲೀಸ್ ನಿರೀಕ್ಷಕರಾದ ಮಂಜುನಾಥ, ಡಿಸಿಐಬಿ ಪೊಲೀಸ್ ನಿರೀಕ್ಷಕರಾದ ಮಂಜಪ್ಪ ಮತ್ತು ಕಾಪು ವೃತ್ತ ನಿರೀಕ್ಷಕರಾದ ಮಹೇಶ್ ಪ್ರಸಾದ್ ಹಾಗೂ ಅವರ ತಂಡ, ಬ್ರಹ್ಮಾವರ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ರಾಘವೇಂದ್ರ, ಸಿಬ್ಬಂದಿಗಳಾದ ದಿಲೀಪ್ ಸತೀಶ್, ಚಾಲಕ ಅಣ್ಣಪ್ಪ, ಕೋಟ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಸಂತೋಷ್ ಬಿ. ಚಾಲಕ ಮಂಜು, ಹಿರಿಯಡ್ಕ ಠಾಣಾ ಪಿಎಸ್ಐ ಸುಧಾಕರ ತೋನ್ಸೆ. ಸಿಬ್ಬಂದಿಗಳಾದೆ ಎಎಸ್ಐ ಗಂಗಪ್ಪ, ಜಯಂತ್, ಪರಮೇಶ್ವರ, ಸಿಬ್ಬಂದಿಯವರಾದ ದಿನೇಶ್, ರಘು, ಸಂತೋಷ, ಉದಯ ಕಾಮತ್, ಶಶಿ ಕುಮಾರ್, ನಿತಿನ್, ಹರೀಶ್, ಇಂದ್ರೇಶ್, ಭೀಮಪ್ಪ ಹಡಪದ ಚಾಲಕ ಆನಂದ ಆರೋಪಿತರನ್ನು ಪತ್ತೆ ಹಚ್ಚುವಲ್ಲಿ ಸಹಕರಿಸುತ್ತಾರೆ,
ಈ ಎಲ್ಲಾ ತಂಡದವರು ಪ್ರಕರಣದ ಆರೋಪಿಗಳ ಪತ್ತೆಗೆ ಸಹಕಾರಿಯಾಗಿದೆ ಆರೋಪಿಗಳು ಕೃತ್ಯ ನಡೆಸಿದ 24 ಗಂಟೆಯೊಳಗಾಗಿ ಬಂಧಿಸಲು ಸಾಧ್ಯವಾಗಿರುತ್ತದೆ.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಚಂದ್ರ, ಉಡುಪಿ ಡಿವೈಎಸ್ಪಿ ಜೈಶಂಕರ್, ಉಡುಪಿ ಸಿಪಿಐ ಮಂಜುನಾಥ್, ಕಾಪು ಸಿಪಿಐ ಮಹೇಶ್ ಪ್ರಸಾದ್, ಬ್ರಹ್ಮಾವರ ಸಿಪಿಐ ಅನಂತಪದ್ಮನಾಭ, ಬ್ರಹ್ಮಾವರ ಪಿಎಸ್ ಐ ರಾಘವೇಂದ್ರ, ಹಿರಿಯಡ್ಕ ಪಿಎಸ್ ಐ ಸುಧಾಕರ ತೋನ್ಸೆ ಉಪಸ್ಥಿತರಿದ್ದರು.


Spread the love