ಹರಿಯಾಣದಿಂದ ಕ್ಯಾಲಿಕಟ್ ಗೆ ಕೋಣಗಳ ಸಾಗಾಟ ನಾಲ್ವರ ಬಂಧನ

Spread the love

ಹರಿಯಾಣದಿಂದ ಕ್ಯಾಲಿಕಟ್ ಗೆ ಕೋಣಗಳ ಸಾಗಾಟ ನಾಲ್ವರ ಬಂಧನ

ಮಂಗಳೂರು: ಅಕ್ರಮವಾಗಿ ಕೋಣಗಳನ್ನು ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ ವೇಳೆ 24 ಕೋಣಗಳನ್ನ ರಕ್ಷಿಸುವುದರೊಂದಿಗೆ ನಾಲ್ವರನ್ನು ಕದ್ರಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಬಂಧಿತರನ್ನು ಹರಿಯಾಣ ನಿವಾಸಿಗಳಾದ ಲಾರಿ ಚಾಲಕ ರಾಜೇಂದರ್, ಕಮಲ್ ಕುಮಾರ್, ಸಂಜಯ್ ಕುಮಾರ್ ಮತ್ತು ಜೈಕಿಶನ್ ಎಂದು ಗುರುತಿಸಲಾಗಿದೆ.

ಶನಿವಾರ ಬೆಳಿಗ್ಗೆ ಲಾರಿಯಲ್ಲಿ ಕೇರಳ ರಾಜ್ಯಕ್ಕೆ ಅಕ್ರಮವಾಗಿ ಕೋಣಗಳನ್ನು ಸಾಗಾಟ ಮಾಡಲಾಗುತ್ತದೆ ಎಂಬ ಮಾಹಿತಿ ಅನ್ವಯ ಕದ್ರಿ ಪೊಲೀಸರು ದಾಳಿ ನಡೆಸಿದ್ದಲ್ಲೆ 24 ಕೋಣಗಳನ್ನು ವಶಪಡಿಸಿಕೊಂಡು ನಾಲ್ವರನ್ನು ಬಂಧಿಸಿದ್ದಾರೆ. ಕೋಣಗಳನ್ನು ಹರಿಯಾಣದಿಂದ ಕ್ಯಾಲಿಕಟ್ ಗೆ ಸಾಗಾಣಿಕೆ ಮಾಡುತ್ತಿದ್ದುದಾಗಿದೆ.

ಕಾರ್ಯಾಚರಣೆಯನ್ನು ಪೋಲಿಸ್ ಆಯುಕ್ತರು ಶ್ರೀ ಹರ್ಷ, IPS ರವರು, ಡಿಸಿಪಿ ಹನುಮಂತರಾಯ, ಲಕ್ಷ್ಮಿ ಗಣೇಶ್, ಎಸಿಪಿ ಭಾಸ್ಕರ ಒಕ್ಕಲಿಗ ಮಾರ್ಗದರ್ಶನ ಮಾಡಿದ್ದು ಕದ್ರಿ ಇನ್ಸ್ಪಪೆಕ್ಟರ್ ಶಾಂತಾರಾಮ, ಎಸೈ ಮಾರುತಿ, ನರೇಂದ್ರ, ಸಿಬ್ಬಂದಿಗಳು ಭಾಗವಹಿಸಿದ್ದಾರೆ.


Spread the love